Archive for ಜನವರಿ, 2010

ಬೆಂಗಳೂರು ಬಯೋ’ ಈಗ ’ಬೆಂಗಳೂರು ಇಂಡಿಯಾ ಬಯೋ’

ಜನವರಿ 20, 2010

ನೂರಕ್ಕೂ ಹೆಚ್ಚು ಜೈವಿಕತಂತ್ರಜ್ಞಾನ ವಲಯದ ಪರಿಣತರ ಹಾಜರಿ ಮತ್ತು ವಿಷಯ ಮಂಡನೆ

ಬೆಂಗಳೂರು, ೧೯ನೇ ಜನವರಿ, ೨೦೧೦: ಹತ್ತನೇ ಆವೃತ್ತಿಯ ’ಬೆಂಗಳೂರು ಬಯೋ’ ಈಗ ’ಬೆಂಗಳೂರು ಇಂಡಿಯಾ ಬಯೋ’ ಎಂಬ ನೂತನ ಹೆಸರಿನೊಂದಿಗೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಹೋಟೆಲ್ ಲಲಿತ್ ಅಶೋಕ್‌ದಲ್ಲಿ ೨೦೧೦ರ ಜೂನ್ ೨ ರಿಂದ ೪ರವರೆಗೆ ನಡೆಯಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳವನ್ನು  ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಷನ್ ಗ್ರೂಪ್ ಆನ್ ಬಯೋಟೆಕ್ನಾಲಜಿ ಮತ್ತು ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯೂನಿಕೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.
’ಕಳೆದ ವರ್ಷ ಆರ್ಥಿಕ ಹಿಂಜರಿತದ ಹೊರತಾಗಿಯೂ ’ಬೆಂಗಳೂರು ಬಯೋ-೨೦೦೯’ರ ಮೇಳಕ್ಕೆ ಅಭೂತಪೂರ್ವ ಪ್ರತ್ರಿಕ್ರಿಯೆ ವ್ಯಕ್ತವಾಗಿತ್ತು. ಜೈವಿಕ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಭಾರತ ಇಂದು ವಿಶ್ವದಾದ್ಯಂತ ಪ್ರಮುಖ ತಾಣವಾಗಿ ರೂಪುಗೊಂಡಿದೆ. ಅದರಲ್ಲೂ ಬೆಂಗಳೂರು, ಭಾರತ ಸೇರಿದಂತೆ ಜಾಗತಿಕ ನಕ್ಷೆಯಲ್ಲಿ ಪ್ರಧಾನವಾಗಿದೆ. ಹಾಗೆಯೇ, ಜೈವಿಕ ತಂತ್ರಜ್ಞಾನ ವಲಯದಲ್ಲಿ ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳಲು, ಹೊಸದನ್ನು ಅನ್ವೇಷಿಸಲು ಮತ್ತು ಸಹಭಾಗಿತ್ವಕ್ಕಾಗಿಯೂ ಬೆಂಗಳೂರು ಈಗ ಈ ವಲಯದವರ ನೆಚ್ಚಿನ ತಾಣವಾಗಿದೆ.  ’ಬೆಂಗಳೂರು ಬಯೋ- ೨೦೧೦’ ಭಾರತ ಸೇರಿದಂತೆ ಜಾಗತಿಕ ಜೈವಿಕ ತಂತ್ರಜ್ಞಾನ ವಲಯಕ್ಕೆ ಹೊಸ ವಹಿವಾಟನ್ನು ದೊರಕಿಸಿಕೊಡುವಲ್ಲಿ ವಿಶೇಷ ಪಾತ್ರ ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್ ಸಿ ಮನೋಳಿ ಅವರು ತಿಳಿಸಿದ್ದಾರೆ.
ಬಯೋ ಟೆಕ್ನಾಲಜಿ ಪರಿಣತ ತಜ್ಞ ವಾಗ್ಮಿಗಳು, ಸಂಶೋಧಕರು ’ಬೆಂಗಳೂರು ಬಯೋ-೨೦೧೦’ರಲ್ಲಿ ಪಾಲ್ಗೊಂಡು ತಮ್ಮ ಜ್ಞಾನಭಂಡಾರವನ್ನು ಇತರರೊಂದಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ, ಸಾಕಷ್ಟು ಅವಕಾಶಗಳ ಜಾಲಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು ೧೫೦ಕ್ಕೂ ಹೆಚ್ಚು ಪ್ರದರ್ಶಕರು, ೮೦೦ ನಿಯೋಗಗಳು ಮತ್ತು ಸುಮಾರು ೫೦೦೦ಕ್ಕೂ ಹೆಚ್ಚು ವಹಿವಾಟು ಪ್ರತಿನಿಧಿಗಳು ಈ ಬಾರಿಯ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯುಎಸ್‌ಎ, ಕೆನಡಾ, ಯುಕೆ, ಫ್ರಾನ್ಸ್, ಚಿಲಿ, ಕ್ಯೂಬಾ, ಮೆಕ್ಸಿಕೊ, ಜರ್ಮನಿ, ಸ್ಪೇನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಜಪಾನ್, ಸಿಂಗಾಪುರ, ಮಲೇಷ್ಯಾ, ಚೀನಾ, ಕೊರಿಯಾ ಮತ್ತು ಯುಎಇ ಸೇರಿದಂತೆ ಹಲವಾರು ದೇಶಗಳು ಭಾಗವಹಿಸಲಿವೆ.
’ಬೆಂಗಳೂರು ಬಯೋ-೨೦೧೦’ ಬಯೋಟೆಕ್ನಾಲಜಿ ಕ್ಷೇತ್ರದ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪರಿಣಿತರು ಹಾಗೂ ಔಷಧೀಯ ಉದ್ಯಮಿಗಳನ್ನು ಒಗ್ಗೂಡಿಸಲಿದೆ. ಶೈಕ್ಷಣಿಕ ಆರ್ಥಿಕ ವಲಯಗಳಲ್ಲಿಯೂ ಪರಸ್ಪರ ಸಂಬಂಧಗಳನ್ನು ಬೆಸೆಯಲಿದೆ. ಹಾಗೆಯೇ, ಈ ಬಾರಿಯ ಮೇಳವು ಅಂತರ್‌ರಾಷ್ಟ್ರೀಯ ವಸ್ತುಪ್ರದರ್ಶನ, ಮಲ್ಟಿ-ಟ್ರ್ಯಾಕ್ ಕಾನ್ಫರೆನ್ಸ್, ಬಯೋಪಾರ್ಟ್ನರಿಂಗ್ ಇಂಡಿಯಾ, ಸಿಇಒ ಕಾನ್‌ಕ್ಲೇವ್, ಬಯೋ-ಐಪಿ ಜೋನ್, ಪೋಸ್ಟರ್ ಸೆಷನ್ ಮತ್ತು ಬಯೋ ಎಕ್ಸ್‌ಲೆನ್ಸಿ ಪ್ರಶಸ್ತಿ ಪ್ರಧಾನ ಸಮಾರಂಭ ಈ ಬಾರಿಯ ಮೇಳದ ಹೈಲೈಟ್‌ಗಳಾಗಿರಲಿವೆ.
ಮಲ್ಟಿ ಟ್ರ್ಯಾಕ್ ಕಾನ್ಫರೆನ್ಸ್:  ಈ ವಿಭಾಗದಲ್ಲಿ ಪ್ರಮುಖವಾಗಿ ಭಾರತದೊಂದಿಗೆ ಜೈವಿಕ ಪಾಲುದಾರಿಕೆ, ಭಾರತದೊಂದಿಗೆ ಜೈವಿಕ ಸಹಭಾಗಿತ್ವ ಸೇರಿದಂತೆ ಜೈವಿಕ ಔಷಧಿಗಳು, ಜೈವಿಕ ಉತ್ಪಾದನಾ ರಂಗದಲ್ಲಿನ ಅವಕಾಶಗಳು ಮತ್ತು ಜಾಗತಿಕ ಕಾಯ್ದೆಯೊಂದಿಗೆ ಹಾರ್ಮೋನೈಜೇಷನ್ ಕುರಿತಂತೆ ಪ್ರಮುಖವಾಗಿ ಒತ್ತು ನೀಡಲಾಗುವುದು. ವಿಷನ್ ೨೦೧೫ ಮುಂದಾಳತ್ವ ಸರಣಿಯು ಭಾರತ ಮತ್ತು ಜಾಗತಿಕ ಸ್ಥರದಲ್ಲಿ ಜೈವಿಕತಂತ್ರಜ್ಞಾನ ಉದ್ದಿಮೆಯಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಲಿದೆ. ಹಾಗೆಯೇ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕಿರುವ ಯಶಸ್ವಿ ಮಾರ್ಗಗಳ ಮನವರಿಕೆ ಮಾಡಿಕೊಡಲಿದೆ. ಆಹಾರ ಭದ್ರತೆ, ಹಸಿರು ಜೈವಿಕತಂತ್ರಜ್ಞಾನ ಮತ್ತು ಜೈವಿಕಇಂಧನ /ಶಕ್ತಿಗಳನ್ನು ಕೇಂದ್ರೀಕರಿಸಿಕೊಂಡು ಕೃಷಿ ಜೈವಿಕ ದಿನವನ್ನು (ಅಗ್ರಿಬಯೋಟೆಕ್ ಡೇ) ಮತ್ತು ಪರಿಚಯಿಸಲು ಉದ್ದೇಶಿಸಲಾಗಿದೆ.

ಬಯೋ ಪಾರ್ಟ್ನರಿಂಗ್‌ಗೆ ಕಳೆದ ವರ್ಷ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ೬೦೦ಕ್ಕೂ ಹೆಚ್ಚು ಒನ್-ಟು-ಒನ್ ಸಭೆಗಳನ್ನು ಇದರಡಿ ಆಯೋಜಿಸಲಾಗಿತ್ತು. ಈಗ ಇನ್ನಷ್ಟು ವಿಸ್ತೃತ ರೂಪದಲ್ಲಿ ಇದನ್ನು ಮತ್ತೆ ಪರಿಚಯಿಸಲಾಗುತ್ತಿದೆ. ಅಮೆರಿಕದ ಟೆಕ್ನಾಲಜಿ ವಿಷನ್ ಗ್ರೂಪ್, ಎಂಎಂ ಆಕ್ಟೀವ್ ಸಹಭಾಗಿತ್ವದಲ್ಲಿ ಬಯೋರ್ಪಾಟ್ನರಿಂಗ್ ಇಂಡಿಯಾ (ಬಿಪಿಐ) ವನ್ನು ಆಯೋಜಿಸುತ್ತಿದೆ. ಇದರಿಂದ ಭಾರತ ಸೇರಿದಂತೆ ವಿದೇಶಿ ಕಂಪನಿಗಳಿಗೆ ಒನ್-ಟು-ಒನ್ ವಹಿವಾಟು ಸಭೆಗಳನ್ನು ಆಯೋಜಿಸಲು ಇದು ಸೂಕ್ತವೇದಿಕೆಯಾಗಲಿದೆ.
ಟ್ರೇಡ್ ಷೋ: ಈ ಅಂತರರಾಷ್ಟ್ರೀಯ ಟ್ರೇಡ್ ಷೋ ಬಯೋ ತಂತ್ರಜ್ಞಾನದ ವೃತ್ತಿನಿರತರನ್ನು ಒಂದೆಡೆ ಸೇರಿಸುವ ಬೃಹತ್ ಷೋ ಆಗಿದೆ. ಅರ್ಥಪೂರ್ಣ ಸಂವಾದಗಳು ಹಾಗೂ ವ್ಯವಹಾರಗಳನ್ನು ಏರ್ಪಡಿಸುವ ಮೇಳವಾಗಿದೆ. ಈ ವರ್ಷ ಸಮಾವೇಶದಲ್ಲಿ ಪಾಲ್ಗೋಳ್ಳುತ್ತಿರುವ ದೇಶ ಮತ್ತು ವಿದೇಶದ ಪ್ರದರ್ಶಕರು ಜೈವಿಕ ಔಷಧಿಗಳು, ಬಯೋ-ಇನ್‌ರ್ಫಾಮಟಿಕ್ಸ್, ಜೈವಿಕ- ವೈದ್ಯಕೀಯ ಉಪಕರಣಗಳು, ಜೈವಿಕ- ಕೃಷಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿವೆ. ದೇಶದ ಪ್ರಮುಖ ಜೈವಿಕ ರಾಜ್ಯಗಳು ಸಹ ಇದರಲ್ಲಿ ಪಾಲ್ಗೊಳ್ಳುತ್ತಿವೆ. ದೇಶ-ವಿದೇಶದ ೧೫೦ಕ್ಕೂ ಹೆಚ್ಚು ಕಂಪನಿಗಳು ಈ ಟ್ರೇಡ್ ಷೋನದಲ್ಲಿ ಪಾಲ್ಗೋಳ್ಳುತ್ತಿವೆ.
ಸಿಇಒ ಕಾನ್‌ಕ್ಲೇವ್: ಬೆಂಗಳೂರು ಬಯೋದ ಮೊದಲ ದಿನದ ಸಮಾವೇಶದಲ್ಲಿ ವಿವಿಧ ವೃತ್ತಿನಿರತರ ಉನ್ನತ ಮಟ್ಟದ ಸಮಾವೇಶವಾಗುವುದಕ್ಕೆ ಸಾಕ್ಷಿಯಾಗಲಿದೆ. ಸಿಇಒ, ಆರ್ & ಡಿ ಮುಖ್ಯಸ್ಥರು, ನೀತಿ ನಿರೂಪಕರು, ಬಂಡವಾಳ ಮಾರುಕಟ್ಟೆ, ಹೂಡಿಕೆದಾರರು ಸೇರಿದಂತೆ ಹಲವಾರು ವಿಷಯಗಳನ್ನು ಜೈವಿಕ ಉದ್ದಿಮೆಯಲ್ಲಿರುವ ಪ್ರಮುಖ ಸಿಇಒಗಳು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಬಯೋ ಐಪಿ ಜೋನ್: ಕಳೆದ ಬಾರಿ ಆಯೋಜಿಸಿದ್ದ ಬಯೊ ಐಪಿ ವಲಯಕ್ಕೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯೋಜಕರು ಈಬಾರಿಯೂ ಇದನ್ನು ಬೆಂಗಳೂರು ಬಯೋ ೨೦೧೦ರಲ್ಲಿ ಪರಿಚಯಿಸಿರುವುದು ವಿಶೇಷವಾಗಿದೆ. ಇದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮುಂಚೂಣಿ ಐಪಿ ಫರ್ಮ್‌ಗಳನ್ನು ಬಯೋಟೆಕ್ ಕ್ಷೇತ್ರಗಳಲ್ಲಿ ಸಮಾನ ಹಿತಾಸಕ್ತಿಗಳನ್ನು ಹೊಂದಿರುವ ಕಂಪನಿಗಳ ಮುಖಾಮುಖಿ ಭೇಟಿಯನ್ನು ಏರ್ಪಡಿಸುವುದಾಗಿದೆ. ಪರವಾನಿಗೆ, ಮೌಲ್ಯೀಕರಣ, ಪೇಟೆಂಟ್ಸ್, ಟ್ರೇಡ್‌ಮಾರ್ಕ್, ಕಾಪಿರೈಟ್ ಮುಂತಾದವುಗಳ ಬಗ್ಗೆ ವಿಷಯ ತತ್ಞರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಬಯೋ ಶ್ರೇಷ್ಠ ಪ್ರಶಸ್ತಿ: ಜೈವಿಕ ಕಂಪನಿಯಾಗಿ ಮತ್ತು ವೈಯಕ್ತಿಕವಾಗಿ ಜೈವಿಕ ತಂತ್ರಜ್ಞಾನ ವಲಯಕ್ಕೆ ನೀಡಿದ ಅರ್ಪೂವ ಕೊಡುಗೆಯನ್ನು ಸ್ಮರಿಸಿ ಶ್ರೇಷ್ಠ ಸಾಧಕರಿಗೆ ಅರ್ಹ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರದರ್ಶಕರ ಪ್ರಶಸ್ತಿ ಮತ್ತು ಪೋಸ್ಟರ್ ಪ್ರಶಸ್ತಿಗಳನ್ನು ಕಾರ್ಯಕ್ರಮದ ವೇಳೆ ನೀಡಲಾಗುವುದು.
ಪೋಸ್ಟರ್ ಸೆಶನ್: ಬೆಂಗಳೂರು ಬಯೋ ಪೋಸ್ಟರ್ ಸೆಶನ್ ’ವಾಕ್‌ಅವೇ ಆಫ್ ಡಿಸ್ಕವರಿ’ಗೆ ವೇದಿಕೆಯಾಗಲಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುವ, ಆರ್ ಅಂಡ್ ಡಿ ಲ್ಯಾಬ್ಸ್, ಹಾಗೂ ಸರ್ಕಾರಿ ಇಲಾಖೆಗಳಲ್ಲಿರುವ, ಖಾಸಗಿ ವಲಯದಲ್ಲಿರುವ ನೂರಕ್ಕೂ ಹೆಚ್ಚು ಯುವ ಸಂಶೋಧಕರಿಗೆ ವಿಜ್ಞಾನಿಗಳಿಗೆ, ತಂತ್ರಜ್ಞಾನಿಗಳಿಗೆ ಇದೊಂದು ವಿಶೇಷ ವೇದಿಕೆಯಾಗಲಿದೆ. ಬಯೋಟೆಕ್ನಾಲಜಿ, ಕೃಷಿ, ಪರಿಸರ, ಆರೋಗ್ಯ ಸಂರಕ್ಷಣೆಯ ಬಗ್ಗೆ ಅವರ ಸಂಶೋಧನೆ ಹಾಗೂ ಪ್ರೊಜೆಕ್ಟ್‌ಗಳನ್ನು ಪ್ರಸ್ತುತಪಡಿಸಬಹುದಾಗಿದೆ. ವಿಶ್ವದ ಅತಿ ಉನ್ನತ ಉದ್ಯಮಿಗಳೊಡನೆ ಚರ್ಚಿಸಲು ಮತ್ತು ವಿಚಾರ ವಿನಿಯಮ ಮಾಡಿಕೊಳ್ಳಲು ಹಾಗೂ ಭಾರತೀಯ ಹಾಗೂ ಜಾಗತಿಕ ಬಂಡವಾಳಗಾರರೊಂದಿಗೆ ಸಂವಾದ ಮಾಡುವ ಅವಕಾಶ ನೀಡುತ್ತದೆ. ಸೃಜನಶೀಲ, ಆಧುನಿಕ ಸ್ಪರ್ಶವಿರುವ, ಹೊಸ ಐಡಿಯಾಗಳಿರುವ, ವಾಣಿಜ್ಯ ಕ್ಷಮತೆ ಇರುವ ಮುಖ್ಯವಾಗಿ ಸ್ವಂತಿಕೆ ಇರುವ ಪೋಸ್ಟರ್‌ಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಸಂಪಾದಕೀಯ ಹೆಚ್ಚಿನ ಮಾಹಿತಿಗೆ
ರವಿಕುಮಾರ – ಈಕ್ವೇಟರ್ ಕಮ್ಯುನಿಕೇಶನ್ಸ್
ಮೊಬೈಲ್: +೯೧ ೯೯೬೪೬ ೧೬೫೮೯, ಇಮೇಲ್: ravi@equatorpr.net

“Bangalore Bio” is now “Bangalore India Bio”

Bangalore – 19th January 2010: Department of Information Technology, Bio-Technology and Science & Technology, Government of Karnataka, Vision Group on Biotechnology and MM Activ Sci-Tech Communications today announced that the 10th edition of Bangalore Bio, now Bangalore India Bio is scheduled from June 2 – 4, 2010 at Hotel Lalit Ashok, Bangalore, India.

“Last year we saw a tremendous response in-spite of the recession. India is a very important destination for the biotech industry worldwide. Over the years, Bangalore Bio has turned out to be a platform for the Indian and International Biotech Industry to develop strategic alliances and is being recognised as a hub for innovations & collaborations. Bangalore India Bio 2010 will play a major role in business development for India in the global biotech arena”. Therefore, Bangalore Bio is now most aptly renamed “Bangalore India Bio,”said Mr. Ashok Kumar C. Manoli, Principal Secretary to Government, Department of IT, Biotechnology and S&T, Government of Karnataka.

Eminent global experts from the Industry, Research and Regulatory spheres will participate in Bangalore India Bio 2010 enabling knowledge sharing and creating networking opportunities. Over 150 exhibitors, 800 delegates & about 5000 business visitors from across the World and India are expected to participate in Bangalore India Bio 2010. Countries expected to participate in the 2010 event are USA, Canada, UK, France, Chile, Cuba, Mexico, Germany, Spain, Australia, New Zealand, South Africa, Japan, Singapore, Malaysia, China, Korea & UAE.

Bangalore India Bio will consist of an International Exhibition, Multi-Track Conference, BioPartnering India, CEO Conclave, Bio-IP Zone, Poster Session and Bio-Excellence Awards Function.

The Multi-Track Conference will address focus areas on BioPartnering India, Bio Collaborations with India, Biopharmaceuticals, Optimizing Biomanufacturing and Harmonization with Global Regulations. Vision 2015 Leadership Series will bring the captains of the Biotech Industry from India and overseas, creating a roadmap for India to succeed in global market. Agribiotech Day is re-introduced with focus on Biotechnology for Food Security, Green Biotechnology and Bioenergy / Biofuels.

After the phenomenal success of last year with over 600 scheduled one-to-one meetings, BioPartnering is back with more vigor in an enhanced format. Technology Vision Group, USA in collaboration with MM Activ is planning  BioParterning India (BPI), which will facilitate one-to-one business meetings as well as podium presentations by Companies from India and overseas.

The Trade-Show at Bangalore Bio is the largest congregation of biotech fraternity to conduct meaningful interactions and business. Leading Exhibitors from all over the country, from various verticals like biopharmaceuticals, bio-suppliers, bio-informatics, bio-medical devices, agri-biotech companies, etc., will participate. Besides this, important biotech States of India will also participate in the Trade-Show. More than 150 Companies both from India and abroad are expected to participate in this Trade-Show.

CEO Conclave is an exclusive gathering of biotech community (CEOs, R&D Heads, Policy-makers, Venture Capitalists, Investment Bankers, etc). The highlight of the CEO Conclave is a Panel Discussion where the Panelists comprise of Industry Leaders.

After the success of the Bio-IP Zone initiative in the previous edition, Bangalore India Bio 2010 will enable leading National and International IP firms to come face-to-face with Biotech fraternity to address issues related to Licensing, Valuation, Patents, Trademarks & Copyright. It will also help Biotech companies to unlock the commercial value in their IPs.

Bio Excellence Awards will recognise the contribution of Biotech companies and Individuals for their outstanding achievements in the field of Biotechnology. Exhibitor Awards and Poster Awards will be presented during the programme.

The Poster Session – ‘Walkway of Discovery’ will provide an excellent opportunity to present Innovative idea, outstanding research or a groundbreaking study that has potential to make significant impact in the field of biotechnology. Young Researchers and Scientists from Universities, R&D Labs, Government Organisations and Corporate Sector are encouraged to participate in the Poster Session and connect with the best of Biotech Industry.

* * * * * *
For more information, please contact:
Rajiv Shankar, Equator Communications. Ph: +91 9880 893 823, e-mail: rajiv@equatorpr.net

Advertisements

ಜನವರಿ 20, 2010

ಕರ್ನಾಟಕ  ಸರ್ಕಾರ
ವಾರ್ತಾ ಇಲಾಖೆ
ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು 560 001. ದೂ. 22028032/34/ ಫ್ಯಾಕ್ಸ್ 22028041

ದಿನಾಂಕ:19-01-2010

ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ

೧.    ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹಾಗೂ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಜನವರಿ ೨೦ ರಂದು ಸಂಜೆ ೪.೦೦ ಗಂಟೆಗೆ ನಗರದ ಕೋರಮಂಗಲದ ಕೆ.ಎಸ್.ಆರ್.ಪಿ. ಕ್ರೀಡಾಂಗಣದಲ್ಲಿ ನಡೆಯಲಿರುವ ೨೦೦೯ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಗೃಹ  ಮತ್ತು ಮುಜರಾಯಿ ಸಚಿವ ಡಾ ವಿ.ಎಸ್. ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.  ಶ್ರೀಮತಿ ಶಾಂತ ವಿ. ಎಸ್. ಆಚಾರ್ಯ ಅವರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.

೨.    ಆರ್ಥಿಕ ಇಲಾಖೆಯ ವತಿಯಿಂದ ಜನವರಿ ೨೦ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನೂತನ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ಹಾಗೂ ನೂತನ ಪಿಂಚಣಿ ಯೋಜನೆ ಟ್ರಸ್ಟ್ ಮತ್ತು ಎನ್.ಎಸ್.ಡಿ.ಎಲ್. ಇವರ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

೩.    ಕಾರ್ಮಿಕ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಬಿ.ಎನ್. ಬಚ್ಚೇಗೌಡ ಅವರ ಅಧ್ಯಕ್ಷತೆಯಲ್ಲಿ ಜನವರಿ ೨೦ ರಂದು ೧೦.೩೦ ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೩ ನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣ, ಕೆಂಪೇಗೌಡ ರಸ್ತೆ, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದೆ.

೪.    ಕಾರ್ಮಿಕ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೂ
ಆದ ಶ್ರೀ ಬಿ. ಎನ್. ಬಚ್ಚೇಗೌಡ ಅವರು ಜನವರಿ ೨೦ ರಂದು ಕರ್ನಾಟಕ ಅಭಿವೃದ್ಧಿ    ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆಯ ಸಭೆಯ ನಂತರ ಮಧ್ಯಾಹ್ನ ೧.೧೫ ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.
ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು, ಛಾಯಾಗ್ರಾಹಕರು ಹಾಗೂ  ವಿದ್ಯುನ್ಮಾನ
ವೀಡಿಯೋಗ್ರಾಹಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೋರಿದೆ

ನಿರ್ದೇಶಕರ ಪರವಾಗಿ
ಪತ್ರಿಕಾ ಪ್ರಕಟಣೆ
ಜೂನ್‌ನಲ್ಲಿ ೧೦ನೇ ಜೈವಿಕ ತಂತ್ರಜ್ಞಾನ ಮೇಳ- ’ಬೆಂಗಳೂರು ಇಂಡಿಯಾ ಬಯೋ ೨೦೧೦’
ಬೆಂಗಳೂರು, ಜ. ೧೯ (ಕರ್ನಾಟಕ ವಾರ್ತೆ)- ಹತ್ತನೇ ಆವೃತ್ತಿಯ ’ಬೆಂಗಳೂರು ಬಯೋ’ ಈ ಬಾರಿ ’ಬೆಂಗಳೂರು ಇಂಡಿಯಾ ಬಯೋ’ ಎಂಬ ಹೆಸರಿನೊಂದಿಗೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ೨೦೧೦ರ ಜೂನ್ ೨ರಿಂದ ೪ರ ವರೆಗೆ ನಡೆಯಲಿದೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಯೋಟೆಕ್ನಾಲಜಿ ವಿಷನ್ ಗ್ರೂಪ್‌ನ ಅಧ್ಯಕ್ಷೆ ಡಾ. ಕಿರಣ್ ಮಜೂಮ್‌ದಾರ್ ಷಾ, ಅಗ್ರಿ ಬಯೋಟೆಕ್ ಮತ್ತು ಬೌದ್ಧಿಕ ಆಸ್ತಿ ಮತ್ತು ಪೇಟೆಂಟ್ ಕುರಿತ ‘ಬಯೋ ಐಪಿ ಝೋನ್’ ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ ಎಂದು ವಿವರಿಸಿದರು.
ಈ ಬಾರಿಯ ’ಬೆಂಗಳೂರು ಇಂಡಿಯಾ ಬಯೋ ೨೦೧೦’ ಕೇವಲ ಕರ್ನಾಟಕವಷ್ಟೇ ಅಲ್ಲ, ಭಾರತ ದೇಶದ ಬಯೋಟೆಕ್ನಾಲಜಿ ಕ್ಷೇತ್ರದ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ವಿಜ್ಞಾನಿಗಳು, ಈ ಕ್ಷೇತ್ರದ ದಾರ್ಶನಿಕರು, ವಿವಿಧ ಕಂಪೆನಿಗಳ ಸಿಇಓಗಳು, ವಿದ್ಯಾರ್ಥಿಗಳು, ಸಂಶೋಧಕರು ಭಾಗವಹಿಸಲಿದ್ದಾರೆ.
ಜೈವಿಕ ತಂತ್ರಜ್ಞಾನ ಭವಿಷ್ಯದ ತಂತ್ರಜ್ಞಾನವಲ್ಲ, ಇಂದಿನ ತಂತ್ರಜ್ಞಾನ. ಇಂದು ನಾವು ಎದುರಿಸುತ್ತಿರುವ ಆಹಾರ ಭದ್ರತೆ, ಆರೋಗ್ಯ, ನವೀಕೃತ ಇಂಧನ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸವಾಲುಗಳಿಗೆ ಜೈವಿಕ ತಂತ್ರಜ್ಞಾನ ಪರಿಹಾರ ಕಂಡು ಹಿಡಿಯಬಲ್ಲದು. ಜೈವಿಕ ತಂತ್ರಜ್ಞಾನ ಅತ್ಯಂತ ಸುರಕ್ಷಿತ ಹಾಗೂ ನಿಯಂತ್ರಿತ ಕ್ಷೇತ್ರ. ಬಿಟಿ ಬದನೆ ಕುರಿತು ಇಂದು ನಡೆಯುತ್ತಿರುವ ಸಾರ್ವಜನಿಕ ಚರ್ಚೆ ವೈಜ್ಞಾನಿಕ ತಳಹದಿಯ ಮೇಲೆ ನಡೆಯಬೇಕೆ ಹೊರತು ಭಾವನಾತ್ಮಕ ತಳಹದಿಯ ಮೇಲಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ಸಿ ಮನೋಳಿ ಅವರು ಮಾತನಾಡಿ, ಕಳೆದ ವರ್ಷ ಆರ್ಥಿಕ ಹಿಂಜರಿತದ ಹೊರತಾಗಿಯೂ ಬೆಂಗಳೂರು ಬಯೋ- ೨೦೦೯ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೈವಿಕ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಭಾರತ ಇಂದು ವಿಶ್ವದಾದ್ಯಂತ ಪ್ರಮುಖ ತಾಣವಾಗಿ ರೂಪುಗೊಂಡಿದೆ. ಜೈವಿಕ ತಂತ್ರಜ್ಞಾನ ವಲಯದಲ್ಲಿ ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳಲು, ಹೊಸದನ್ನು ಅನ್ವೇಷಿಸಲು ಮತ್ತು ಸಹಭಾಗಿತ್ವಕ್ಕಾಗಿಯೂ ಬೆಂಗಳೂರು ಈಗ ಈ ವಲಯದವರ ನೆಚ್ಚಿನ ತಾಣವಾಗಿದೆ. ಜೂನ್‌ನಲ್ಲಿ ನಡೆಯಲಿರುವ ಬೆಂಗಳೂರು ಇಂಡಿಯಾ ಬಯೋ -೨೦೧೦ ಭಾರತ ಸೇರಿದಂತೆ ಜಾಗತಿಕ ಜೈವಿಕ ತಂತ್ರಜ್ಞಾನ ವಲಯಕ್ಕೆ ಹೊಸ ವಹಿವಾಟನ್ನು ದೊರಕಿಸಿಕೊಡುವಲ್ಲಿ ವಿಶೇಷ ಪಾತ್ರವಹಿಸಲಿದೆ ಎಂದು ಆಶಿಸಿದರು.
ವಿಜ್ಞಾನಿಗಳು ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳ ನಡುವೆ ಸಂವಾದ ನಡೆಸಲು ಇದು ಅತ್ಯುತ್ತಮ ವೇದಿಕೆ. ಈ ಮೇಳದಲ್ಲಿ ಅಮೆರಿಕಾ, ಕೆನಡಾ, ಯುಕೆ, ಫ್ರಾನ್ಸ್, ಚಿಲಿ, ಕ್ಯೂಬಾ, ಮೆಕ್ಸಿಕೊ, ಜರ್ಮನಿ, ಸ್ಪೇನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಜಪಾನ್, ಸಿಂಗಾಪುರ, ಮಲೇಷ್ಯಾ, ಚೀನಾ, ಕೊರಿಯಾ ಮತ್ತು ಯುಎಇ ಸೇರಿದಂತೆ ಹಲವು ದೇಶಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.
ಜೈವಿಕ ತಂತ್ರಜ್ಞಾನ ನೀತಿ: ರಾಜ್ಯ ಸರ್ಕಾರ ಇತ್ತೀಚೆಗೆ ಅತ್ಯಂತ ಉಪಯುಕ್ತ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದ್ದು, ಈ ಬಗ್ಗೆ ಉದ್ಯಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೂ ಈಗ ಅನುಷ್ಠಾನದ ಹಂತದಲ್ಲಿದೆ. ಈ ನೀತಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಮುಂದಿನ ಜೂನ್ ವೇಳೆಗೆ ರಾಜ್ಯದಲ್ಲಿ ೧೦ ಬಿಟಿ ಫಿನಿಷಿಂಗ್ ಸ್ಕೂಲ್ ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಎರಡನೇ ಹಂತದ ನಗರಗಳಲ್ಲಿ ಜೈವಿಕ ತಂತ್ರಜ್ಞಾನ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಅವುಗಳಿಗೆ ಪ್ರೋತ್ಸಾಹಕ ಯೋಜನೆಗಳನ್ನೂ ಈ ನೀತಿಯಲ್ಲಿ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.
ವಿಷನ್‌ಗ್ರೂಪ್‌ನ ಸದಸ್ಯರಾದ ಪ್ರೊ. ಶರತ್‌ಚಂದ್ರ, ಡಾ. ನಾರಾಯಣನ್ ಹಾಗೂ ಡಾ. ಪದ್ಮನಾಭನ್, ಕೆಬಿಟ್ಸ್ ನಿರ್ದೇಶಕ ಶ್ರೀ ಅರವಿಂದ ಜನ್ನು ಮೊದಲಾದವರು ಉಪಸ್ಥಿತರಿದ್ದರು.

ಪರವಾನಿಗೆ ಭೂಮಾಪಕರ ಮುಷ್ಕರದಿಂದ ನಕ್ಷೆ ವಿತರಣೆಯಲ್ಲಿ ವಿಳಂಬವಾಗಿಲ್ಲ್ಲ- ರಾಜೀವ್ ಚಾವ್ಲಾ
ಬೆಂಗಳೂರು, ಜ ೧೯, (ಕರ್ನಾಟಕ ವಾರ್ತೆ) – ಪರವಾನಗಿ ಭೂಮಾಪಕರ ಮುಷ್ಕರದಿಂದ ಸಾರ್ವಜನಿಕರಿಗೆ ನಕ್ಷೆ ಸಿದ್ಧಪಡಿಸಿ ವಿತರಿಸುವ ಕಾರ್ಯದಲ್ಲಿ ವಿಳಂಬವಾಗುತ್ತಿಲ್ಲವೆಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರಾದ ಶ್ರೀ ರಾಜೀವ್ ಚಾವ್ಲಾ ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ೨೦ ದಿನಗಳಿಂದ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪರವಾನಗಿ ಭೂಮಾಪಕರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ನಕ್ಷೆ ಸಿದ್ಧಪಡಿಸಿ ವಿತರಿಸಲು ತೊಂದರೆಯಾಗುತ್ತಿದೆಯೆಂದು ಕೆಲವು ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಕಾರಣ ಪತ್ರಿಕಾಗೋಷ್ಠಿಯಲ್ಲಿ ಅವರು ಸ್ಪಷ್ಟನೆಯನ್ನು ನೀಡಿದರು.

ಪರವಾನಿಗೆ ಭೂಮಾಪಕರ ಮುಷ್ಕರದಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನಿಸಿ ಮಾನ್ಯ ಕಂದಾಯ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆಯನ್ನು ಏರ್ಪಡಿಸಲಾಗಿತ್ತು, ಹಾಗೂ ಎರಡು ಬಾರಿ ಪರವಾನಗಿ ಭೂಮಾಪಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು.  ಆದಾಗ್ಯೂ ಅವರು ಮುಷ್ಕರವನ್ನು ಕೈಬಿಡದ ಕಾರಣ ತಮ್ಮ ಇಲಾಖೆಯಲ್ಲಿರುವ ೨೦೦೦ ಭೂಮಾಪಕರು ಹಾಗೂ ಇತರೆ ಸಿಬ್ಬಂದಿಗಳನ್ನು ಬಳಸಿಕೊಂಡು ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ರೀತಿಯ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಪರವಾನಗಿ ಭೂಮಾಪಕರು ಮುಷ್ಕರ ಹೂಡಿದ ದಿನಾಂಕ ೨೯-೧೨-೨೦೦೯ ರಂದು ೨೯,೯೩೨ ಅರ್ಜಿಗಳು ಬಾಕಿ ಇದ್ದು ದಿನಾಂಕ ೨೯-೧೨-೨೦೦೯ ರಿಂದ ೧೮-೧-೨೦೧೦ ರವರೆಗಿನ ಅವಧಿಯಲ್ಲಿ ೧೫,೪೩೨ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ದಿನಾಂಕ ೨೯-೧೨-೨೦೦೯ ರಿಂದ ೧೮-೧-೨೦೧೦ ರವರೆಗೆ ೪,೮೩೩ ನಕ್ಷೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದ್ದು ೧೪,೫೬೧ ನಕ್ಷೆಗಳು ವಿವಿಧ  ಹಂತಗಳಲ್ಲಿ ಸಿದ್ಧವಾಗುತ್ತಿದ್ದು ಕೆಲವೇ ದಿನಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿರುವುದರಿಂದ ದಿನಾಂಕ ೧೮-೧-೨೦೧೦ ರವರೆವಿಗೆ ೨೫,೯೬೮ ಅರ್ಜಿಗಳು ಬಾಕಿ ಇರುವುದಾಗಿ ಅವರು ಮಾಹಿತಿ ನೀಡಿದರು.
ನೇರ ನೇಮಕಕ್ಕೆ ಅವಕಾಶವಿಲ್ಲ:
ಇಲಾಖೆಯಲ್ಲಿ ಖಾಲಿ ಇರುವ ೪೦೦ ಭೂಮಾಪಕರ ಹುದ್ದೆಗಳಿಗೆ ತಮ್ಮನ್ನೇ ನೇರವಾಗಿ ನೇಮಿಸಿಕೊಳ್ಳಬೇಕೆಂಬುದು ಪರವಾನಿಗೆ ಭೂಮಾಪಕರ ಪ್ರಮುಖ ಬೇಡಿಕೆಯಾಗಿದೆ.  ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ.  ಆದ್ದರಿಂದ ೨ ವರ್ಷ ಪರವಾನಿಗೆ ಭೂಮಾಪಕರಾಗಿ ತಾವೇ ನಿರ್ವಹಿಸಿರುವ ಎಲ್ಲರಿಗೂ ನೇಮಕಾತಿ ಸಮಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.   ಅವರಿಗೆ ಲಿಖಿತ ಪರೀಕ್ಷೆಯಲ್ಲಿ ಗಣಿತ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳದೇ ಅವರ ನಿರ್ವಹಿಸಿದ ಸೇವೆ ಕಾರ್ಯದ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ನಕ್ಷೆ ವಿತರಣೆಗೆ ತೊಂದರೆಯಾಗದಂತೆ ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಆದರೂ ನಕ್ಷೆ ಪಡೆಯುವಲ್ಲಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಕೂಡಲೇ ತಹಶೀಲ್ದಾರ್ ಅಥವಾ ಉಪ ವಿಭಾಗಾಧಿಕಾರಿ ಅಥವಾ ಭೂದಾಖಲೆಗಳ ಉಪ ನಿರ್ದೇಶಕರು ಅಥವಾ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ತಮ್ಮ ಅರ್ಜಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಜಾರಿಗೆ ತರಲಾಗಿರುವ ನೋಂದಣಿ ಪೂರ್ವನಕ್ಷೆ (೧೧ ಇ) ವಿತರಿಸುವ ಯೋಜನೆಯ ಹಿನ್ನೆಲೆ ಕುರಿತು, ಈ ನಕ್ಷೆಪಡೆಯುವ ವಿಧಾನ, ಪರವಾನಗಿ  ಭೂಮಾಪಕರು,  ಅವರ ಬೇಡಿಕೆ ಹಾಗೂ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ, ಇಲಾಖೆಯ ಉಪ ನಿರ್ದೇಶಕರಾದ ಶ್ರೀ ರುದ್ರೇಶ್ ಮಾಹಿತಿ ನೀಡಿದರು.

ಕೆಪಿಎಸ್‌ಸಿ ಯಿಂದ ಸಂದರ್ಶನ

ಬೆಂಗಳೂರು, ಜ ೧೯, (ಕರ್ನಾಟಕ ವಾರ್ತೆ) – ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ೨೧೪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ-ಕಮ್-ಗ್ರಾಮೀಣಾಭಿವೃದ್ಧಿ ಸಹಾಯಕರು ಗ್ರೇಡ್-೧ ರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫೆಬ್ರವರಿ ೧ ರಿಂದ ೯ ರವರೆಗೆ ಸಂದರ್ಶನವನ್ನು ಆಯೋಗದ ಕೇಂದ್ರ ಕಚೇರಿ, ಉದ್ಯೋಗ ಸೌಧ, ಬೆಂಗಳೂರು – ೧ ಇಲ್ಲಿ ನಡೆಸಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ.  ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ಪ್ರವರ್ಗವಾರು ಕೊನೆಯ ಅಭ್ಯರ್ಥಿಗಳು ಗಳಿಸಿರುವ ಪ್ರತಿಶತ ಅಂಕಗಳ ವಿವರಗಳನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ಆಯೋಗದ ವೆಬ್‌ಸೈಟ್  http://kpsc.kar.nic.in ನಲ್ಲಿ ನೋಡಬಹುದು.  ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರ ತಲುಪದೇ ಇದ್ದಲ್ಲಿ ಆಯೋಗದ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

ಶಿಕ್ಷಣ ಸಂವಾದ ನೇರ ಫೋನ್ ಇನ್ ಕಾರ್ಯಕ್ರಮ
ಬೆಂಗಳೂರು, ಜ ೧೯, (ಕರ್ನಾಟಕ ವಾರ್ತೆ) –  ಜನವರಿ ೨೧ ರಂದು ರಾತ್ರಿ ೯.೩೦ ರಿಂದ ೧೦.೩೦ ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆ ಅವರ ನೇತೃತ್ವದಲ್ಲಿ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ರಾಜ್ಯಾದ್ಯಂತ ಪ್ರಸಾರವಾಗುವ KSQAO ಎಂಬ ವಿಷಯದ ಬಗ್ಗೆ ಆಕಾಶವಾಣಿ ಶಿಕ್ಷಣ ಸಂವಾದ ನೇರಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಭಾಗವಹಿಸಿ ಪ್ರಶ್ನೆಗಳಿಗೆ ಉತ್ತರಿಸುವರು.
ಸಾರ್ವಜನಿಕರು, ಪೋಷಕರು, ತಜ್ಞರು, ಅಧಿಕಾರಿಗಳು ಹಾಗೂ ಇತರೆ ವರ್ಗದವರೂ ದೂರವಾಣಿ ಸಂಖ್ಯೆ 080-22370477.22370488.22370499 ರ ಮೂಲಕ ಸಂಪರ್ಕಿಸಿ ಪ್ರಶ್ನಿಸಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮತದಾರರ ಕರಡು ಪಟ್ಟಿ: ಆಕ್ಷೇಪಣೆಗೆ ಅವಕಾಶ

ಜನವರಿ 20, 2010

ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)- ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮತದಾರರ ಕರಡು ಪಟ್ಟಿ ಸಿದ್ಧವಾಗಿದ್ದು, ಜ.೧೯ರಂದು ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರ ಹೋಬಳಿ,ಕಂದಾಯ ನಿರೀಕ್ಷಕರ ಮತ್ತು ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ. ಈ ಸಂಬಂಧ ಹಕ್ಕು ಹಾಗೂ ಆಕ್ಷೇಪಣೆಯನ್ನು ಮಂಗಳೂರು ತಾಲೂಕು ಕಚೇರಿಗೆ ಸಲ್ಲಿಸಬಹುದಾಗಿದ್ದು, ಆಕ್ಷೇಪಣೆ ಸಲ್ಲಿಸಲು ೩.೨.೧೦ ಕೊನೆಯದಿನ ಎಂದು ಮಂಗಳೂರು ತಾಲೂಕು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸ್ತೆ ಸಂಚಾರ ಗಣತಿ ಸಮೀಕ್ಷೆ
ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ ವಿನ್ಯಾಸಗೊಳಿಸಲು ಅವಶ್ಯಕವಾಗಿರುವ ಹಾಗೂ ರಸ್ತೆಗಳನ್ನು ಏಕಪಥ,ದ್ವಿಪಥ,ಚತುಷ್ಪಥ ಎಂದು ವಿಭಜಿಸಲು ಹಾಗೂ ವಾಹನ ಸಂಚಾರ ದಟ್ಟಣೆಯನ್ನು ತಿಳಿಯಲು ರಸ್ತೆ ಸಂಚಾರ ಗಣತಿಕೇಂದ್ರ ಆರಂಭಿಸಲಾಗಿದೆ ಎಂದು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಂಗಳೂರು ವರ್ತುಲದ ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ ತಿಳಿಸಿದ್ದಾರೆ.
ಫೆ.೧೭ರ ಬೆಳಗ್ಗೆ ೬ ಗಂಟೆಯಿಂದ ೨೪ರ ಬೆ.೬ ಗಂಟೆಯವರೆಗೆ ಸತತವಾಗಿ ಏಳು ದಿನಗಳ ಕಾಲ ಸಮೀಕ್ಷೆ ನಡೆಯಲಿದೆ.
ಜನವರಿ ತಿಂಗಳ ಪಡಿತರ ವಿತರಣೆ
ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)- ೨೦೧೦ರ ಸಾಲಿನ ಜನವರಿ ತಿಂಗಳ ಪಡಿತರ ವಿತರಣೆಯಾಗಿದ್ದು, ಪಡಿತರ ಚೀಟಿದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಂದ ೩೦.೧.೧೦ರೊಳಗೆ ಪಡಿತರ ಸಾಮಗ್ರಿ ಖರೀದಿಸುವಂತೆ ದಕ್ಷಿಣ ಕನ್ನಡ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತ್ಯೋದಯ ಅನ್ನ ಯೋಜನೆಯಡಿ ಕೆ.ಜಿ.ಗೆ ೩ ರೂ.ಗಳಂತೆ ೨೯ಕೆ.ಜಿ ಅಕ್ಕಿ ಮತ್ತು ಕೆ.ಜಿ.ಗೆ ೨ ರೂ.ನಂತೆ ೬ ಕೆ.ಜಿ.ಗೋಧಿ ವಿತರಿಸಲಾಗುವುದು. ಅಕ್ಷಯ ಪಡಿತರ ಚೀಟಿದಾರರಿಗೆ ೧ಯೂನಿಟ್ ಗೆ ೪ ಕೆಜಿಯಂತೆ ಅಕ್ಕಿ ಗರಿಷ್ಠ ಪ್ರಮಾಣ ೨೦ ಕೆ.ಜಿ., ಹಾಗೂ ೩೧.೧೨.೦೯ರವರೆಗೆ ವಿತರಣೆಯಾಗಿರುವ ನೆಮ್ಮದಿ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ಗೋಧಿ ೧ ಕೆ.ಜಿ. ೩ಯೂನಿಟ್ ಗೆ ೨ ಕೆ.ಜಿ., ೪,೫ ಮತ್ತು ಹೆಚ್ಚಿನ ಯೂನಿಟ್ ಗಳಿಗೆ ೩ ಕೆ.ಜಿ., ಕೆ.ಜಿ.ಗೆ ೩ ರೂ.ಗಳಂತೆ ನೀಡಲಾಗುವುದು. ಸಕ್ಕರೆ ಕೆ.ಜಿ.ಗೆ ೧೩.೫೦ಯಂತೆ ಪಡಿತರ ಚೀಟಿಯೊಂದಕ್ಕೆ ೧ಕೆ.ಜಿ ವಿತರಿಸಲಾಗುವುದು.
ಅಡುಗೆ ಅನಿಲ ರಹಿತ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ೬ ಲೀ.,ನಗರಪ್ರದೇಶದಲ್ಲಿ ೫ಲೀ.,ಗ್ರಾಮಾಂತರ ಪ್ರದೇಶದಲ್ಲಿ ೩ಲೀ.,ಏಕಸದಸ್ಯ ಪಡಿತರ ಚೀಟಿದಾರರಿಗೆ ೨ಲೀ., ಪಡಿತರ ಸೀಮೆಎಣ್ಣೆ ಲೀಟರೊಂದರ ದರ ೯.೨೦ ರೂ., ದ.ಕ ಜಿಲ್ಲಾ ಗ್ರಾಮಾಂತರ ಪ್ರದೇಶಕ್ಕೆ ೯.೫೦ ಲೀಟರ್ ಬಿಡುಗಡೆಯಾಗಿದೆ.

ಆಡಳಿತ ಕನ್ನಡ ತರಬೇತಿ
ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)-ಕರ್ನಾಟಕ ಸರ್ಕಾರ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡವನ್ನು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅನುಕೂಲವಾಗುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು,ಸಿಬ್ಬಂದಿಗಳಿಗೆ ಆಡಳಿತದಲ್ಲಿ ಕನ್ನಡ ಎಂಬ ವಿಷಯದಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವುಗಳ ಸಹಯೋಗದೊಂದಿಗೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ೨೧ರಿಂದ ೨೩ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ೩ ದಿನಗಳ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಈ ಕಾರ್ಯ ಶಿಬಿರವನ್ನು ರಾಜ್ಯದ ಮುಖ್ಯಮಂತ್ರಿಗಳು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜ.೨೧ರಂದು ಮಧ್ಯಾಹ್ನ ೧೨.೩೦ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಉದ್ಘಾಟಿಸುವರು ಎಂದು ಜಿಲ್ಲಾ ತರಬೇತಿ ಸಂಸ್ಥೇ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ.ಪಂ ತ್ರೈಮಾಸಿಕ ಕೆ.ಡಿ.ಪಿ
ಚಿತ್ರದುರ್ಗ,ಜ.೧೯-
ಚಿತ್ರದುರ್ಗ ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಶಾಸಕರಾದ ಎಸ್.ಕೆ.ಬಸವರಾಜನ್‌ರವರ ಅಧ್ಯಕ್ಷತೆಯಲ್ಲಿ ಜನವರಿ ೨೫ ರಂದು ಬೆಳಿಗ್ಗೆ ೧೧ ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. ========
ಹೆಚ್ಚುವರಿ ಕೊಠಡಿಗಳ ಉದ್ಘಾಟನೆ
ಚಿತ್ರದುರ್ಗ,ಜ.೧೯-
ಚಿತ್ರದುರ್ಗ ತಾಲ್ಲೂಕಿನ ಪಳಿಕಿಹಳ್ಳಿ ಶಾಲೆಯ ಹೆಚ್ಚುವರಿ ಕೊಠಡಿ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಹಾಗೂ ರಸ್ತೆ ದುರಸ್ಥಿ ಕಾಮಗಾರಿ ಭೂಮಿ ಪೂಜೆಯು ಜನವರಿ ೨೧ ರಂದು ಮಧ್ಯಾಹ್ನ ೧೨.೩೦ ಕ್ಕೆ ಪಳಿಕಿಹಳ್ಳಿಯಲ್ಲಿ ಜರುಗಲಿದೆ.
ಶಾಸಕರಾದ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ಕೊಠಡಿ ಉದ್ಘಾಟಿಸುವರು. ಸಂಸದರಾದ ಜನಾರ್ಧನಸ್ವಾಮಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಬೋಗೇಶ್, ತಾ.ಪಂ. ಸದಸ್ಯೆ ರತ್ನಮ್ಮ ಹನುಮಂತಪ್ಪ, ಎ.ಪಿ.ಎಂ.ಸಿ ಸದಸ್ಯ ಸಿದ್ದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಶಂಕರಪ್ಪ ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
========
ಪ್ರಧಾನಮಂತ್ರಿಗಳ ೧೫ ಅಂಶ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಸೂಚನೆ
ಚಿತ್ರದುರ್ಗ,ಜ.೧೯-
ಅಲ್ಪಸಂಖ್ಯಾತರ ಜನಾಂಗದ ಅಭಿವೃದ್ದಿ ಹಾಗೂ ಏಳಿಗೆಗಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿಗಳ ೧೫ ಅಂಶ ಕಾರ್ಯಕ್ರಮಗಳು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳೂ ೧೫ ಅಂಶ ಕಾರ್ಯಕ್ರಮಗಳ ಪ್ರಗತಿ ಕುರಿತು ಪರಿಶೀಲಿಸಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದು ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಶ್ರೀ ಖುಸ್ರೋ ಖುರೇಶಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿಗಳ ೧೫ ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸುತ್ತಾ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರ ಜನರ ಕಲ್ಯಾಣಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೊಂಡು ಅವರಿಗೆ ತಲುಪಿದಾಗ ಅವರ ಏಳಿಗೆ ಸಾಧ್ಯವೆಂದು ತಿಳಿಸಿ, ವಿವಿಧ ಇಲಾಖೆಗಳ ಯೋಜನೆ ಕಾರ್ಯಕ್ರಮಗಳಲ್ಲಿ ನಿಗಧಿಪಡಿಸಿರುವ ಗುರಿಯನ್ನು ಸಾಧಿಸಬೇಕು. ಈ ಬಗ್ಗೆ ಅಧಿಕಾರಿಗಳು ಆಸಕ್ತಿ ವಹಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.
ಶೈಕ್ಷಣಿಕ ವಲಯದಲ್ಲಿ ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯ ಸವಲತ್ತುಗಳನ್ನು ಕಲ್ಪಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಉರ್ದು ಶಾಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿ ಶಾಲಾ ಕಟ್ಟಡ, ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಕಡೆ ಉರ್ದು ಶಾಲೆಗಳಲ್ಲಿ ಸರಿಯಾದ ರೀತಿಯ ಕೊಠಡಿ, ಪೀಠೋಪಕರಣ, ಶೌಚಾಲಯ ಮುಂತಾದ ಅಗತ್ಯತೆಗಳು ಸುವ್ಯವಸ್ಥಿತವಾಗಿರುವುದಿಲ್ಲ. ಇದನ್ನೆಲ್ಲಾ ಗಮನಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. ಸರ್ವಶಿಕ್ಷಾ ಅಭಿಯಾನ ಯೋಜನೆಯಡಿ ಉರ್ದು ಶಾಲೆಗಳ ದುರಸ್ತಿ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿರುವುದಾಗಿ ಉಪನಿರ್ದೇಶಕರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು ೧೮೧೪ ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ ೧೦೯ ಉರ್ದು ಅಂಗನವಾಡಿ ಕೇಂದ್ರಗಳಿವೆ. ಈಗ ಹೊಸದಾಗಿ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳಲ್ಲಿ ೨೮ ಉರ್ದು ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಅಲ್ಪಸಂಖ್ಯಾತರ ೬೬ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಯೋಜನೆ ಜಾರಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದ ೯೫೯ ಫಲಾನುಭವಿಗಳಿಗೆ ವಿಮಾ ಬಾಂಡ್‌ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಲಯ ಹಾಗೂ ವಸತಿಶಾಲೆಗಳಲ್ಲಿ ಅಗತ್ಯ ಮೂ ಸೌಕರ್ಯ ಕಲ್ಪಿಸಬೇಕೆಂದು, ಊಟ, ವಸತಿ, ನೀರು, ಶೌಚಾಲಯ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಈಕಡೆ ಹೆಚ್ಚಿನ ಗಮನಹರಿಸಿ ಸುವ್ಯವಸ್ಥಿತವಾಗಿ ಇರುವಂತೆ ಕ್ರಮ ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷರು ಸೂಚಿಸಿದರು.
ಇಲಾಖೆ ವತಿಯಿಂದ ಕಂಪ್ಯೂಟರ್, ನರ್ಸಿಂಗ್ ಇತ್ಯಾದಿಗಳಲ್ಲಿ ನೀಡುತ್ತಿರುವ ತರಬೇತಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಆಯೋಗದ ಸದಸ್ಯ ಕಾರ್ಯದರ್ಶಿ ಶ್ರೀ ಅವೇಕ್ ಅಹಮದ್ ಅವರು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆ ಗುರಿ ೪೬ ಇಟ್ಟುಕೊಂಡಿದ್ದು, ಈವರೆಗೆ ೩೬ ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ಸಣ್ಣ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಲಾನಯನ ಅಭಿವೃದ್ದಿ ಯೋಜನೆಯಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ೫೪೮ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಜಿಲ್ಲಾ ಜಲಾನಯನ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಡಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಸಹ ಅಲ್ಪಸಂಖ್ಯಾತರ ಜನಾಂಗದ ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಅವರು ತಿಳಿಸಿದರು.
ಪರಿಶೀಲನಾ ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ಶ್ರೀ ಪೀರ್‌ಖಾನ್, ಶ್ರೀಮತಿ ಶಾಯಿದಾಬೇಗಂ, ಶ್ರೀಮತಿ ಪದ್ಮಾವತಿ, ಶ್ರೀ ಅತೀಕ್ ಅಹಮದ್, ಕಾರ್ಯದರ್ಶಿ ಶ್ರೀ ಮಹಿವುದ್ದೀನ್, ಆಯೋಗದ ಅಧಿಕಾರಿಗಳಾದ ಶ್ರೀ ಅಬ್ದುಲ್ ಅಸ್ಲಂ ಪಾಶಾ ಅವರುಗಳು ಉಪಸ್ಥಿತರಿದ್ದು ಪ್ರಗತಿ ಪರಿಶೀಲಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಂಗೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಶಿವರಾಮರೆಡ್ಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
========

ಕೃಷ್ಣದೇವರಾಯ ಪಟ್ಟಾಭಿಷೇಕ ಮಹೋತ್ಸವ ಹಂಪಿಯಲ್ಲಿ ೩ ದಿನಗಳ ಜನೋತ್ಸವ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೯ : ಶ್ರೀ ಕೃಷ್ಣದೇವರಾಯ ೫೦೦ ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಬರುವ ಜನವರಿ ೨೭ ರಿಂದ ೨೯ ರವರೆಗೆ ೩ ದಿನಗಳ ಕಾಲ ಹಂಪಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಹಾಗೂ ಪಟ್ಟಾಭಿಷೇಕ ಸಮಿತಿಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದಿಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಕರ್ನಾಟಕದ ಶ್ರೇಷ್ಠ ದೊರೆ , ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕದ ೫೦೦ ನೇ ವರ್ಷಾಚರಣೆಯ ಸಂಸ್ಮರಣೆಗಾಗಿ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದ್ದು ತನ್ಮೂಲಕ ಅನೇಕ ಚಟುವಟಿಕೆಗಳನ್ನು ಡಿಸೆಂಬರ್ ೨೦ ರಿಂದ ಪ್ರಾರಂಭಿಸಲಾಗಿದೆ . ಈ ಕುರಿತು ವೆಬ್‌ಸೈಟ್ ( ತಿತಿತಿ.ಞಡಿishಟಿಚಿಜevಚಿಡಿಚಿಥಿಚಿ.iಟಿ ) ಲೋಕಾರ್ಪಣೆ ಮಾಡಿದ್ದು , ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈಗಾಗಲೇ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ . ವಿಜಯನಗರ ವೈಭವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಠಿಯಿಂದ ೧೭೫ ತಾಲೂಕುಗಳಿಂದ ಉಚಿತ ಪ್ರವಾಸ ಏರ್ಪಡಿಸಿ ೧೦ ಸಾವಿರ ಮಕ್ಕಳಿಗೆ ಹಂಪಿ ದರ್ಶನ ಹಾಗೂ ವಿಜಯನಗರ ವೈಭವದ ಮಾಹಿತಿ ಒದಗಿಸಲಾಗಿದೆ . ಇದಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೃಷ್ಣದೇವರಾಯನ ವ್ಯಕ್ತಿ ಚಿತ್ರಣ ಹಾಗೂ ವಿಜಯನಗರ ವೈಭವ ಕುರಿತು ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ . ಇದರೊಂದಿಗೆ ವಿಚಾರಗೋಷ್ಠಿ ಹಾಗೂ ಉಪನ್ಯಾಸ ಮಾಲಿಕೆಗಳ ಮೂಲಕ ಗಂಭೀರ ಚಿಂತನೆಗೆ ಮುಂದಾಗಿರುವುದಾಗಿ ಸಚಿವ ಶ್ರೀ ಕಾಗೇರಿ ಅವರು ವಿವರಿಸಿದರು .
ಹಂಪಿಯಲ್ಲಿ ಜರುಗುವ ಮಹೋತ್ಸವದ ಸಮಾರಂಭಕ್ಕೆ ರಾಷ್ಟ್ರದ ಪ್ರಧಾನಿ ಹಾಗೂ ವಿದೇಶಿ ಗಣ್ಯರನ್ನು ಆಹ್ವಾನಿಸುವ ಮೂಲಕ ವಿಜಯನಗರ ಸಾಮ್ರಾಜ್ಯದ ಐತಿಹ್ಯವನ್ನು ಅರುಹಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಈ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಸಂಭ್ರಮ ಬಿಂಬಿಸುವ ಗ್ರಾಮೀಣ ಕ್ರೀಡಾಕೂಟ , ಸಾಹಿತ್ಯ ಚಿಂತನೆ , ಕವಿಗೋಷ್ಠಿ , ಚಿತ್ರಕಲೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು . ಈ ಮಹೋತ್ಸವದಂಗವಾಗಿ ಎರಡು ವಿಭಾಗದ ಚಟುವಟಿಕೆಗಳ ಮೂಲಕ ಜನಮನ ತಲುಪಲು ಯತ್ನಿಸುತ್ತಿದೆ . ಸಾಂಸ್ಕೃತಿಕ ಹಾಗೂ ಬೌದ್ದಿಕ ಚಿಂತನೆ ಮೂಲಕ ಈ ಸುವರ್ಣ ಸಾಮ್ರಾಜ್ಯದ ಮಹತ್ವ ಅನಾವರಣಗೊಳ್ಳಲಿದೆ ಹಾಗೂ ಈ ಗತ ವೈಭವದ ನೆನಪನ್ನು ಶಾಶ್ವತವಾಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಶ್ರೀ ಕಾಗೇರಿ ಈ ಮಹೋತ್ಸವ ಜನೋತ್ಸವವಾಗಿ ಆಚರಣೆಗೊಳ್ಳಲು ಜನಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಪಟ್ಟಾಭಿಷೇಕ ಸಮಿತಿ ಸದಸ್ಯರಾದ ಶ್ರೀ ಶ್ರೀನಿವಾಸ ರೆಡ್ಡಿ ಹಾಗೂ ಶ್ರೀ ಶ್ರೀಪಾದ , ಶ್ರೀ ದತ್ತಾ ಡೋರ್ಲೇ ಅವರುಗಳು ಉಪಸ್ಥಿತರಿದ್ದರು . ಪ್ರಾರಂಭದಲ್ಲಿ ಸಮಿತಿಯ ಸಂಚಾಲಕ ಕಾರ್ಯದರ್ಶಿ ಡಾ|| ವಿಷ್ಣುಕಾಂತ ಎಸ್. ಚಟ್‌ಪಲ್ಲಿ ಸ್ವಾಗತಿಸಿ ಮಹೋತ್ಸವದ ಉದ್ದೇಶ ವಿವರಿಸಿದರು .
-****************-

ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮಗಳಿಗಾಗಿ ೧೦೦ ಬಿ.ಪಿ.ಓ ಕೇಂದ್ರಗಳ ಸ್ಥಾಪನೆ

ಬೆಳಗಾವಿ:ಜನೇವರಿ:೧೯::(ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶಗಳ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ಹಾಗೂ ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಠಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ೧೦೦ ಹೊರ ಗುತ್ತಿಗೆ ಸೇವಾ ಕೇಂದ್ರಗಳನ್ನುಬಿ.ಪಿ.ಓ ಪ್ರಾರಂಭಿಸಲಾಗುವುದೆಂದು ರಾಜ್ಯದ ವಸತಿ, ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಸಚಿವರಾದ ಶ್ರೀ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೇಳಿದರು
ಗೋಕಾಕದಲ್ಲಿ ಇಂದು ಚನ್ನಬಸವೇಶ್ವರ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಪ್ರಾರಂಭಿಸಲಾದ ಟ್ರಾನ್ಸ್ ಸೊಲುಷನ್ ಕೇಂದ್ರ (ಬಿ.ಪಿ.ಓ) ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪ್ರಸಕ್ತ ವರ್ಷ ಈ ೨೦ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ೮ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಮುಂಬರುವ ವರ್ಷ ೮೦ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಗ್ರಾಮೀಣ ಬಿ.ಪಿ.ಓ. ಗಳನ್ನು ಸ್ಥಾಪಿಸಲು ಸರಕಾರದಿಂದ ಹಣಕಾಸು ನೆರವು ನೀಡಲಾಗುವುದು. ಕನಿಷ್ಠ ವಿದ್ಯಾಭ್ಯಾಸ ಹೊಂದಿದ ಗ್ರಾಮೀಣ ಯುವಕ/ಯುವತಿಯರಿಗೆ ಈ ಯೋಜನೆಯಲ್ಲಿ ಉದ್ಯೋಗ ಪಡೆಯಲು ಸಹಾಯವಾಗುವುದು. ಪ್ರತಿ ಕೇಂದ್ರಕ್ಕೆ ಸರಕಾರದ ವತಿಯಿಂದ ೪೦ ಲಕ್ಷ ರೂ.ಗಳನ್ನು ಒದಗಿಸಲಾಗುವುದೆಂದು ಹೇಳಿದರು.
ಗ್ರಾಮೀಣ ಪ್ರದೇಶದ ಯುವಕ/ಯುವತಿಯರು ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಡೆಗಟ್ಟಲು ಇದು ಸಹಾಯವಾಗುತ್ತದೆ. ಪ್ರಥಮ ಹಂತದಲ್ಲಿ ಶ್ರೀರಂಗಪಟ್ಟಣ, ಪಾಲೆಗಾಮ, ಗುಂಡ್ಲುಪೇಟೆ ಹಾಗೂ ಶಿಗ್ಗಾಂವಗಳಲ್ಲಿ ಈಗಾಗಲೇ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬರುವ ಮಾರ್ಚ್ ಅಂತ್ಯಕ್ಕೆ ಇನ್ನೂ ೧೬ ಕೇಂದ್ರಗಳನ್ನು ಸ್ಥಾಪಿಸಲಾಗುವುದೆಂದು ಸಚಿವ ಶ್ರೀ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೇಳಿದರು.
ರಾಜ್ಯದಲ್ಲಿ ೨೦೮೫ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳಿದ್ದು, ಪ್ರಸಕ್ತ ವರ್ಷ ಈ ಉದ್ದಿಮೆಗಳಿಂದ ೭೫,೦೦೦ ಕೋಟಿ ರೂ.ಗಳ ರಫ್ತನ್ನು ಮಾಡಲಾಗಿದೆ. ಮುಂದಿನ ವರ್ಷ ೧ ಲಕ್ಷ ಕೋಟಿ ರೂ.ಗಳ ರಫ್ತನ್ನು ಮಾಡುವ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ೬ ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗುವುದೆಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಮಾಹಿತಿ ತಂತ್ರಜ್ಞಾನವನ್ನು ಗ್ರಾಮೀಣ ಪ್ರದೇಶಗಳಿಗೆ ಕರೆದೊಯ್ದು ಜನರ ಬದುಕಿನಲ್ಲಿ ಹೊಸ ನಗುವನ್ನು ತರಲು ಪ್ರಯತ್ನ ಮಾಡಲಾಗುವುದೆಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಶ್ರೀ. ಸುರೇಶ ಅಂಗಡಿ ಅವರು ವಹಿಸಿದ್ದರು. ಗೋಕಾಕ ಸೂನ್ಯ ಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದು, ವೇದಿಕೆಯಲ್ಲಿ ಚಿತ್ರನಟ ಶ್ರೀ. ಕಾಶಿ ಹಾಗೂ ಹಿರಿಯ ವಕೀಲರಾದ ಸುರೇಶ ಸೊಲ್ಲಾಪೂರಮಠ ಹಾಗೂ ಶ್ರೀ. ಈರಣ್ಣ ಕಡಾಡಿ ಅವರು ಇದ್ದರು.
ಗುಲಬರ್ಗಾ ವಿಭಾಗದ ೧೪.೯೩ ಲಕ್ಷ ಬಿಪಿಎಲ್ ಕುಟುಂಬಗಳ ಆರೋಗ್ಯ ಚಿಕಿತ್ಸೆಗಾಗಿ ವಾಜಪೇಯ ಆರೋಗ್ಯಶ್ರೀ ಯೋಜನೆ
ಗುಲಬರ್ಗಾ,ಜ.೧೯.(ಕ.ವಾ.)-ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ವಾಜಪೇಯ ಆರೋಗ್ಯಶ್ರೀ ಯೋಜನೆ ಎಂದು ಪುನರ್ ನಾಮಕರಣ ಮಾಡಲಾಗಿದ್ದು, ಗುಲಬರ್ಗಾ ವಿಭಾಗದ ಆರು ಜಿಲ್ಲೆಗಳ ವ್ಯಾಪ್ತಿಗೊಳಪಡುವ ೩೨ ತಾಲೂಕುಗಳ ಬಡತನ ರೇಖೆಗಿಂತ ಕೆಳಗಿರುವ ೧೪೯೩೯೭೭ ಕುಟುಂಬಗಳ ಸದಸ್ಯರಿಗೆ ಉಚಿತ ಆರೋಗ್ಯ ಚಿಕಿತ್ಸಾ ಸೌಲಭ್ಯದ ಪ್ರಯೋಜನ ಕಲ್ಪಿಸಲಾಗುವುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಜಿ. ಕುಮಾರನಾಯಕ್ ಅವರು ಹೇಳಿದರು.
ಅವರು ಮಂಗಳವಾರ ಗುಲಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಯೋಜನೆಯಡಿ ಹೃದ್ರೋಗ್, ಕ್ಯಾನ್ಸರ್ ರೋಗದ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ಕಿಮೋಥೇರಫಿ, ನರವ್ಯಾಧಿ, ಕಿಡ್ನಿ ಕಾಯಿಲೆ, ಸುಟ್ಟ ಪ್ರಕರಣ, ಬಹು ಅಪಘಾತ ಪ್ರಕರಣ( ಪಾಲಿಟಾಮ್) ವಾಹನ ವಿಮಾ ಹೊರತುಪಡಿಸಿ, ನಿಯೋನ್ಯಾಟಲ್ ಕೇರ್ ಹಾಗೂ ಈ ಯೋಜನೆಯಡಿ ಒಳಪಡಿಸಲಾಗುವ ಇತರ ಚಿಕಿತ್ಸಾ ವಿವರ ಪಟ್ಟಿಗಳ ಅನ್ವಯ ನೆಟ್‌ವರ್ಕ್ ಆರೋಗ್ಯ ಸಂಸ್ಥೆಗಳ ಮೂಲಕ ಆಸ್ಪತ್ರೆ ದಾಖಲಾತಿ, ಶಸ್ತ್ರಚಿಕಿತ್ಸೆ ಹಾಗೂ ಇತರೆ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ತೀವ್ರ ಸ್ವರೂಪದ ರೋಗಗಳ ಉಪಚಾರಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಣ ಖರ್ಚು ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಈ ಕುಟುಂಬಗಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಈ ಯೋಜನೆಯನ್ನು ಮೊದಲಬಾರಿಗೆ ಪ್ರಯೋಗಿಕವಾಗಿ ಗುಲಬರ್ಗಾ ವಿಭಾಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದನ್ನು ಹಂತ ಹಂತವಾಗಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಬಡತನ ರೇಖೆಯ ಕೆಳಗಿರುವ ಪ್ರತಿ ಕುಟುಂಬದ ಫಲಾನುಭವಿಯು ಗರಿಷ್ಠ ೫ ಸದಸ್ಯರಿಗೆ ಅಂದರೆ ಪತಿ, ಪತ್ನಿ ಹಾಗೂ ಅವರ ಮೂವರು ಅವಲಂಬಿತರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪ್ರತಿ ಕುಟುಂಬದ ಐದು ಸದಸ್ಯರಿಗೆ ಪ್ರತಿ ವರ್ಷಕ್ಕೆ ೩೦೦ ರೂ. ದಂತೆ ಫಲಾನುಭವಿಗಳಿಗೆ ವಂತಿಗೆಯಾಗಿ ಸರ್ಕಾರ ಯೋಜನೆಯನ್ನು ಜಾರಿಗೊಳಿಸುವ ಟ್ರಸ್ಟಿಗೆ ಪಾವತಿಸುವುದು. ಫಲಾನುಭವಿಗಳು ಯಾವುದೇ ವಂತಿಗೆ ಪಾವತಿಸಬೇಕಾಗಿಲ್ಲ. ವಾಗ್ದಾನದ ವಿಮಾ ಮೊತ್ತ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ ೧.೫೦ ಲಕ್ಷ ರೂ. ನಿಗದಿಪಡಿಸಿದ್ದು, ಗರಿಷ್ಠ ಮೊತ್ತ ಮೀರಿದಲ್ಲಿ ೫೦ ಸಾವಿರ ರೂ. ಹೆಚ್ಚುವರಿ ವಿಮಾ ಮೊತ್ತ ಒದಗಿಸಲಾಗುವುದು. ಒಬ್ಬ ಫಲಾನುಭವಿಯು ಗುರುತಿಸಿದ ನೆಟ್‌ವರ್ಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದ ದಿನದಿಂದ ಚಿಕಿತ್ಸೆ ಪಡೆದು ಹೊರಬರುವವರೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಮುಖ ಸುಪರ್ ಸ್ಪೇಷಾಲಿಟಿ ಖಾಸಗಿ ಆಸ್ಪತ್ರೆಗಳನ್ನು ಸಹ ಬಳಸಿಕೊಳ್ಳಲು ಯೋಜಿಸಲಾಗಿದ್ದು, ಈಗಾಗಲೇ ಇಂತಹ ಆಸ್ಪತ್ರೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದಾದ್ಯಂತ ಈವರೆಗೆ ೧೩೨ ಆಸ್ಪತ್ರೆಗಳು ಅರ್ಜಿಗಳನ್ನು ಸಲ್ಲಿಸಿದ್ದು, ೩೦ ಆಸ್ಪತ್ರೆಗಳ ತಪಾಸಣೆ ಮುಗಿದಿರುತ್ತವೆ. ಈ ಯೋಜನೆಯಡಿ ೪೦೩ ವಿಶೇಷ ಶಸ್ತ್ರಚಿಕಿತ್ಸಾ ಪ್ರಕರಣಗಳನ್ನು ಗುರುತಿಸಲಾಗಿದ್ದು, ಪ್ರತಿ ಪ್ರಕರಣಕ್ಕೂ ಹಣ ನಿಗದಿಮಾಡಲಾಗಿದೆ. ಸದರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಮೇಳ ಹಾಗೂ ಶಿಬಿರಗಳನ್ನು ನಡೆಸಲಾಗುವುದು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುವುದು. ಆರೋಗ್ಯಶ್ರೀ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಆಯವ್ಯಯದಲ್ಲಿ ೧೦೦ ಕೋಟಿ ರೂ. ನಿಗದಿಪಡಿಸಿದೆ ಎಂದು ಹೇಳಿದರು.
ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ|| ರಜನೀಶ ಗೋಯೆಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ಎನ್. ನಾಯಕ್ ಅವರು ಹಾಜರಿದ್ದರು.
ಫೆಬ್ರವರಿ ೧ಕ್ಕೆ ಗುಲಬರ್ಗಾದಲ್ಲಿ ಬೃಹತ್ ಆರೋಗ್ಯ ಶಿಬಿರ
ಗುಲಬರ್ಗಾ,ಜ.೧೯.(ಕ.ವಾ.)-ವಾಜಪೇಯ ಆರೋಗ್ಯಶ್ರೀ ಯೋಜನೆಯಡಿ ಗುಲಬರ್ಗಾ ನಗರದಲ್ಲಿ ೨೦೧೦ರ ಫೆಬ್ರವರಿ ೧ರಂದು ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ|| ರಜನೀಶ್ ಗೋಯಲ್ ಅವರು ಹೇಳಿದರು.
ಅವರು ಮಂಗಳವಾರ ಗುಲಬರ್ಗಾದಲ್ಲಿ ಬೃಹತ್ ಆರೋಗ್ಯ ಶಿಬಿರದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಗುಲಬರ್ಗಾ ಮತ್ತು ಯಾದಗಿರ ಜಿಲ್ಲೆಗಳ ಒಟ್ಟು ೫೦೦೦ ಕ್ಕಿಂತ ಅಧಿಕ ಜನರು ಈ ಶಿಬಿರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಗುಲಬರ್ಗಾ ನಗರದಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಗಳು ತಲಾ ಒಂದೊಂದು ತಾಲೂಕನ್ನು ದತ್ತುಪಡೆದು ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು. ಶಿಬಿರದಲ್ಲಿ ಆಗಮಿಸುವ ಕುಟುಂಬಗಳ ಸದಸ್ಯರ ಆರೋಗ್ಯ ತಪಾಸಣೆ ನಡೆಸಿ ಅವರು ತಿಳಿಸುವ ಆಸ್ಪತ್ರೆಯಲ್ಲಿ ರೋಗಕ್ಕೆ ಸಂಬಂಧಿಸಿದ ಉಚಿತ ಚಿಕಿತ್ಸೆ/ಶಸ್ತ್ರಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಸುವರ್ಣ ಆರೋಗ್ಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಜಿ. ಕುಮಾರನಾಯಕ್ ಅವರು ಮಾತನಾಡಿ ಗುಲಬರ್ಗಾ ನಗರದಲ್ಲಿ ಫೆಬ್ರವರಿ ೧ರಂದು ನಡೆಸಲಾಗುವ ಬೃಹತ್ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡಲು ಈಗಾಗಲೇ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ೧೭೩೬ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ಎನ್. ನಾಯಕ್ ಅವರು ಮಾತನಾಡಿ ಈ ಬೃಹತ್ ಆರೋಗ್ಯ ಶಿಬಿರದ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವ ಕಾರ್ಯ ಚುರುಕುಗೊಳಿಸಬೇಕು. ಈ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಹಾಗೂ ಯೋಜನೆಯ ಲಾಭ ಬಡ ಜನರಿಗೆ ತಲುಪಿಸುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ, ತಾಲೂಕು ಅಧಿಕಾರಿಗಳ ಮಹತ್ತರ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ ಆರೋಗ್ಯ ಸುಧಾರಣಾ ಪದ್ಧತಿ ಯೋಜನೆಯ ನಿರ್ದೇಶಕ ಸೆಲ್ವಕುಮಾರ್, ಆರೋಗ್ಯ ವಿಮಾ ನಿರ್ದೇಶಕ ವಿಜಯ, ಜಿಲ್ಲಾಧಿಕಾರಿ ಡಾ|| ಆರ್. ವಿಶಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲ್ಮಾ ಕೆ. ಫಾಹಿಮ್, ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಮಿತ್ರಪಡೆಯ ಸದಸ್ಯರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಜ.೨೧ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ
ಗುಲಬರ್ಗಾ,ಜ.೧೯.(ಕ.ವಾ.)-ಗುಲಬರ್ಗಾ ಮಹಾನಗರ ಪಾಲಿಕೆಯ ಮುಂದೂಡಿದ ಸಾಮಾನ್ಯ ಸಭೆಯು ಮಹಾಪೌರರ ಅಧ್ಯಕ್ಷತೆಯಲ್ಲಿ ೨೦೧೦ರ ಜನವರಿ ೨೧ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಇಂದಿರಾ ಸ್ಮಾರಕ ಸಭಾಂಗಣ (ಟೌನಹಾಲ)ದಲ್ಲಿ ಜರುಗಲಿದೆ. ದಿನಾಂಕ: ೧೮-೧೧-೨೦೦೯ರಂದು ಕಳುಹಿಸಿದ ಕಾರ್ಯಸೂಚಿಯನ್ನು ಪರ್ಯಾಲೋಚನಾಗಾಗಿ ಮಂಡಿಸಲಾಗುವುದು. ಈ ಸಭೆಗೆ ಮಹಾಪೌರರು, ಎಲ್ಲ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ತಪ್ಪದೇ ಹಾಜರಾಗುವಂತೆ ಗುಲಬರ್ಗಾ ಮಹಾನಗರ ಪಾಲಿಕೆಯ ಸಭಾ ಕಾರ್ಯದರ್ಶಿಯವರು ಕೋರಿದ್ದಾರೆ.
ಯೋಜನಾ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ಗುಲಬರ್ಗಾ,ಜ.೧೯.(ಕ.ವಾ.)- ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಅವಧಿಗೆ ಯೋಜನಾ ಸಹಾಯಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶದ ಜಾನಪದ ಮತ್ತು ಲಲಿತಕಲೆಗಳ ಕ್ಷೇತ್ರದಲ್ಲಿ ಅನುಭವವಿರುವ ಎಂ.ಎ. ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಕನ್ನಡ/ಇಂಗ್ಲೀಷ್ ಡಿ.ಟಿ.ಪಿ. ಮಾಡುವ ಅನುಭವ ಅಪೇಕ್ಷಣೀಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಯೋಜನಾ ಪ್ರಧಾನ ಸಂಪಾದಕರಾದ ಪ್ರೊ|| ಪಿ.ಕೆ. ಖಂಡೋಬಾ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಗ್ರಂಥಗಳ ಆಯ್ಕೆಗೆ ಆಹ್ವಾನ
ಗುಲಬರ್ಗಾ,ಜ.೧೯.(ಕ.ವಾ.)- ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳಲ್ಲಿ ೨೦೦೯ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ/ಆಂಗ್ಲ/ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕ, ಲೇಖಕ-ಪ್ರಕಾಶಕ, ಪ್ರಕಾಶಕರು, ಸಂಸ್ಥೆಗಳು ವಿತರಕರಿಂದ ಗ್ರಂಥಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಗಾಗಿ ಸಲ್ಲಿಸುವ ಗ್ರಂಥಗಳ ಮೊದಲ ಪುಟದ ಮತ್ತು ಹಿಂಭಾಗದ ಪುಟದಲ್ಲಿ ಶೀರ್ಷಿಕೆ, ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಪುಟಗಳು, ಪುಸ್ತಕದ ಅಳತೆ, ಉಪಯೋಗಿಸಿರುವ ಕಾಗದ, ಗ್ರಂಥಸ್ವಾಮ್ಯದ ಹಕ್ಕು, ಪ್ರಥಮ ಮುದ್ರಣ, ನಂತರದ ಮುದ್ರಣಗಳು, ಬೆಲೆ, ಮುಖಪುಟ, ವಿನ್ಯಾಸ, ಒಳಪುಟ, ರೇಖಾಚಿತ್ರ, ಪ್ರಕಾಶಕರು ಮತ್ತು ಮುದ್ರಕರು ಇತ್ಯಾದಿ ವಿವರಗಳನ್ನು ಮುದ್ರಿಸುವುದು ಕಡ್ಡಾಯವಾಗಿರುತ್ತದೆ. ಆಯ್ಕೆಯಾದ ಪುಸ್ತಕಗಳಿಗೆ ಸರ್ಕಾರ ನಿದಿಪಡಿಸಿದ ಬೆಲೆಯ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಲಾಗುವುದು.
ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ೪ನೇ ಮಹಡಿ, ಡಾ|| ಅಂಬೇಡ್ಕರ್ ವೀದಿ, ಬೆಂಗಳೂರು-೫೬೦೦೦೧ ಇವರಿಗೆ ೨೦೧೦ರ ಫೆಬ್ರವರಿ ೧೫ರೊಳಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿ ಮತ್ತು ವಿವರವಾದ ನಿಬಂಧನೆಗಳಿಗಾಗಿ ಮೇಲ್ಕಂಡ ಕಚೇರಿ ಮತ್ತು ದೂರವಾಣಿ ಸಂಖ್ಯೆ: ೦೮೦-೨೨೮೬೪೯೯೦ ಹಾಗೂ ೨೨೮೬೭೩೫೮ನ್ನು ಸಂಪರ್ಕಿಸಲು ಕೋರಲಾಗಿದೆ.
ಜನವರಿ ೨೫ಕ್ಕೆ ಮುಖ್ಯೋಪಾಧ್ಯಾಯರ ಸ್ಥಾನಪನ್ನ ಬಡ್ತಿಯ ಕೌನ್ಸಿಲಿಂಗ್
ಗುಲಬರ್ಗಾ,ಜ.೧೯.(ಕ.ವಾ.)- ಗುಲಬರ್ಗಾ ವಿಭಾಗದ ಸರ್ಕಾರಿ ಸಹ ಶಿಕ್ಷಕರುಗಳಿಗೆ ಮುಖ್ಯೋಪಾಧ್ಯಾಯರೆಂದು ಸ್ಥಾನಪನ್ನ ಬಡ್ತಿ ನೀಡುವ ಕುರಿತು ಅರ್ಹ ಸಹ ಶಿಕ್ಷಕರುಗಳಿಗೆ ೨೫-೦೧-೨೦೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಗುಲಬರ್ಗಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ಸಭಾಂಗಣದಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದು. ಅರ್ಹತೆ ಹೊಂದಿರುವ ಸಹ ಶಿಕ್ಷಕರುಗಳು ತಪ್ಪದೇ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹನಿರ್ದೇಶಕ (ಆಡಳಿತ) ಆರ್.ಟಿ. ದೇಸಾಯಿ ಕೋರಿದ್ದಾರೆ.
ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಕಾನೂನಿನ ಅರಿವು ಅತ್ಯಗತ್ಯ
ಗುಲಬರ್ಗಾ,ಜ.೧೯.(ಕ.ವಾ.)-ದೌರ್ಜನ್ಯ, ಹಿಂಸೆ, ಶೋಷಣೆ, ಅನ್ಯಾಯ, ಅತ್ಯಾಚಾರಗಳಿಗೆ ಒಳಗಾಗುವ ಮಹಿಳೆಯರಿಗೆ ಕಾನೂನುಗಳ ಅರಿವಿನ ಕೊರತೆಯೇ ಮುಖ್ಯ ಕಾರಣವಾಗಿದೆ. ಇವುಗಳಿಂದ ಮಹಿಳೆಯರು ಹೊರಬರಬೇಕಾದರೆ ಕಾನೂನಿನ ಸೂಕ್ತ ತಿಳುವಳಿಕೆಯು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಎಸ್. ಬಿಳ್ಕಿ ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರವು ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಅದರ ಲಾಭ ಪಡೆಯುವಂತೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಶೇಡ ಸಂಸ್ಥೆ ಬೀದರ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುಲಬರ್ಗಾ ಇವುಗಳ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ತಾಲೂಕಿನ ತಾಜಸುಲ್ತಾನಪೂರದಲ್ಲಿ ಭಾನುವಾರ ಏರ್ಪಡಿಸಲಾದ ಮಹಿಳೆಯರ ಕಾನೂನುಗಳ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮಹ್ಮದ್ ಖಾನ ಪಠಾಣ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಕಾನೂನುಗಳ ಪ್ರಜ್ಞೆ ಹೆಚ್ಚಿದಂತೆ ಅಪರಾಧಗಳ ಸಂಖ್ಯೆ ಕಡಿಮೆಯಾಗಿ, ನೆಮ್ಮದಿಯಿಂದ ಜನ ಬದುಕಲು ಸಾಧ್ಯ. ಇದಕ್ಕೆ ಕಾನೂನು ಅರಿವು ಅವಶ್ಯಕವಾಗಿದೆ. ಕಾನೂನು ನೆರವು ಬೇಡಿ ಕಳೆದ ಆರು ತಿಂಗಳಿನಿಂದ ಪ್ರಾಧಿಕಾರಕ್ಕೆ ಒಂದೂ ಅರ್ಜಿ ಬಂದಿಲ್ಲವೆಂದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಬರುಡೆ ಅತಿಥಿಗಳಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಗುರುದೇವಿ ಎಸ್.ಓಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಷಯ ತಜ್ಞರಾಗಿ ಮಹಿಳಾ ನ್ಯಾಯವಾದಿ ಸರಸಜಾ ರಾಜನ್ ಹೆಣ್ಣು ಮಕ್ಕಳ ಹಕ್ಕುಗಳು ಕುರಿತು ಮಾತನಾಡಿ ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಜಾರಿಗೆ ಬಂದ ಮಹಿಳೆಯರ ವಿವಿಧ ಹಕ್ಕುಗಳ ಬಗ್ಗೆ ತಿಳಿಸುತ್ತ, ಮಹಿಳೆಯರ ಘನತೆ, ಗೌರವಗಳನ್ನು ಹೆಚ್ಚಿಸುವ ಸೂಕ್ಷ್ಮವಾದ ವಿಷಯಗಳ ಮೇಲೂ ಬೆಳಕು ಚೆಲ್ಲಿದರು. ತಮ್ಮ ಹಕ್ಕನ್ನು ಚಲಾಯಿಸಿ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಕರೆ ನೀಡಿದರು.
ಕುಮಾರಿ ಅನಿತಾ ಡಿ. ಕುಲಕರ್ಣಿಯವರು ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾತನಾಡಿ ಈ ಕಾಯ್ದೆಯನ್ನು ಹೆಣ್ಣುಮಕ್ಕಳು ಯಾವಾಗ, ಎಲ್ಲಿ, ಹೇಗೆ ರಕ್ಷಣೆ ಪಡೆಯಬೇಕೆಂಬುದನ್ನು ವಿವರಿಸಿದರು. ಈ ಕಾಯ್ದೆಯ ನೆರವಿನಿಂದ ಹೆಣ್ಣುಮಕ್ಕಳು ಹಿಂಸೆ, ಭಯ, ಶೋಷಣೆ ಮತ್ತು ಅನ್ಯಾಯವಿಲ್ಲದ ಜೀವನವನ್ನು ನಡೆಸಬಹುದೆಂದರು. ಸಿಡಿಪಿಓ ತಿಪ್ಪಣ್ಣ ಸಿರಸಗಿ ಅವರು ಮಹಿಳೆಯರ ಅಭಿವೃದ್ಧಿಗಾಗಿರುವ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು.
ಬೀದರ ಶೇಡ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಸಿಬರಗಟ್ಟಿಯವರು ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಿಕೆ ಸತ್ಯಮ್ಮ ನಿರೂಪಿಸಿದರು ಮತ್ತು ನಾಗಮ್ಮ ವಂದಿಸಿದರು. ವಕೀಲರುಗಳಾದ ಹನುಮಂತ ಅಟುರ, ಸತೀಷ್ ಪಾಟೀಲ್, ಬಸವರಾಜ ಪ್ಯಾಟಿ, ಚವಡಗುಂಡ ಮುಂತಾದವರು ಉಪಸ್ಥಿತರಿದ್ದರು. ತಾಜಸುಲ್ತಾನಪೂರದ ವಿಜಯಕುಮಾರ, ಮಲ್ಲಿಕಾರ್ಜುನ, ಮೇಲ್ವಿಚಾರಕಿ ನಾಗಮ್ಮ ಕಾರ್ಯಕ್ರಮದಲ್ಲಿದ್ದರು. ಈ ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.
ಜನವರಿ ೨೨ಕ್ಕೆ ಆರ್.ಟಿ.ಓ. ಕಚೇರಿ ವಾಹನ ಹರಾಜು
ಗುಲಬರ್ಗಾ,ಜ.೧೯.(ಕ.ವಾ.)-ಪ್ರಾದೇಶಿಕ ಸಾರಿಗೆ ಕಚೇರಿಯ ಇಲಾಖಾ ವಾಹನ ಮಹೇಂದ್ರ ಕಮಾಂಡರ್ ಜೀಪ ಸಂಖ್ಯೆ ಕೆಎ೧೩ಜಿ/೯೯೯ನ್ನು ಟೆಂಡರ್ ಕಂ ಬಹಿರಂಗ ಹರಾಜಿನ ಮುಖಾಂತರ ದಿನಾಂಕ: ೨೨-೧-೨೦೧೦ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ವಿಲೇವಾರಿಗೊಳಿಸಲಾಗುವುದು. ಇಚ್ಛೆಯುಳ್ಳವರು ವಾಹನವನ್ನು ವೀಕ್ಷಿಸಬಹುದು ಹಾಗೂ ಟೆಂಡರ್ ಕಂ ಹರಾಜಿನ ಪ್ರತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಲಗತ್ತಿಸಿದೆ. ಇದಕ್ಕೆ ಸಂಬಂಧಿಸಿದ ಪ್ರತಿಯನ್ನು ಈ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
ಗುಲಬರ್ಗಾ,ಜ.೧೯.(ಕ.ವಾ.)-ಗುಲಬರ್ಗಾ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ೧೧೪ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗಾಗಿ ಈಗಾಗಲೇ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಪೂರ್ಣಗೊಳಿಸಿ ೧೧೪ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಹಾಗೂ ಶೇ. ೧೦೦ ಕಾಯ್ದಿರಿಸಿದ ಪಟ್ಟಿಯನ್ನು ೨೦೧೦ರ ಜನವರಿ ೧೮ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ವಿಶಾಲ್ ಅವರು ತಿಳಿಸಿದ್ದಾರೆ.
ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ದಿನಾಂಕ: ೨೮-೦೧-೨೦೧೦ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿರುವ ಕೌನ್ಸ್‌ಲಿಂಗ್‌ಗೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ. ದಿನಾಂಕ: ೨೮-೦೧-೨೦೧೦ರಂದೇ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ, ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು. ಕೌನ್ಸ್‌ಲಿಂಗ್ ದಿನದಂದು ಯಾವುದೇ ಅಭ್ಯರ್ಥಿಯು ಗೈರು ಹಾಜರಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಆಯ್ಕೆ ಪಟ್ಟಿಯಿಂದ ಅವರ ನೇಮಕಾತಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಜನವರಿ ೨೩ಕ್ಕೆ ಗುಲಬರ್ಗಾದಲ್ಲಿ ಎಸ್‌ಸಿ ಮಹಿಳಾ ಜಾನಪದ ಕಲಾವಿದರ ಸಮಾವೇಶ
ಗುಲಬರ್ಗಾ,ಜ.೧೯.(ಕ.ವಾ.)-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಜನಾಂಗದ ಮಹಿಳಾ ಜಾನಪದ ಕಲಾವಿದರ ಸಮಾವೇಶದ ಸಮಾರಂಭವನ್ನು ದಿನಾಂಕ: ೨೩-೦೧-೨೦೧೦ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಗುಲಬರ್ಗಾ ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ವಿಭಾಗದ ವಿಭಾಗೀಯ ಸಂಚಾಲಕರು ಮತ್ತು ಮಾಜಿ ಲೋಕಸಭಾ ಸದಸ್ಯ ಬಸವರಾಜ ಪಟೀಲ್ ಸಡಂ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯೆ ಗಿರಿಜಾ ಕಪೂರ ಅವರು ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕನಾಠಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚೆನ್ನಬಸಪ್ಪ ಅವರು ವಹಿಸಲಿದ್ದಾರೆ.
ಮಹಿಳಾ ಜಾನಪದ ಸಮಾವೇಶದಲ್ಲಿ ಎರಡು ಗೋಷ್ಠಿಗಳಿದ್ದು, ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ|| ಕೆ. ಸುಮಿತ್ರಾ ಅವರು ವಹಿಸಲಿದ್ದಾರೆ. ಗೋಷ್ಠಿಯ ಪ್ರಬಂಧಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರವಾಚಕರಾದ ಡಾ|| ಎಚ್.ಟಿ. ಪೋತೆ ಅವರು ದಲಿತ ಮಹಿಳಾ ಕಲಾವಿದರ ಸ್ಥಿತಿ-ಗತಿ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಕೊಪ್ಪಳದ ಮಹಿಳಾ ಲೋಕ ಪತ್ರಿಕೆಯ ಸಂಪಾದಕರಾದ ಸಾವಿತ್ರಿ ಮುಜುಮದಾರ ಅವರು ಜಾನಪದ ವೃತ್ತಿ ಮತ್ತು ದಲಿತ ಮಹಿಳೆ ಕುರಿತು ಪ್ರಬಂಧ ಮಂಡಿಸಲಿದ್ದಾರೆ.
ಎರಡನೇ ಗೋಷ್ಠಿ ಕ್ಷೇತ್ರ ತಜ್ಞರು ಮತ್ತು ಕಲಾವಿದರೊಂದಿಗೆ ಚರ್ಚೆ ಕುರಿತು ನಡೆಯಲಿದ್ದು, ಡಾ|| ಡಿ.ಬಿ. ನಾಯಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ತಜ್ಞರಾಗಿ ಡಾ|| ಜಗನ್ನಾಥ ಹೆಬ್ಬಾಳೆ, ಡಾ|| ಚಂದ್ರಕಲಾ ಬಿದರಿ, ಡಾ|| ಹನುಮಂತರಾವ ಬಿ. ದೊಡ್ಡಮನಿ, ಡಾ|| ಅಮೃತಾ ಕಟಕೆ, ಡಾ|| ಶ್ರೀಶೈಲ ನಾಗರಾಳ, ಡಾ|| ನಾಗಾಬಾಯಿ ಬುಳ್ಳಾ, ಡಾ|| ಸೂರ್ಯಕಾಂತ ಸುಜಾದ, ಡಾ|| ಶಾರದಾ ಜಾಧವ ಅವರುಗಳು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಸಾಯಂಕಾಲ ನಾಲ್ಕು ಗಂಟೆಗೆ ಸಮಾರೋಪ ನಡೆಯಲಿದ್ದು, ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಾರುತಿರಾವ ಡಿ. ಮಾಲೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಹನಿಫಾ ಶೇಬ್ ಅವರು ಆಗಮಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರು ಹಾಗೂ ಜಾನಪದ ವಿದ್ವಾಂಸರಾದ ಡಾ|| ಕೆ.ಆರ್. ದುರ್ಗಾದಾಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅಲ್ಲದೆ ರಾಜ್ಯದ ಆಯ್ದ ಕೆಲ ಮಹಿಳಾ ಕಲಾವಿದರಿಂದ ಜಾನಪದ ಕಲಾ ಪ್ರದರ್ಶನವೂ ನಡೆಯಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರೂ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರವಾಚಕರಾದ ಡಾ|| ಬಸವರಾಜ ಪೊಲೀಸ್ ಪಾಟೀಲ್ ಅವರು ತಿಳಿಸಿದ್ದಾರೆ.
ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮಸ್ಥರ ಪಾತ್ರ ಮಹತ್ತರ
ಗುಬರ್ಗಾ,ಜ.೧೯.(ಕ.ವಾ.)- ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮಸ್ಥರ ಪಾತ್ರ ಬಹು ಮುಖ್ಯವಾಗಿದೆ. ಅರಣ್ಯಗಳ ನಿರ್ವಹಣೆಗಾಗಿ ವಿವಿಧ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಅರಣ್ಯ ಸಂರಕ್ಷಣೆಯನ್ನು ಅತ್ಯಂತ ಜವಾಬ್ದಾರಿಯಿಂದ ಕೈಗೊಳ್ಳಬೇಕೆಂದು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಮರನಾಥ ಎನ್. ಪಾಟೀಲ್ ಅವರು ಕರೆ ನೀಡಿದರು.
ಅವರು ಮಂಗಳವಾರ ಗುಲಬರ್ಗಾ ಹಾಗೂ ಬಳ್ಳಾರಿ ಅರಣ್ಯ ವೃತ್ತಗಳ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಗ್ರಾಮ ಅರಣ್ಯ ಸಮಿತಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ತಾಪಮಾನದ ಏರುಪೇರಿನಿಂದ ಹವಾಮಾನಗಳ ವೈಪರೀತ್ಯ ಉಂಟಾಗುತ್ತಿದ್ದು, ಇದರ ದುಷ್ಪರಿಣಾಮಗಳನ್ನು ತಡೆಗಟ್ಟಲು ಅರಣ್ಯ ಬೆಳೆಸುವುದು ಅತ್ಯವಶ್ಯಕವಾಗಿದೆ. ಅರಣ್ಯೀಕರಣದಿಂದ ಪರಿಸರ ಸಂರಕ್ಷಣೆ ಸಾಧ್ಯ . ಗುಲಬರ್ಗಾ ವಿಭಾಗದಲ್ಲಿ ಖುಷ್ಕಿ ಹಾಗೂ ಬಂಜರು ಭೂಮಿಯನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ದೂರ ಸಂವೇದಿ (ಉಪಗ್ರಹದಿಂದ) ಮಾಹಿತಿಯನ್ನು ಉಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಭಿವೃದ್ಧಿ ಪಡಿಸಿದ ಭೂಮಿಯುಲ್ಲಿ ಜನೋಪಯೋಗಿ ಜೈವಿಕ ಇಂಧನ, ಔಷಧಿ ಸಸ್ಯ, ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಇದಕ್ಕಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ದೂರ ಸಂವೇದಿ (ಇಸ್ರೊ ರಿಮೋಟ್ ಸೆನ್ಸಿಂಗ ) ಕೇಂದ್ರವನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಅಮರನಾಥ ತಿಳಿಸಿದರು.
ಇದೇ ಸಂದರ್ಭದಲ್ಲಿ ಆದಾಯ ವೃದ್ಧಿಸುವ ಚಟುವಟಿಕೆಗಳ ಮಾರ್ಗ ಸೂಚಿಗಳು ಎಂಬ ಪುಸ್ತಕವನ್ನು ಎಂ.ಎಸ್.ಐ.ಎಲ್. ಅಧ್ಯಕ್ಷ ಡಾ|| ವಿಕ್ರಮ ಪಾಟೀಲ ಬಿಡುಗಡೆ ಮಾಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ಎಸ್. ನಾಗರಾಜ್ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಚಿತ್ತಾಪೂರ ಶಾಸಕ ವಾಲ್ಮೀಕಿ ನಾಯಕ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಯೋಜನೆಗಳು) ಬಿ.ಶಿವನಗೌಡ, ಗುಲಬರ್ಗಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾದೇವಿ ಮತಿತ್ತರ ಹಿರಿಯ ಅರಣ್ಯ ಅಧಿಕಾರಿಗಳು, ಗುಲಬರ್ಗಾ ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ಗ್ರಾಮ ಅರಣ್ಯ ಸಮಿತಿಗಳ ಸದಸ್ಯರು ಹಾಗೂ ವನಪಾಲಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಆರ್.ಎಫ್.ಓ.ಸಂತೋಷಕುಮಾರ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಪಿ.ಪ್ರಕಾಶ ವಂದಿಸಿದರು.
ಜ.೨೦ಕ್ಕೆ ಗುವಿವಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಗುಲಬರ್ಗಾ,ಜ.೧೯.(ಕ.ವಾ.)- ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ದಿನಾಂಕ: ೨೦-೧-೨೦೧೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಶ್ರೀ ಕೃಷ್ಣದೇವರಾಯರ ೫೦೦ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯನಗರದ ಆನೆಗೊಂದಿ ವಂಶಸ್ಥರಾದ ಕೃಷ್ಣದೇವರಾಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ|| ಬಿ.ವ್ಹಿ. ವಸಂತಕುಮಾರ ಅವರು ಉಪನ್ಯಾಸ ನೀಡುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ|| ಬಿ.ಜಿ. ಮೂಲಿಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
* * *
ಮಾಹಿತಿ ಹಕ್ಕಿನ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ – ಶ್ರೀ ಸಿದ್ದು ಹುಲ್ಲೋಳಿ
ಬಾಗಲಕೋಟೆ, ಜ.೧೯ (ಕರ್ನಾಟಕ ವಾರ್ತೆ): ಮಾಹಿತಿ ಹಕ್ಕು ಕುರಿತು ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಮಖಂಡಿ ತಹಶಿಲ್ದಾರ್ ಶ್ರೀ ಸಿದ್ದು ಹುಲ್ಲೋಳಿ ಅಬಿಪ್ರಾಯ ಪಟ್ಟರು.
ಮಂಗಳವಾರ ಬಾಗಲಕೋಟೆ ವಾರ್ತಾ ಇಲಾಖೆಯು ಜಮಂಖಡಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಮಾಹಿತಿ ಹಕ್ಕು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗಿನಿಂದ ದಾಖಲೀಕರಣ ಸಮರ್ಪಕವಾಗಿ ಮಾಡಲು, ಪಾರದರ್ಶಕ ಆಡಳಿತವನ್ನು ನಡೆಸಲು ಸಹಕಾರಿಯಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳಿಗೆ ಪ್ರತ್ಯೇಕವಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದ ಟಿ.ಜಿ.ಸಿ ಮತ್ತು ಬೆ.ಹೆಚ್.ಎಸ್.ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಡಾ.ಬಿ.ಎಂ. ನುಚ್ಚಿ ಅವರು ೨೦೦೫ ರ ಮೇ ತಿಂಗಳಲ್ಲಿ ಸಂಸತ್ತಿನಲ್ಲಿ ಒಪ್ಪಿಗೆ ಪಡೆದ ಮಾಹಿತಿ ಹಕ್ಕು ಕಾಯ್ದೆಯು ೨೦೦೫ ರ ಜೂನ್ ೧೫- ಕ್ಕೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಂಗೀಕರಿಸಲಾಗಿದೆ. ಇದರಿಂದ ಬ್ರಷ್ಠಾಚಾರ ನಿಯಂತ್ರಣ ಮಾಡುವುದು, ಜನಪರ ಆಡಳಿತ ನಡೆಸುವುದು ಮತ್ತು ಪಾರದರ್ಶಕತೆಯನ್ನು ಆಡಳಿತದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ರಾಜಾಧಿಕಾರ, ಸರ್ವಾಧಿಕಾರಗಳ ಕಾಲಕ್ಕಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಸಾರ್ವಜನಿಕರಿಗೆ ಒಂದು ವರದಾನವಾಗಿದೆ ಎಂದು ಡಾ.ನುಚ್ಚಿ ಅವರು ತಿಳಿಸಿದರು ಈ ಸಂದಂರ್ಭದಲ್ಲಿ ಮಾತನಾಡಿದ ವಾರ್ತಾಧಿಕಾರಿ ಎಂ.ಪಿ.ಶ್ರೀರಂಗನಾಥ ಅವರು ಇಲಾಖೆಯವತಿಯಿಂದ ಬಾಗಲಕೋಟೆ ಜಿಲ್ಲೆಯ ಬಾಗಲಕೋಟ, ಬೀಳಗಿ,ಮುಧೋಳ, ಮತ್ತು ಜಮಖಂಡಿ ತಾಲೂಕಿನ ಆಯ್ದ ೪೨ ಗ್ರಾಮಗಳಲ್ಲಿ ಡಿಸೆಂಬರ್ ೨೧ ರಿಂದ ಜನವರಿ ೧೦ ರ ವರೆಗೆ ಮಾಹಿತಿ ಹಕ್ಕು ಕುರಿತು ವಿಶೇಷ ಪ್ರಚಾರಾಂದೋಲನ ಏರ್ಪಡಿಸಲಾಗಿದೆ. ಬಾಗಲಕೋಟೆ ತಾಲೂಕಿನ ಕಲಾದಗಿಯ ಶ್ರೀ ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಡಿಸೆಂಬರ್ ೨೩ ರಂದು ಮಾಹಿತಿ ಹಕ್ಕು ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಅಲ್ಲದೆ ಕೇಂದ್ರ ಕಚೇರಿಯಿಂದ ಕಳಿಸಿರುವ ಮಾಹಿತಿ ಹಕ್ಕು ಕಾಯ್ದೆ ಕುರಿತು ಮಡಿಕೆ ಪತ್ರಗಳನ್ನು ಜಿಲ್ಲಾದ್ಯಂತ ವಿತರಿಸುವ ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಬಿ.ಎಂ.ಚಂಡಕಿ ಅವರು ಪದವಿಪೂರ್ವ ಶಿಕ್ಷಣ ಮಂಡಳಿಯಲ್ಲಿ ಉತ್ತರ ಪತ್ರಿಕೆಗಳನ್ನು ಪುನ: ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಬಹಳ ಹಿಂದೆಯೇ ಕಾಯ್ದೆಗೆ ಪೂರಕವಾದ ಕಾರ್ಯ ಆರಂಭವಾಯಿತು. ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳ ಹಣದ ವಿಯೋಗದ ಬಗ್ಗೆ ಮಾಹಿತಿ ಪಡೆಯ ಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಬಸವರಾಜಕಲೂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ರೀ ಸಿ.ಎಂ.ಹಂಚಿನಾಳ ಅವರು ಸ್ವಾಗತಿಸಿದರು. ಶ್ರೀಮತಿ ಹಲ್ಯಾಳ ಅವರು ವಂದಿಸಿದರು ಶ್ರೀಮತಿ ಮಹಾದೇವಿ ಎಂ.ಹಲ್ಯಾಳ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಭಾರ್ಗವಿ ದೇಸಾಯಿ ಅವರು ಪ್ರಾಥನಾ ಗೀತೆಯನ್ನು ಹಾಡಿದರು.

ಅಸಹಾಯಕ ಮಹಿಳೆಯರಿಗೆ ಸಕಾಲದಲ್ಲಿ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕರೆ
ಬಾಗಲಕೋಟೆ, ಜ.೧೯ (ಕರ್ನಾಟಕ ವಾರ್ತೆ): ವಿವಿಧ ಸಂದರ್ಭಗಳಲ್ಲಿ ತೊಂದರೆಗೊಳಗಾಗುವ ಅಸಹಾಯಕ ಮಹಿಳೆಯರಿಗೆ ಸಕಾಲದಲ್ಲಿ ನೆರವಾಗುವ ದಿಕ್ಕಿನಲ್ಲಿ ಕೆಲಸಮಾಡಬಡಬೇಕೆಂದು ಜಿಲ್ಲಾಧಿಕಾರಿ ಶ್ರೀ ಡಿ.ಎಸ್.ವಿಶ್ವನಾಥ ಅವರು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ತಿಳಿಸಿದರು.
ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳ ಕುರಿತು ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ವ – ಆಧಾರ, ವರದಕ್ಷಣೆ ಕಾಯ್ದೆ, ಸಾಂತ್ವಾನ ಯೋಜನೆ ಮತ್ತಿತರ ಯೋಜನೆಗಳ ಕುರಿತು ಈ ವರೆಗೆ ಆಗಿರುವ ಪ್ರಗತಿಯನ್ನು ಪರಿಶೀಲಿಸಲಾಯಿತು. ಈ ಸಭೆಯಲ್ಲಿ ಜಿಲ್ಲೆಯ ಮಹಿಳಾ ಪರ ಕಾರ್ಯನಿರ್ವಹಿಸುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಮಟ್ಟದ ಸಮಿತಿಗಳ ಸದಸ್ಯರು, ಅಪರ ಜಿಲ್ಲಾಧಿಕಾರಿ ಶ್ರೀ ವೀರಭದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀ ಪಾಟೀಲ್, ಶ್ರೀಮತಿ ಪಾಟೀಲ್ ಶ್ರೀರಾಜೇಂದ್ರ ಜಿಲ್ಲಾ ಶಸ್ತ್ರತಜ್ಞ ಡಾ.ಎಂ.ಜಿ.ಬೀದಿಮನಿ, ಡಿ.ವೈ.ಎಸ್.ಪಿ.ಶ್ರೀ ಪಾಟೀಲ್ ಮತ್ತಿತರರು ಅಧಿಕಾರಿಗಳು ಹಾಜರಿದ್ದರು.

ವಿದ್ಯುತ್ ಮಗ್ಗದ ನೇಯ್ಗೆ ತರಬೇತಿಗೆ ಅರ್ಜಿ ಆಹ್ವಾನ
ಬಾಗಲಕೋಟೆ, ಜ.೧೯ (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಸುವರ್ಣ ವಸ್ತ್ರ ನೀತಿ ಯೋಜನೆ ಅಡಿಯಲ್ಲಿ ೨೦೦೯-೧೦ ನೇ ಸಾಲಿಗೆ ಆಧುನಿಕ ವಿದ್ಯುತ (ರೇಪಿಯರ್) ಮಗ್ಗದಲ್ಲಿ ನೇಯ್ಗೆ ತರಬೇತಿ ಕಾರ್ಯಕ್ರಮವನ್ನು ವಿದ್ಯುತ್ ಮಗ್ಗ ಸೇವಾ ಉಪ-ಕೇಂದ್ರ, ರಬಕವಿ-ಬನಹಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯ ಅವಧಿಯು ಎರಡು ತಿಂಗಳದ್ದಾಗಿದ್ದು, ತರಬೇತಿಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಶಿಷ್ಯೆವೇತನವನ್ನು ನೀಡಲಾಗುವುದು. ತರಬೇತಿಯನ್ನು ಪಡೆಯಲು ಆಸಕ್ತಿವುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಪಡೆದು ಭರ್ತಿಮಾಡಿ ತಾಂತ್ರಿಕ ಸಹಾಯಕರು, ವಿದ್ಯುತ್ ಮಗ್ಗ ಸೇವಾ ಉಪ-ಕೇಂದ್ರ, ಉಮದಿ ಬಿಲ್ಡಿಂಗ್, ನಗರಸಭೆ ಕಾರ್ಯಾಲಯದ ಹತ್ತಿರ, ರಾಂಪೂರ, ರಬಕವಿ-ಬನಹಟ್ಟಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ತಾಂತ್ರಿಕ ಸಹಾಯಕರು, ಪೋನ ನಂ: ೨೩೦೯೯೦, ಮೋಬೈಲ ನಂ: ೯೪೮೧೪೦೩೩೧೫ ಇವರನ್ನು ಸಂಪರ್ಕಿಸಬಹುದು.

ಟಿಪ್ಪುವಿನ ಆಡಳಿತ ಅತ್ಯುತ್ತಮ

ಜನವರಿ 18, 2010

-ಶ್ರೀ ಬಿ.ಆರ್.ಜಯರಾಮರಾಜೇಅರಸ್.
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಟಿಪ್ಪುಸುಲ್ತಾನ್ ಕಾಲದ ಆಡಳಿತ ಉತ್ತಮವಿದ್ದು ಸಮರಜ್ಞಾನ, ಆಡಳಿತ, ವಿಜ್ಞಾನ, ಕೃಷಿ ನೀರಾವರಿ ಕ್ಷೇತ್ರಗಳಲ್ಲಿನ ಸಾಧನೆ ಸ್ಮರಣೀಯವಾದುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಶ್ರೀ ಬಿ.ಆರ್.ಜಯರಾಮರಾಜೇಅರಸ್ ತಿಳಿಸಿದರು.
ಅವರು ಮೈಸೂರಿನಲ್ಲಿ ಇಂದು ಪ್ರಾಚ್ಯ ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯವು ಏರ್ಪಡಿಸಿರುವ  ಟಿಪ್ಪುವಿನ ಜೀವನ ಮತ್ತು ಸಾಧನೆಗಳು” ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಟಿಪ್ಪುಸುಲ್ತಾನ್ ಹುಟ್ಟು ವಿಶೇಷವಾದುದು. ರಾಜ್ಯದ ದೇವನಹಳ್ಳಿಯಲ್ಲಿ ಜನಿಸಿ ವಿಶ್ವದೆಲ್ಲೆಡೆ ಹೆಸರು ಮಾಡಿದ್ದಾರೆ. ಕೆಲ ವಿದ್ವಾಂಸರು ಟಿಪ್ಪುಸುಲ್ತಾನನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆದಿದ್ದಾರೆ. ಮೊದಲ ಮತ್ತು ಎರಡನೇ ಮೈಸೂರು ಯುದ್ಧದಲ್ಲಿ ಅವರ ಸಾಧನೆ ಸ್ಮರಣೀಯ ರೇಷ್ಮೆ ಕೃಷಿ ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಟಿಪ್ಪುಸುಲ್ತಾನರಿಗಿದ್ದ ಮುನ್ನೋಟ ಗಮನಾರ್ಹ. ಕನ್ನಂಬಾಡಿ ಅಣೆಕಟ್ಟೆಯಂತಹ ನೀರಾವರಿ ಕಾಮಗಾರಿಗಳು,ರಾಕೆಟ್ ಉಡಾವಣೆ ಉಲ್ಲೇಖನಾರ್ಹವಾದುದು ಎಂದು ಶ್ರೀ ಜಯರಾಮರಾಜೇ ಅರಸ್ ಹೇಳಿದರು.
ಈ ಮೂರುದಿನಗಳ ವಿಚಾರಸಂಕಿರಣದಲ್ಲಿ ಒಟ್ಟು ಎಂಟು ಗೋಷ್ಠಿಗಳು ಆಯೋಜಿತವಾಗಿದ್ದು ತಜ್ಞರಿಂದ ಐವತ್ತು ಪ್ರಬಂಧಗಳು ಮಂಡನೆಯಾಗಲಿವೆ. ಇದರಲ್ಲಿ ಟಿಪ್ಪುಸುಲ್ತಾನರ ಬೆಳವಣಿಗೆ, ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಆಗಲಿ ಎಂದು ಕಾರ್ಯದರ್ಶಿ ಶ್ರೀ ಜಯರಾಮರಾಜೇಅರಸ್ ಆಶಿಸಿದರು.
ಸಂಸತ್ ಸದಸ್ಯ ಶ್ರೀ ಆರ್.ಧ್ರುವನಾರಾಯಣ್ ಮಾತನಾಡಿ ಮೈಸೂರಿನ ಹುಲಿ ಟಿಪ್ಪುಸುಲ್ತಾನ್ ಎಂಬುದು ಹೆಮ್ಮೆ ತರುವ ವಿಷಯ. ಟಿಪ್ಪುವಿನ ಸ್ಮಾರಕಗಳನ್ನು ಪತ್ತೆ ಹಚ್ಚಿ ದಾಖಲೀಕರಣ ಮಾಡಬೇಕು. ಬ್ರಿಟೀಷ್‌ರಿಂದ ಟಿಪ್ಪು ಕುರಿತು ಇತಿಹಾಸ ತಿರುಚಲಾಗಿದೆ. ಬ್ರಿಟೀಷ್‌ರ ವಿರುದ್ಧ ಹೋರಾಡಿದ ಅಪ್ರತಿಮ ವೀರ, ಸಮರ ನಿಪುಣ, ಜಾತ್ಯಾತೀತ ಮನೋಭಾವದ ಟಿಪ್ಪುವಿನ ಬಗ್ಗೆ ಅಪಪ್ರಚಾರ ಹೋಗಬೇಕು ಎಂದು ಹೇಳಿದರು.
ಎಡ್ನೋ ಮೆರೀನ್ ಆರ್ಕಿಯಾಲಜಿ ಪುಸ್ತಕ ಬಿಡುಗಡೆ ಮಾಡಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಡಾ:ನೈಜಿಲ್ ಚಾನ್ಸಲರ್ ಅವರು ಟಿಪ್ಪುವಿನ ಕೊಡುಗೆ ಸ್ಮರಣೀಯ ಎಂದರು.

ಶಾಸಕ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಮಾತನಾಡಿ ಟಿಪ್ಪುವಿನ ಸಾಧನೆ ಜೀವನ ರೋಚಕವಾದುದು. ಆಡಳಿತ ನಡೆಸಿದ್ದು ಕಡಿಮೆ ಅವಧಿಯಾದರೂ ಸಾಧನೆ ಹಿರಿದು. ಈ ಅಂತರರಾಷ್ಟ್ರೀಯ ವಿಚಾರಸಂಕಿರಣ ಚಾರಿತ್ರಿಕ ಹಿನ್ನೆಲೆ ಹೊಂದಿದ ಶ್ರೀರಂಗಪಟ್ಟಣದ ದರಿಯಾದೌಲತ್‌ನಲ್ಲಿ ಏರ್ಪಡಿಸಿದ್ದರೆ ಅರ್ಥಪೂರ್ಣವಾಗುತ್ತಿತ್ತು. ಟಿಪ್ಪುವಿನ ವಂಶಸ್ಥರಿಗೆ ಸರ್ಕಾರ ಘೋಷಿಸಿದ್ದ ನೆರವು ಕೂಡಲೇ ದೊರಕಬೇಕು. ಐತಿಹಾಸಿಕ ಚಾರಿತ್ತಿಕ ನೆಲೆಯಾದ ಶ್ರೀರಂಗಪಟ್ಟಣದಲ್ಲಿ ಸ್ಮಾರಕ ಉಳಿಸಿ ಬೆಳೆಸುವ ಹೊಣೆ ಕೇಂದ್ರಸರ್ಕಾರ ಹಾಗೂ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಬಿ.ಶೇಕ್ ಆಲಿ ಅವರು ಟಿಪ್ಪುವಿನ ಕನಸುಗಳು ಸಾಕಾರಗೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಶಾಸಕ ಶ್ರೀ ತನ್ವೀರ್‌ಸೇಠ್ ಅವರು ಮಾತನಾಡಿ ರಾಜ್ಯಸರ್ಕಾರ ಟಿಪ್ಪುವಿನ ನೆನಪಿಗೆ ಮಾಡುವ ಕಾರ್ಯಗಳು ಸಾಕಷ್ಟಿವೆ. ಟಿಪ್ಪು ಕುಟುಂಬಕ್ಕೆ ನೀಡಿದ  ಭರವಸೆ ಈಡೇರಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕರುಗಳಾಧ ಶ್ರೀ ಎಂ.ಸತ್ಯನಾರಾಯಣ, ಶ್ರೀ ಮರಿತಿಬ್ಬೇಗೌಡ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
(ಛಾಯಾಚಿತ್ರ ಕಳುಹಿಸಿದೆ.)
ಟಿಪ್ಪು ಸುಲ್ತಾನ್” ಕುರಿತು ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಶಿಕ್ಷಕರ ಭವನದಲ್ಲಿ ೧೯-೦೧-೨೦೧೦ ರಿಂದ ೨೧-೦೧-೨೦೧೦ರ ತನಕ ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ೧೫೦ನೇ ವರ್ಷಾಚರಣೆ ಪ್ರಯುಕ್ತ ಟಿಪ್ಪುಸುಲ್ತಾನ್ ಕುರಿತ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
ಈ ಪ್ರದರ್ಶನವನ್ನು ಜನವರಿ ೧೯ರಂದು ಬೆಳಿಗ್ಗೆ ೧೦-೩೦ಗಂಟೆಗೆ ದೇವನಹಳ್ಳಿ ಶಿಕ್ಷಕರ ಭವನದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರು ಹಾಗೂ ಬೆಂಗಳುರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎನ್.ಬಚ್ಚೇಗೌಡ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳಾದ ಡಾ:ಬಿ.ಶೇಕ್‌ಆಲಿ ಮತ್ತು ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳಾದ ಡಾ:ಓ.ಅನಂತರಾಮಯ್ಯ ಅವರು ಆಗಮಿಸಲಿರುವರು.
ಅಧ್ಯಕ್ಷತೆಯನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ವೆಂಕಟಸ್ವಾಮಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಕಾನೂನು ಸಚಿವರಾದ ಶ್ರೀ ಎಂ.ವೀರಪ್ಪಮೊಯಿಲಿ, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ರಾಮಚಂದ್ರೇಗೌಡ ಶ್ರೀ ಮುಮ್ತಾಜ್ ಅಲಿಖಾನ್, ಸನ್ಮಾನ್ಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಎಂ.ಪಿ.ಜಯಕುಮಾರಿ ಸೊಣ್ಣಪ್ಪ ಮುಂತಾದವರು ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಬಿ.ಆರ್.ಜಯರಾಮರಾಜೇಅರಸ್ ಹಾಗೂ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕರಾದ ಉಷಾ ಸುರೇಶ್ ಅವರು ತಿಳಿಸಿದ್ದಾರೆ.
ಸಂಕ್ರಾಂತಿಯ ಸೊಗಡು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆ
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಅರಣ್ಯ ಮತ್ತು ಪರಿಸರ ಇಲಾಖೆ ಇವರ ವತಿಯಿಂದ ಜನವರಿ ೧೭ರಂದು ಮಧ್ಯಾಹ್ನ ೩ ರಿಂದ ೫ ಗಂಟೆಯವರೆಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ’ ಸಂಕ್ರಾಂತಿ ಸೊಗಡು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆ’ ಕುರಿತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಸಂಸದರಾದ ಅಡಗೂರು ವಿಶ್ವನಾಥ್ ಅವರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸಿ.ಎಫ್.ಟಿ.ಆರ್.ಐ.ನ ನಿರ್ದೇಶಕರಾದ ಪದ್ಮಶ್ರೀ ಡಾ:ವಿ.ಪ್ರಕಾಶ್ ಅವರು ನೆರವೇರಿಸುವರು.
ಶ್ರೀ ಎಂ.ಎನ್.ಜಯಕುಮಾರ್, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಶ್ರೀ ಗೌರಯ್ಯ ಕರಕುಶಲ ಕಲೆಗಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಶ್ರೀ ಕೃಪಾಕರ ಸೇನಾನಿ ಇವರನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಹಾಗೂ ವಿವಿಧ ರಂಗಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಮೈಸೂರು ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಂತೆ ಮೈಸೂರು ಮೃಗಾಲಯದ ಒಂದು ಚಿರತೆ ಮರಿಯನ್ನು ಬೆಂಗಳೂರಿನ ಎತನ್ ಮಾರ್ಟಿನ್, ಗದಗ್‌ನ ಕು:ಸ್ಪೂರ್ತಿ ಹೊಂಬಾಳೆ ಒಂದು ನವಿಲು, ಮೈಸೂರಿನ ಎ.ಸಿ.ಶೇಖರ್ ಒಂದು ಲವ್‌ಬರ್ಡ್, ಜಿಯಸ್ ಬೈಯೊಟೆಕ್ ಲಿ. ಬೆಳಗೊಳ ಇಂಡಸ್ಟ್ರಿಯಲ್ ಮೈಸೂರು ಅವರು ಒಂದು ಫ್ಲೆಮಿಂಗೂ ಹಾಗೂ ಬೆಂಗಳೂರಿನ ಅಭಿಜಿತ್ ಆನಂದ್ ಮತ್ತು ದೇವರ್ದಿಮಿಲಿಂದ್ ಅವರು ಒಂದು ಕಾಕ್‌ಟೆಲ್ ದತ್ತು ಪಡೆದಿದ್ದಾರೆ.
ಜಿಲ್ಲೆಯಲ್ಲಿ ೩.೯೭ಲಕ್ಷ ಅಡುಗೆ ಅನಿಲ ಗ್ರಾಹಕರು
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಮೈಸೂರು ಜಿಲ್ಲೆಯಲ್ಲಿ ಒಟ್ಟು ೨೬ ಕಂಪನಿಗಳಿಂದ ೩,೯೭,೬೧೫ ಜನ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿದ್ದು, ಗ್ರಾಹಕರ ಅನುಕೂಲಕ್ಕಾಗಿ ಅನಿಲ ಸಿಲೆಂಡರ್‌ಗಳ ಲಭ್ಯತೆ ಮಾಹಿತಿಯನ್ನು ತಿತಿತಿ.mಥಿsoಡಿe.ಟಿiಛಿ.iಟಿ <hಣಣಠಿ://ತಿತಿತಿ.mಥಿsoಡಿe.ಟಿiಛಿ.iಟಿ> ಅಂತರಜಾಲದ ಮೂಲಕ ಪ್ರತಿದಿನ ಪ್ರಕಟಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಶ್ರೀ ಬೆಟ್‌ಸೂರಮಠ ಅವರು ಇಂದು ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಗೆ ತಿಳಿಸಿದರು.
ಗ್ಯಾಸ್ ಏಜೆನ್ಸಿಗಳವರು ಗ್ಯಾಸ್ ಸೇವೆ ಒದಗಿಸುವಲ್ಲಿ ಏನಾದರೂ ತೊಂದರೆ ಮಾಡಿದಲ್ಲಿ ಸಹಾಯವಾಣಿ ೧೦೭೭ ದೂರವಾಣಿ ಸಂಖ್ಯೆಗೆ ದೂರುಗಳನ್ನು ನೀಡುವಂತೆ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.
೫ ಕಿ.ಮೀ. ವ್ಯಾಪ್ತಿಯಲ್ಲಿ ಗ್ಯಾಸ್ ಸಂಪರ್ಕದಾರರಿಗೆ ಗ್ಯಾಸ್ ಸರಬರಾಜಿಗಾಗಿ ಯಾವುದೇ ಸರಬರಾಜು ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದ ಅಪರ ಜಿಲ್ಲಾಧಿಕಾರಿಗಳು, ಅಡುಗೆ ಅನಿಲ ಗ್ರಾಹಕರು ಆಗಿಂದಾಗ್ಗೆ ತಮ್ಮ ಗ್ಯಾಸ್ ಟ್ಯೂಬ್, ಸ್ಟೌವ್ ಇತ್ಯಾದಿಗಳ ತಪಾಸಣೆಯನ್ನು ಸುರಕ್ಷತೆ ದೃಷ್ಠಿಯಿಂದ ಮಾಡಿಸಿಕೊಳ್ಳುವಂತೆ ಸೂಚಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಾದ ಶ್ರೀ ಶಿವಣ್ಣ ಅವರು ಮಾತನಾಡಿ ಅಡುಗೆ ಅನಿಲ ನೂತನ ಸಂಪರ್ಕ ಪಡೆಯುವಾಗ ಗ್ರಾಹಕರಿಗೆ ಗ್ಯಾಸ್ ಸ್ಟೌವ್ ಖರೀದಿಸುವಂತೆ ಕಡ್ಡಾಯ ಮಾಡಬಾರದೆಂದು ಅನಿಲ ಕಂಪನಿಗಳ ಏಜೆನ್ಸಿಯವರಿಗೆ ತಿಳಿಸಿದ್ದಾರೆ. ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಅಡುಗೆ ಅನಿಲ ಸುರಕ್ಷತೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಏಪ್ರಿಲ್ ೨೦೦೯ ರಿಂದ ಇಲ್ಲಿಯವರೆಗೆ ೨೦೦ ದಾಳಿಗಳನ್ನು ಮಾಡಿ ೭೨ ಪ್ರಕರಣಗಳನ್ನು ದಾಖಲಿಸಿಕೊಂಡು ೨೭೮ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ೨೦೦೮-೦೯ನೇ ಸಾಲಿನಲ್ಲಿ ೨೯೩ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಎರೆಹುಳು ಗೊಬ್ಬರ ಕೃಷಿಗೆ ಶ್ರೇಷ್ಟವಾದದು
ಕೋಲಾರ, ಜನವರಿ ೧೬ :                                              ನಂ : ೪೦-೮೯೩
ಬೇಸಾಯ ಪದ್ಧತಿಯಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಕೊಟ್ಟಿಗೆ  ಗೊಬ್ಬರದ ಕೊರತೆಯನ್ನು ನೀಗಿಸುವ ದೆಸೆಯಲ್ಲಿ ಎರೆಗೊಬ್ಬರವು ಒಂದು ಉತ್ತಮವಾದ ಸಾವಯವ ಗೊಬ್ಬರವಾಗಿದೆ.
ಎರೆಗೊಬ್ಬರವು ಸಸ್ಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಸಸ್ಯವರ್ಧಕಗಳನ್ನು ಸಹ ಒದಗಿಸುತ್ತದೆ.  ಎರೆಹುಳುಗೊಬ್ಬರದ ಉತ್ಪಾದನೆಯು ಬಹಳ ಸುಲಭ ಮತ್ತು ಕಡಿಮೆ ಖರ್ಚಿನದು.  ಸ್ಥಳೀಯವಾಗಿ ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಮತ್ತು ಪ್ರೋತ್ಸಾಹಿಸಲು ಕಡಿಮೆ ವೆಚ್ಚದ ಒಂದು ಜೋಡಿ ಎರೆಹುಳು ತೊಟ್ಟಿಗಳ ಘಟಕ ಸ್ಥಾಪನೆಗೆ ತಗಲುವ ಶೇ.೫೦ ಭಾಗ ವೆಚ್ಚ ರೂ.೪೦೦೦/- ಕ್ಕೆ ಮೀರದಂತೆ ಸಹಾಯಧನ ನೀಡಲಾಗುತ್ತದೆ.
ಪ್ರತಿ ಸ್ವ-ಸಹಾಯ/ಸ್ತ್ರೀಶಕ್ತಿ ಗುಂಪಿಗೂ ಆದ್ಯತೆ ಇರುತ್ತದೆ.
ಎರೆಹುಳು ಗೊಬ್ಬರ ಉತ್ಪಾದನಾ ಘಟಕಗಳ ವಿನ್ಯಾಸ, ನಿರ್ದಿಷ್ಟತೆಗಳು ಇಲಾಖಾ ಮಾರ್ಗಸೂಚಿಯನ್ನು ಅನ್ವಯಿಸುವಂತಿರಬೇಕು.  ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.  ಸಾವಯವ ವಸ್ತುವನ್ನು ಮಣ್ಣಿಗೆ ಹೆಚ್ಚಿನ ರೀತಿಯಲ್ಲಿ ಸೇರಿಸಲು ಹಸಿರೆಲೆ ಗೊಬ್ಬರ(ಸೆಣಬು) ಬೀಜವನ್ನು ಇಲಾಖೆಯ ಸಹಾಯಧನದಲ್ಲಿ ಶೇ.೫೦ ರ ರಿಯಾಯಿತಿಯಲ್ಲಿ ಹೆಕ್ಟೇರ್‌ಗೆ ರೂ.೫೦೦/- ಗರಿಷ್ಟ ಮಿತಿ ಮೀರದಂತೆ ಅಥವಾ ಪ್ರತಿ ಕೆ.ಜಿ. ಬೀಜಕ್ಕೆ ೨೨.೫ ರೂ.ನಂತೆ ರೈತರಿಗೆ ವಿತರಿಸಲಾಗುವುದು.
ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗಿರುವುದರಿಂದ ನೀರಿನ ಮಿತ ಬಳಕೆಯಲ್ಲಿ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಚಿiಲ್ಲಿ ಕೃಷಿ ಇಲಾಖೆ ವತಿಯಿಂದ ಲಘು ನೀರಾವರಿ ಯೋಜನೆಯಡಿ  ತುಂತುರು ನೀರಾವರಿ ಘಟಕ ಉಪಕರಣಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಆಸಕ್ತಿಯಿರುವ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸುವ ರೈತರು ಮೊದಲು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ ನಂತರ ನಿಗದಿತ ನಮೂನೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯೊಂದಿಗೆ ಪಹಣಿ, ಪರಿಶಿಷ್ಟ ಜಾತಿ/ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ, ನೀರಿನ ಲಭ್ಯತೆಯ ಪ್ರಮಾಣಪತ್ರ, ಸದರ ಘಟಕಕ್ಕೆ ಇತರೆ ಇಲಾಖೆಗಳಾದ ತೋಟಗಾರಿಕೆ/ರೇಷ್ಮೆ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲವೆಂಬ ದೃಢೀಕರಣ ಪತ್ರದ ದಾಖಲೆಗಳನ್ನು ಸಲ್ಲಿಸಬೇಕು.
ಸಂಬಂಧಪಟ್ಟ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರು ಅರ್ಜಿ ಸಲ್ಲಿಸಿದ ರೈತರ ಸ್ಥಳ ಪರಿಶೀಲನೆ ಮಾಡಿದ ನಂತರ ಜೇಷ್ಠತಾನುಸಾರ ರೈತರ ವಂತಿಗೆಯನ್ನು ಡಿ.ಡಿ. ರೂಪದಲ್ಲಿ ಸಂಬಂಧಪಟ್ಟ ಸರಬರಾಜುದಾರರ/ಡೀಲರ್ ಹೆಸರಿನಲ್ಲಿ ಪಡೆದು ತುಂತುರು ನೀರಾವರಿ ಘಟಕಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಟಾನಗೊಳಿಸಲಾಗುತ್ತದೆ.
ಒಂದು ಹೆಕ್ಟೇರ್ ಪ್ರದೇಶಕ್ಕೆ ೧೫೦೦೦/- ರೂ.ಗಳ ಸಹಾಯಧನವನ್ನು ನೀಡಲಾಗುತ್ತದೆ.  ಉಳಿದ ಮೊತ್ತವನ್ನು ರೈತರು ಭರಿಸಬೇಕಾಗುತ್ತದೆ.
ಕೃಷಿ ಸಂಸ್ಕರಣೆ ಘಟಕಗಳನ್ನು ಪ್ರಾರಂಭಿಸಲು ಸಂಸ್ಕರಣೆಗೆ ಒಳಪಡುವ ಬೆಳೆಗಳ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ/ಮಹಿಳಾ ಸ್ವ-ಸಹಾಯ ಗುಂಪುಗಳಿಗೆ/ಸರ್ಕಾರೇತರ ಸಂಸ್ಥೆಗಳಿಗೆ ಸಹಾಯಧನವನ್ನು ಶೇ.೫೦ ರಷ್ಟು ಗರಿಷ್ಠ ೬೫೦೦೦/- ರೂ.ಗಳು ಮ್ಭಿರದಂತೆ ಎಲ್ಲಾ ರೀತಿಯ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳು/ಮೌಲ್ಯವರ್ಧಿತ ವಸ್ತುಗಳನ್ನು ನೀಡಲಾಗುತ್ತದೆ.
ಆಸಕ್ತಿಯಿರುವ ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು, ಕೋಲಾರ ಇವರನ್ನು ಸಂಪರ್ಕಿಸಲು ಕೋರಿದೆ.
ಅರಿವು ಮೂಡಿಸುವ ಕಾರ್ಯಕ್ರಮ
ಕೋಲಾರ, ಜನವರಿ ೧೬ :                                              ನಂ : ೪೧-೮೯೪
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೋಲಾರ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ‘ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅರಿವು ಮೂಡಿಸುವ ಕಾರ್ಯಕ್ರಮ’ ವನ್ನು ಜನವರಿ ೧೮ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಯಾದವ ಕಲ್ಯಾಣ ಮಂಟಪ, ಸೋಮೇಶ್ವರಪಾಳ್ಯ, ಮುಳಬಾಗಿಲು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಸಕ ಅಮರೇಶ್ ಕಾರ್ಯಕ್ರಮ ಉದ್ಘಾಟಿಸುವರು.  ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸರಸಮ್ಮ ಕೃಷ್ಣಪ್ಪ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶ್ಯಾಮಲಮ್ಮ ವೆಂಕಟೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಾಮೇಗೌಡ, ಕೃಷ್ಣಪ್ಪ, ವಿಜಯಲಕ್ಷ್ಮಮ್ಮ, ಕೋಕಿಲಮ್ಮ, ಯಶೋಧಮ್ಮ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕೆ.ಇ.ತಿಮ್ಮಪ್ಪ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಜಯಪ್ರಕಾಶ್ ಸಾಮುದ್ರೆ ಭಾಗವಹಿಸುವರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶಾಲ್ಮಲಾ ಕರಕುಶಲ ಮಳಿಗೆ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೬ : ಹುಬ್ಬಳ್ಳಿಯ ವಿಮಾನ ನಿಲ್ದಾಣ ಆವರಣದಲ್ಲಿ ಧಾರವಾಡ ಜಿಲ್ಲಾ ಪಂಚಾಯತ , ನಬಾರ್ಡ್ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇವರುಗಳ ಸಹಯೋಗದಲ್ಲಿ ನಿರ್ಮಾಣಗೊಂಡ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ’ ಶಾಲ್ಮಲಾ ’ ಮಳಿಗೆಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಜಗದೀಶ ಶೆಟ್ಟರ ಇಂದಿಲ್ಲಿ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕದ ಕರಕುಶಲ ನೈಪುಣ್ಯತೆಯನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಸ್ಥಳದಲ್ಲಿ ಪ್ರವಾಸಿ ಗ್ರಾಹಕರಿಗೆ ಪರಿಚಯಿಸುವ ಮತ್ತು ಅತ್ಯುತ್ತಮ ಗೃಹಾಲಂಕಾರ , ನಿತ್ಯೋಪಯೋಗಿ ಸ್ಥಳೀಯ ಉತ್ಪಾದಿತ ಕುಶಲ ವಸ್ತುಗಳಿಗೆ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ’ ಶಾಲ್ಮಲಾ ’ ಮಳಿಗೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ . ಇದಕ್ಕೆ ಲಭಿಸುವ ಪ್ರತಿ ಕ್ರಿಯೆಯನ್ನು ಅವಲಂಬಿಸಿ ಇದರ ವಿಸ್ತರಣೆಗೂ ಅವಕಾಶ ಮುಕ್ತವಾಗಿದೆ ಎಂದರು . ಧಾರವಾಡ ಜಿಲ್ಲಾ ಪಂಚಾಯತ ಹೆಚ್ಚಿನ ಆಸಕ್ತಿ ವಹಿಸಿ ರಾಜ್ಯದಲ್ಲೇ ಪ್ರಥಮ ಎನ್ನುವ ಇಂತಹ ಒಂದು ಯತ್ನಕ್ಕೆ ಕೈ ಹಾಕಿದೆ .  ನಮ್ಮ ಸಂಸ್ಕೃತಿ , ಗ್ರಾಮೀಣ ಸೊಗಡನ್ನು ಇಂದಿನ ಪೀಳಿಗೆಗೂ ಹಾಗೂ ದೇಶಿ ವಿದೇಶಿ ಪ್ರವಾಸಿಗರಿಗೂ ಪರಿಚಯಸುವ ಈ ಮಳಿಗೆಯು ವಸ್ತುಗಳ ವೈಶಿಷ್ಟ್ಯತೆ ಪರಿಚಯಿಸುವ ಹಾಗೂ ನೇರ ಖರೀದಿಗೆ ಅವಕಾಶ ಕಲ್ಪಿಸುವ ವೇದಿಕೆ ಆಗಲಿದೆ  ಎಂದು ಶ್ರೀ ಜಗದೀಶ ಶೆಟ್ಟರ ಆಶಯ ವ್ಯಕ್ತಪಡಿಸಿದರು .
ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಿ. ಶಿಖಾ ಅವರು ಈ ಸಂದರ್ಭದಲ್ಲಿ ಮಾತನಾಡಿ ಸ್ವರ್ಣ ಜಯಂತಿ ಸ್ವರೋಜಗಾರ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೪೦ ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸ್ವತ್ತಿನ ನಿರ್ಮಾಣ ಕೈಕೊಳ್ಳಲಾಗಿದೆ . ಅದರಲ್ಲಿ ’ ಶಾಲ್ಮಲಾ ’ ಮಳಿಗೆ ಕೂಡಾ ಒಂದಾಗಿದ್ದು ಇದಕ್ಕೆ ೫.೮೩ ಲಕ್ಷ ರೂ. ವೆಚ್ಚವಾಗಿದೆ . ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅತ್ಯಂತ ಕಡಿಮೆ ದರದಲ್ಲಿ ವಾರ್ಷಿಕ ಬಾಡಿಗೆ ಆಕರಿಸಿ ಇದಕ್ಕಾಗಿ ಜಾಗೆಯನ್ನು ನೀಡಿದೆ . ನಬಾರ್ಡ್ ಸಂಸ್ಥೆ ಒಂದು ವರ್ಷದ ಮಳಿಗೆ ಆವರ್ತಕ ವೆಚ್ಚ ವಹಿಸಲು ಒಪ್ಪಿಕೊಂಡಿದೆ . ಜಿಲ್ಲಾ ಕೈಗಾರಿಕಾ ಉತ್ಪಾದಕ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘ ಮಳಿಗೆಯನ್ನು ನಡೆಯಿಸುವ ಹೊಣೆ ಹೊತ್ತಿದೆ ಎಂದು ತಿಳಿಸಿದರು . ಸಂಪೂರ್ಣವಾಗಿ ಧಾರವಾಡ ಜಿಲ್ಲಾ ಪಂಚಾಯತನ ಕನಸಿನ ಕೂಸಾಗಿರುವ ಈ ಮಳಿಗೆಯಲ್ಲಿ ಧಾರವಾಡ , ಗದಗ , ಬೆಳಗಾವಿ , ಬಾಗಲಕೋಟೆ , ಬೀದರ ಹಾಗೂ ಕಾರವಾರ ಜಿಲ್ಲೆಗಳಲ್ಲಿನ ದೇಶಿ ವಸ್ತುಗಳು ಇಲ್ಲಿ ಮಾರಾಟಕಿದ್ದು ಕೆಲವು ಉತ್ಪನ್ನಗಳು ವಿದೇಶಿಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಕುರಿತು ಅವರು ಉಲ್ಲೇಖಿಸಿದರು .
ಸಮಾರಂಭದಲ್ಲಿ   ಧಾರವಾಡ    ಜಿಲ್ಲಾ   ಪಂಚಾಯತ   ಅಧ್ಯಕ್ಷೆ   ಶ್ರೀಮತಿ  ಸಾವಿತ್ರಮ್ಮ   ಭಗವತಿ   ಉಪಾಧ್ಯಕ್ಷ ಶ್ರೀ ಎಸ್. ಐ. ಚಿಕ್ಕಣ್ಣವರ , ಜಿಲ್ಲಾ ಪಂಚಾಯತ ಸದಸ್ಯರು , ಜಿಲ್ಲಾ ಪಂಚಾಯತ ಅಧಿಕಾರಿಗಳು ಹುಬ್ಬಳ್ಳಿ ಹ್ಯಾಂಡಿಕ್ಯಾಪ್ಡ ಹಾಸ್ಪಿಟಲ್‌ನ ನಿರ್ದೇಶಕರು , ಇಕ್ವಿಪ್ ಇಂಡಿಯಾ ಸೆಂಟರಿನ ಅಧಿಕಾರಿಗಳು ಉಪಸ್ಥಿತರಿದ್ದರು .
ಮಳಿಗೆ  ಉದ್ಘಾಟನೆ  ನಂತರ  ರಾಜ್ಯದ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯ ,   ಶಾಸಕರುಗಳಾದ  ಶ್ರೀ ಸಂತೋಷ ಲಾಡ್ ,  ಹಾಗೂ  ರಾಜ್ಯ  ನೆರೆ  ಸಂತ್ರಸ್ತರ  ಪುನರ್ವಸತಿ  ವ್ಯವಹಾರಗಳ  ಆಯುಕ್ತ ಶ್ರೀ ಜಾಮದಾರ ಅವರುಗಳು ಮಳಿಗೆಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು .
ಸಂಚಾರಕ್ಕೆ ಹೆಚ್ಚುವರಿ ಸುವರ್ಣ ಸಾರಿಗೆ ವಾಹನಗಳು

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೬ : ಸಾರ್ವಜನಿಕ ಪ್ರಯಾಣಿಕರಿಗೆ ತೃಪ್ತಿಕರ ಸಾರಿಗೆ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ವಿಭಾಗದ ಕಾರ್ಯಾಚರಣೆ ವ್ಯಾಪ್ತಿಗೆ ನೂತನ ೧೩  ಸುವರ್ಣ ಸಾರಿಗೆ  ಬಸ್ಸುಗಳನ್ನು ಹುಬ್ಬಳ್ಳಿ ವಿಜಾಪೂರ ಮತ್ತು ಹುಬ್ಬಳ್ಳಿ – ಇಡಗುಂಜಿ ಮಾರ್ಗದ ಮದ್ಯೆ ಸಾರಿಗೆ ನಡೆಸುವ ಎರಡು ನೂತನ   ವಾಯುವ್ಯ ಸಾರಿಗೆ  ವಾಹನಗಳ ಸೌಲಭ್ಯ ಪ್ರಾರಂಭಿಸಿದೆ . ಈ ವಾಹನಗಳ ಸಂಚಾರ ಕಾರ್ಯಕ್ರಮಕ್ಕೆ ಇಂದು ದಿ. ೧೬ ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಜಗದೀಶ ಶೆಟ್ಟರ ಅವರು ಚಾಲನೆ ನೀಡಿದರು .  ಈ ಸಂದರ್ಭದಲ್ಲಿ  ಸಂಸದರಾದ  ಶ್ರೀ ಪ್ರಲ್ಹಾದ ಜೋಶಿ ,  ಶಾಸಕರುಗಳಾದ ಶ್ರೀ ವೀರಭದ್ರಪ್ಪ ಹಾಲಹರವಿ , ಶ್ರೀ ಮೋಹನ ಲಿಂಬಿಕಾಯಿ ,   ಸಾರಿಗೆ  ಸಂಸ್ಥೆ  ಅಧ್ಯಕ್ಷ  ಶ್ರೀ ಮಲ್ಲಿಕಾರ್ಜುನ ಸಾವಕಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎ. ಎನ್. ಪಾಟೀಲ ಅವರು ಉಪಸ್ಥಿತರಿದ್ದರು .

ದಿನಾಂಕ. ೧೮ ರಂದು ನಗರಾಭಿವೃದ್ಧಿ ನೀತಿ ಕುರಿತು ಕಾರ್ಯಾಗಾರ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೬ : ಸೋಮವಾರ ದಿನಾಂಕ. ೧೮ ಮುಂಜಾನೆ ೧೦ ಗಂಟೆಗೆ ಬಿವಿಬಿ ಇಂಜನೀಯರಿಂಗ್ ಕಾಲೇಜಿನ ಬಯೋಟೆಕ್ ಅಡಿಟೋರಿಯರದಲ್ಲಿ ನಗರಾಭಿವೃದ್ಧಿ ನೀತಿಯ ಕುರಿತಂತೆ ಕಾರ್ಯಾಗಾರ ಜರುಗಲಿದೆ . ಕಾಯಾಗಾರದ ಅಧ್ಯಕ್ಷತೆಯನ್ನು ರಾಜ್ಯದ ನಗರಾಭಿವೃದ್ಧಿ ಸಚಿವರಾದ ಶ್ರೀ ಸುರೇಶ ಕುಮಾರ ವಹಿಸಲಿದ್ದು ಮುಖ್ಯಮಂತ್ರಿಗಳ ನಗರ ವಿಷಯಗಳ ಸಲಹೆಗಾರ ಡಾ|| ಎ. ರವೀಂದ್ರ ನಗರಾಭಿವೃದ್ಧಿ ನೀತಿ ಕುರಿತು ಪ್ರಾತ್ಯಕ್ಷಿತೆ ನೀಡುವರು .

ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ
ಬೀದರ, ಜ.೧೬: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಟ ಕೂಲಿ ದರವನ್ನು ನೂರು ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.
೨೦೦೯ರ ಎಪ್ರಿಲ್‌ನಿಂದ ಅನ್ವಯವಾಗುವಂತೆ ಕನಿಷ್ಟ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಆದರೆ ೨೦೦೯ರ ಡಿಸೆಂಬರ್ ೩೧ರ ವರೆಗೆ ಅನುಷ್ಟಾನಗೊಳಿಸಲಾದ ಎಲ್ಲಾ ಕಾಮಗಾರಿಗಳ ಸಂಬಂಧ ಕನಿಷ್ಟ ಕೂಲಿ ದರವನ್ನು ರೂ. ೮೨ಅನ್ವಯಿಸಿ ಅನುಷ್ಟಾನಗೊಳಿಸಲಾಗುವುದು. ಹಾಗೂ ಸದರಿ ಕೂಲಿ ದರವನ್ನು ಪಾವತಿಸಲಾಗುವುದು.
ಎಪ್ರಿಲ್ ೨೦೦೯ರಿಂದ ಡಿಸೆಂಬರ್ ೩೧ರವರೆಗೆ ಕೆಲಸ ನಿರ್ವಹಿಸಿರುವ ಎಲ್ಲಾ ನೊಂದಾಯಿತ ಕೂಲಿ ಕಾರ್ಮಿಕರಿಗೆ ನಿರ್ವಹಿಸುವ ಕೆಲಸಕ್ಕೆ ಅನುಗುಣವಾಗಿ ಪರಿಷ್ಕೃತ ಕನಿಷ್ಟ ಕೂಲಿ ದರದಲ್ಲಿನ ವ್ಯತ್ಯಾಸದ ಬಾಕಿ ಮೊತ್ತವನ್ನು ಸರ್ಕಾರದ ನಿರ್ದೇಶನ ಬಂದ ಬಳಿಕ ಪ್ರತ್ಯೇಕವಾಗಿ ಪಾವತಿಸಲಾಗುವುದು. ೨೦೧೦ರ ಜನವರಿ ೧ರಿಂದ ಪ್ರಾರಂಭವಾಗುವ ಎಲ್ಲಾ ಕಾಮಗಾರಿಗಳಿಗೆ ಅನ್ವಯವಾಗುವಂತೆ ಅಂದಾಜು ಪಟ್ಟಿಗಳನ್ನು ತಯಾರಿಸಿ ಅನುಷ್ಟಾನಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಮುದ್ರೋತ್ಪನ್ನ ರಫ್ತಿಗೆ ಕ್ಯಾಚ್ ಸರ್ಟಿಫಿಕೆಟ್
ಮಂಗಳೂರು ಜನವರಿ ೧೨: (ಕರ್ನಾಟಕ ವಾರ್ತೆ)-ಕಾನೂನು ಬಾಹಿರ, ಬೇನಾಮಿ ಮತ್ತು ಅನಿರ್ಬಂಧಿತ ಮೀನುಗಾರಿಕೆ ತಡೆಗೆ ಮತ್ತು ಹಿಡಿದ ಮೀನಿಗೆ ನ್ಯಾಯಯುತ ಬೆಲೆ ದೊರಕಿಸಲು ಯರೋಪಿಯನ್ ಯೂನಿಯನ್  ಕ್ಯಾಚ್ ಸರ್ಟಿಫಿಕೆಟ್ ಸ್ಥಿರೀಕರಣ ವ್ಯವಸ್ಥೆಯ ಜಾರಿಗೆ ನಿರ್ಧರಿಸಿದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಮೀನುಗಾರಿಕೆ ಬೋಟ್ ಗಳ ಮಾಲೀಕರ ಮತ್ತು ಸಾಗರೋತ್ಪನ್ನ ರಫ್ತುದಾರರ ಸಹಕಾರವನ್ನು ಕೋರಿರುವ ಎಫ್ ಎ ಒ ಮತ್ತು ಇಂಡಿಯನ್ ಒಸಿಯನ್ ಟ್ಯೂನಾ ಕಮಿಷನ್ ನಂತಹ ಪ್ರಾಂತೀಯ ಮೀನುಗಾರಿಕಾ ನಿರ್ವಹಣಾ ಸಂಘಟನೆಗಳು ಈ ವ್ಯವಸ್ಥೆಗೆ ಮುಂದಾಗಿದೆ.
ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುವ ಮೀನು,ಸಿಗಡಿ,ಕಟಲ್ ಫಿಶ್ ಮುಂತಾದವುಗಳು ನ್ಯಾಯ ಸಮ್ಮತ (ಸ್ಥಿರೀಕರಿಸಿದ)ಕ್ಯಾಚ್ ಸರ್ಟಿಫಿಕೇಟ್ ಗಳನ್ನು ಹೊಂದಿರುವ ಅವಶ್ಯಕತೆ ಬಗ್ಗೆ ಯುರೋಪಿಯನ್ ಕಮಿಷನ್ ಹೊಸ ನಿಯಮ ಹೊರತಂದಿದೆ. ಮೀನುಗಾರಿಕೆ ನಡೆಸಿದ ಪ್ರದೇಶ ಮತ್ತು ಬಂದರಿಗೆ ತಲುಪಿದ ಬಗ್ಗೆ ತಿಳಿದುಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ.
೨೦೧೦ನೇ ಇಸವಿಯ ಜನವರಿ ೧ ಮತ್ತು ನಂತರ ಸಮುದ್ರದಿಂದ ಹಿಡಿದು ರಫ್ತು ಮಾಡುವ ಸರಕುಗಳಿಗೆ ಅನ್ವಯವಾಗುತ್ತದೆ. ನೇರವಾಗಿ ಅಥವಾ ಅನ್ಯದೇಶದ ಮೂಲಕ ರಫ್ತು ಮಾಡುವ ಸರಕುಗಳೀಗೆ ಈ ನಿಯಮ ಲಾಗು ಆಗುತ್ತದೆ. ಸಮುದ್ರೋತ್ಪನ್ನವನ್ನು ರಫ್ತು ಮಾಡುವ ಎಲ್ಲ ದೇಶಗಳು ಈ ಅಗತ್ಯತೆಯನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿರುತ್ತವೆ ಮತ್ತು ಈ ಬಗ್ಗೆ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ತಿಳಿಸಿರುತ್ತವೆ.
ಉದ್ದಿಮೆಯಿಂದ (ಬೋಟ್ ಮಾಲಿಕರು ಅಥವಾ ರಫ್ತುದಾರರು) ನೀಡಲ್ಪಡುವ ಕ್ಯಾಚ್ ಸರ್ಟಿಫಿಕೇಟ್ ಗಳು ಸರಕಾರಿ ಪ್ರಾಧಿಕಾರದಿಂದ ಸ್ಥಿರೀಕರಿಸಿ ಮೇಲು ರುಜು ಹೊಂದಿರಬೇಕು. ರಫ್ತು ಮಾಡುವ ರಾಷ್ಟ್ರಗಳು,ಕೆಲವು ವಿಷಯಗಳ ಬಗ್ಗೆ ಆಳವಾಗಿ ಎಚ್ಚರಿಕೆ ವಹಿಸುವ ಬಗ್ಗೆ ಅಗತ್ಯ ಇರುತ್ತದೆ.
ಪ್ರತಿ ವರ್ಷ ೨೮೦೦ ಕೋಟಿ ರೂ. ಬೆಲೆಯ ಸಾಗರೋತ್ಪನ್ನಗಳು ಭಾರತದಿಂದ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಯುರೋಪ್ ಒಕ್ಕೂಟ ರಾಷ್ಟ್ರಗಳ ಮಾರುಕಟ್ಟೆ ಪ್ರಾಮ್ಯುಖತೆಯನ್ನು ಪರಿಗಣಿಸಿ ಕ್ಯಾಚ್ ಸರ್ಟಿಫಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತ ಸರ್ಕಾರ, ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ.
ಎಂಪಿಡಾ (ಮೆರೈನ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪಮೆಂಟ್ ಅಥಾರಿಟಿ) ಈಗಾಗಲೇ ಬೋಟ್ ಗಳ ಮೂಲಕ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ರಫ್ತುದಾರರಿಗೆ ತಲುಪುವ ಹಿಡುವಳಿಯ ನಿಗಾ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ಸ್ಥಿರೀಕರಣ ಕಾರ್ಯ ಆರಂಭಿಸಿದೆ. ಮೊದಲ ಹಂತವಾಗಿ ಬೋಟ್ ಗಳಿಗೆ ಲಾಗ್ ಬುಕ್ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ನಮೂನೆಯನ್ನು ಪುಕ್ಕಟೆಯಾಗಿ ಒದಗಿಸಲು ನಿಶ್ಚಯಿಸಿದೆ. ಹಿಡುವಳಿಯನ್ನು ನಮೂದಿಸುವ ಕ್ಯಾಚ್ ಸರ್ಟಿಫಿಕೆಟ್ ಗಳನ್ನು ವೇಗವಾಗಿ ಸ್ಥಿರೀಕರಿಸುವ ನಿಟ್ಟಿನಲ್ಲಿ ಗಣಕೀಕರಣದ ವ್ಯವಸ್ಥೆಯನ್ನು ಮಾಡಿವೆ.
ವ್ಯವಸ್ಥೆಯ ಅನುಷ್ಠಾನಕ್ಕೆ ಎಲ್ಲ ಬೋಟ್ ಮಾಲೀಕರ ಸಹಕಾರವನ್ನು ಎಂಪಿಡಾ ಬಯಸಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ  ೧೮೦೦-೪೨೫-೧೫೧೫, ೧೮೦೦-೪೨೫-೧೬೭೬, ೧೮೦೦-೪೨೫-೦೧೬೦ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳ ಪರಿಶೀಲನೆ
ಮಡಿಕೇರಿ ಜ.೧೬ (ಕರ್ನಾಟಕ ವಾರ್ತೆ):- ನಗರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಗತ್ಯ ಜಾಗಕ್ಕಾಗಿ ವಿಧಾನಸಭಾಧ್ಯಕ್ಷರಾದ  ಕೆ.ಜಿ.ಬೋಪಯ್ಯ ಮತ್ತು ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚುರಂಜನ್ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಸುದರ್ಶನ ಅತಿಥಿ ಗೃಹಕ್ಕೆ ಹೊಂದಿಕೊಂಡಿರುವ ಇತ್ತೀಚೆಗೆ ಖಾಸಗಿ ಒತ್ತುವರಿದಾರರಿಂದ ತೆರವುಗೊಳಿಸಿದ ೧ ಎಕರೆ ಸರ್ಕಾರಿ ಜಾಗದ ಒಂದು ಭಾಗವನ್ನು  ಲೋಕೋಪಯೋಗಿ  ಇಲಾಖೆಯ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿರಿಸಿ ಉಳಿದ ಜಾಗವನ್ನು ಸಂಪೂರ್ಣವಾಗಿ ನಗರಸಭೆಗೆ ಪಾರ್ಕ್ ನಿರ್ಮಾಣಕ್ಕೆ ಮೀಸಲಿರಿಸಲು ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ನಗರಸಭೆಯ ಎನ್. ಎಫ್. ಸಿ ಅನುದಾನದ ೧ ಕೋಟಿ ರೂ.ಗಳನ್ನು ಈ ಜಾಗದಲ್ಲಿ ಅತ್ಯುತ್ತಮವಾದ ಪಾರ್ಕ್ ನಿರ್ಮಾಣಕ್ಕೆ ಮೀಸಲಿರಿಸುವಂತೆ ಹಾಗೂ ಇದರಲ್ಲಿ ಇರುವ ಮರಗಿಡಗಳನ್ನು ಕಡಿಯದೆ ಮತ್ತು ನೀರಿನ ಝರಿಗಳಿಗೆ ಯಾವುದೇ ದಕ್ಕೆಯಾಗದಂತೆ ಉತ್ತಮವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ನಗರಸಭೆ ಪೌರಾಯುಕ್ತರಾದ ಶ್ರೀಕಾಂತ್ ರಾವ್ ಅವರಿಗೆ ನಿರ್ದೇಶನ ನೀಡಿದರು.
ಇದೇ ಜಾಗದ ಪಕ್ಕದಲ್ಲಿರುವ ಅರಣ್ಯ ಇಲಾಖೆ ಸೌದೆ ಡಿಪೋ ನಡೆಸುತ್ತಿರುವ ಜಾಗವು ಸರ್ಕಾರಿ ಪೈಸಾರಿಯಾಗಿದ್ದು, ಡಿಪೋವನ್ನು ಬೇರೆಡೆಗೆ ಸ್ಥಳಾಂತರಿಸಿ ಈ ಸ್ಥಳವನ್ನು ಸುವರ್ಣ ಕನ್ನಡ ಸಮುಚ್ಚಯ ಭವನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ  ವಿಧಾನ ಸಭಾಧ್ಯಕ್ಷರು ಹಾಗೂ ಶಾಸಕರು ಕಂದಾಯ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಈ ಜಾಗವನ್ನು ಶೀಘ್ರವೇ ಖಾಲಿ ಮಾಡಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಇದಕ್ಕೆ ಮುನ್ನ ಸೆಂಟ್ರಲ್ ವರ್ಕ್ ಶಾಪ್ ಪ್ರದೇಶದಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚನೆ, ಸಲಹೆ ನೀಡಿದ ಅವರು ಈ ಪ್ರದೇಶದಲ್ಲಿರುವ ಗಿಡಗಂಟೆಗಳನ್ನು ತೆಗೆದು ಸಂಪೂರ್ಣ ಸರ್ವೆ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
ಈ ಸ್ಥಳಗಳನ್ನು ಸರ್ಕಾರಿ ಬಳಕೆಗೆ ಕಾಯ್ದಿರಿಸುವ ಜೊತೆಗೆ ಶೀಘ್ರವೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು. ನಂತರ ಸುದರ್ಶನ  ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇದ ಜಾರಿ, ಸುಂಟಿ ಕೊಪ್ಪ ಗ್ರಾಮ ಪಂಚಾಯ್ತಿ ಕಸವಿಲೇವಾರಿಗೆ ಜಾಗ ನಿಗಧಿಯಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನುಮುತ್ತಪ್ಪ ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ, ಉಪವಿಭಾಗಾಧಿಕಾರಿ ಶಿವಶಂಕರ್, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಬಸವರಾಜಪ್ಪ, ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಕೇಶವಮೂರ್ತಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ  ಸತ್ಯನಾರಾಯಣ್, ಪೌರಾಯುಕ್ತರಾದ  ಶ್ರೀಕಾಂತ್‌ರಾವ್, ಎ.ಸಿ.ಎಫ್. ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.
ಜನವರಿ ೨೭ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ
ಮಡಿಕೇರಿ ಜ.೧೬ (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯು ಜ. ೨೭ ರಂದು ಪೂರ್ವಾಹ್ನ  ೧೧.೦೦ ಗಂಟೆಗೆ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ  ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ವಿ.ಎಂ. ವಿಜಯ ಅವರ ಅಧ್ಯಕ್ಷ್ಷತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಲಿಯೋ ಯಶಸ್ಸು: ಜಿಲ್ಲಾಧಿಕಾರಿಗಳ ಅಭಿನಂದನೆ

ವಿಜಾಪುರ, ಜನೇವರಿ ೧೬:  ಜಿಲ್ಲೆಯಾದ್ಯಂತ ಜನೇವರಿ ೧೦ ರಿಂದ ೧೩ ರವರೆಗೆ  ಜರುಗಿದ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ  ಶೇ ೯೯,೨ ರಷ್ಟು ಸಾಧನೆ ಮಾಡಲು ಕಾರಣರಾದ  ಎಲ್ಲರಿಗೂ ಜಿಲ್ಲಾಡಳಿತ ಅಭಿನಂದಿಸಿದೆ.
ಜನೇವರಿ ೧೦ ರಿಂದ ೧೩ರ ವರೆಗೆ ವಿಜಾಪುರ ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿದೆ.  ಒಂದು ದಿನ ಲಸಿಕಾ ಕೇಂದ್ರದಲ್ಲಿ ಹಾಗೂ ಮೂರು ದಿಸ ಮನೆಮನೆಗೆ ಭೇಟಿ ನೀಡಿ ಐದು ವರ್ಷದೊಳಗಿನ ೩೧೨೭೮೦ಮಕ್ಕಳಿಗೆ ಲಸಿಕೆ ಹಾಕಿ ೯೯.೨ ಪ್ರತಿಶತ ಸಾಧನೆಯಾಗಿದೆ.  ಮನೆ ಮನೆ ತಂಡದ ಕಾರ್ಯಕರ್ತರು ಪ್ರತಿಶತ ೧೦೦.೭೭ ರಷ್ಟು ಮನೆ  ಮನೆಗೆ ಭೇಟಿಯ ಸಾಧನೆಯಾಗಿದ್ದು,  ಗ್ರಾಮೀಣ ಪ್ರದೇಶದಿಂದ  ಬಡ ಜನರು ದುಡಿಯಲು ಬೇರೆ ಸ್ಥಳಗಳಿಗೆ ಸ್ಥಳಾಂತರ ಹೊಂದಿರುವುದು ಕಂಡುಬಂದಿದೆ.  ಆಸಕ್ತಿ , ಉತ್ಸಾಹದಿಂದ ದೂರದೂರದ ಮನೆಗಳಿಗೆ ಕಾರ್ಯಕರ್ತರು ಭೇಟಿ ನೀಡಿ, ಲಸಿಕೆ ಹಾಕುವುದು ಕಷ್ಟವೆನಿಸಿದರೂ  ನಿಗದಿತ ಗುರಿ ಸಾಧಿಸಿದ್ದಾರೆ.  ಸಾಧನೆಗೆ ಸಹಕರಿಸಿದ ಸಾರ್ವಜನಿಕರಿಗೆ, ಸ್ವಯಂ ಸೇವಾ ಸಂಘದವರಿಗೆ, ಪ್ರಚಾರ ಮಾಧ್ಯದವರಿಗೆ, ಜನಪ್ರತಿನಿಧಿಗಳಿಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶಿಕ್ಷಣ ಇಲಾಖೆ, ಹೆಸ್ಕಾಂ ಇಲಾಖೆ, ಕೆಎಸ್‌ಆರ್‌ಟಿಸಿ, ಆಯ್.ಎಂ.ಎ., ಆಯ್.ಎ.ಪಿ. ಜಿಲ್ಲೆಯ ಎಲ್ಲ ಆದಳಿತ ವರ್ಗದವರಿಗೆ ಪರೋಕ್ಷ ಮತ್ತು ಅಪರೋಕ್ಷವಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಜಿಲ್ಲಾಧಿಕಾರಿಗಳಾದ ಆರ್. ಶಾಂತರಾಜ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಪ್ರವಾಸ
ಮಂಗಳೂರು ಜನವರಿ ೧೬:(ಕರ್ನಾಟಕ ವಾರ್ತೆ)-ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಡಾ. ಮುಮ್ತಾಜ್  ಆಲಿಖಾನ್‌ರವರು ದಿನಾಂಕ ೧೭-೧-೧೦ ರಂದು ಪೂ. ೮.೧೫ ಕ್ಕೆ ಬಜ್ಪೆ ವಿಮಾಣ ನಿಲ್ದಾಣಕ್ಕೆ ಆಗಮಿಸಿ, ಉಡುಪಿಗೆ ತೆರಳುವರು.ಉಡುಪಿಯ ಸಮಾರಂಭದಲ್ಲಿ ಭಾಗವಹಿಸಿ ,ವಾಸ್ತವ್ಯ ಮಾಡುವರು. ೧೮-೧-೧೦ ರಂದು ಉಡುಪಿಯಿಂದ ಸುಳ್ಯಕ್ಕೆ ಆಗಮಿಸಿ, ಸುಳ್ಯದ ಅರಂತೋಡಿನಲ್ಲಿ ತೆಕ್ಕಿಲ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ವತಿಯಿಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರಿಗೆ ನಡೆಯಲಿರುವ ಸನ್ಮಾನ ಕಾರ್‍ಯಕ್ರಮದಲ್ಲಿ ಭಾಗವಹಿಸುವರು.ನಂತರ ಅಪರಾಹ್ನ ೭ ಗಂಟೆಗೆ  ಬಜ್ಪೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು.
ಕೇಂದ್ರ ಸಹಾಯಕ ಪೆಟ್ರೋಲಿಯಂ ಸಚಿವರ ಪ್ರವಾಸ
ಮಂಗಳೂರು ಜನವರಿ ೧೬: (ಕರ್ನಾಟಕ ವಾರ್ತೆ)-ಕೇಂದ್ರ ಸಹಾಯಕ ಪೆಟ್ರೋಲಿಯಂಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಜಿತಿನ್ ಪ್ರಸಾದ್ ರವರು ದಿನಾಂಕ ೧೭-೧-೧೦ ರಂದು ರಾತ್ರಿ  ೧೦ ಗಂಟೆಗೆವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ೧೦.೧೫ಕ್ಕೆ ಎಂಆರ್‌ಪಿಎಲ್‌ಗೆ ತೆರಳಿ ವಾಸ್ತವ್ಯ ಮಾಡುವರು . ೧೮ ರಂದು  ಉಡುಪಿಗೆ ತೆರಳಿ, ಸಮಾರಂಭದಲ್ಲಿ ಭಾಗವಹಿಸಿ, ಬಳಿಕ ೯.೪೫ ಕ್ಕೆ  ಎಂಆರ್‌ಪಿಎಲ್‌ನ ೨ನೇವಿಭಾಗದ  ೩ನೇಫೇಸ್‌ಗೆ ಶಿಲಾನ್ಯಾಸ ನೆರವೇರಿಸುವರು. ನಂತರ ಸಂಜೆ ೩.೩೦ ಕ್ಕೆ ಮುಂಬಯಿಗೆ ವಿಮಾನದ ಮೂಲಕ ತೆರಳುವರು .
ಜನವರಿ ೧೮ರಂದು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ
ಬೀದರ.೧೬:-ಪ್ರಕೃತಿ ವಿಕೋಪ, ವಿಪತ್ತುಗಳು  ಸಂಭವಿಸಿದಾಗ ಆಪತ್ತಿಗೆ ಸಿಲುಕಿಕೊಂಡಿರುವ  ಜನರನ್ನು ರಕ್ಷಿಸುವ ಕಾರ್ಯದಲ್ಲಿ ಗೃಹರಕ್ಷಕರು  ನಿರ್ವಹಿಸುವ ಪಾತ್ರದ ಕುರಿತು ಜನವರಿ  ೧೮ ರಂದು  ಬೆಳಿಗ್ಗೆ ೧೧ ಗಂಟೆ ಸುಮಾರಿಗೆ  ನೆಹರು ಕ್ರೀಡಾಂಗಣದ ಬಳಿ ಇರುವ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ  ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು  ಗೃಹರಕ್ಷಕ ಜಿಲ್ಲಾ ಸಮಾದೇಷ್ಠರು ಹಾಗೂ ಜಿಲ್ಲಾ  ಹೆಚ್ಚುವರಿ ಪೋಲಿಸ್ ವರೀಷ್ಠಾಧಿಕಾರಿಗಳಾದ ಅಶೋಕ ಆರ್. ಅಣ್ವೇಕರ್ ಅವರು  ತಿಳಿಸಿದರು.
ಅವರು ಶನಿವಾರ ತಮ್ಮ ಕಛೇರಿಯಲ್ಲಿ  ಸುದ್ದಿಗಾರರೊಂದಿಗೆ  ಮಾತನಾಡುತ್ತ ಅಂದು ಬೆಳಿಗ್ಗೆ ೮ ಕ್ಕೆ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ  ಹೊರಡುವ ರ್‍ಯಾಲಿಯು ಚೌಬಾರ, ಬಸವೇಶ್ವರ  ವೃತ್ತ, ಅಂಬೇಡ್ಕರ್ ವೃತ್ತದ  ಮುಖಾಂತರವಾಗಿ ಆದರ್ಶ ಶಿಕ್ಷಣ ಸಂಸ್ಥೆಯ ಆವರಣಕ್ಕೆ ತೆರಳುವುದು. ಈ ರ್‍ಯಾಲಿಯಲ್ಲಿ ಪೋಲಿಸರು, ಗೃಹ ರಕ್ಷಕ ದಳದವರು, ಎನ್.ಸಿ.ಸಿ. ಸ್ಕೌಟ್ಸ್ ಗೈಡ್ಸ, ಶಾಲೆ ಮಕ್ಕಳು ಭಾಗವಹಿಸಲಿದ್ದಾರೆ.
ಭೂಕಂಪ, ಸುನಾಮಿ, ಪ್ರವಾಹ, ಬೆಂಕಿ ಅನಾಹುತ,  ಕಟ್ಟಡ  ಕುಸಿತ, ಬಾಂಬ್ ಸ್ಪೋಟ, ಮುಂತಾದ ವಿಪತ್ತುಗಳ ಸಂದರ್ಭದಲ್ಲಿ  ಹಾಗೂ ದೇಶದ  ಆಂತರಿತ  ಭದ್ರತೆಯ ಸಮಯದಲ್ಲಿ  ಗಣೇಶ ಚತುರ್ಥಿ, ಮೊಹರಂ ಮುಂತಾದ ಬಂದೋಬಸ್ತ ಸಂದರ್ಭಗಳಲ್ಲಿ  ಗೃಹರಕ್ಷಕದಳದವರು   ಪೋಲಿಸರಿಗೆ  ಸಹಾಯಕರಾಗಿ  ಕರ್ತವ್ಯ ನಿರ್ವಹಿಸುತ್ತಾರೆ. ಇದೊಂದು ಸಾಮಾಜಿಕ  ಸೇವೆ ಮಾಡಲು  ಪ್ರತಿಯೊಬ್ಬರಿಗೂ  ಅವಕಾಶ ಕಲ್ಪಿಸುವಂತಹದ್ದಾಗಿದೆ. ಸಮಾಜಸೇವೆ ಸಲ್ಲಿಸಲು ಯುವಕರಿಗೆ ಇದು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಡೆಪ್ಯೂಟಿ ಕಮಾಂಡೆಂಟ್ ಡಿ.ಕೆ.ಕುಲ್ಕರ್ಣಿ ಅವರು  ಮಾತನಾಡುತ್ತ  ಪ್ರಕೃತಿ  ವಿಕೋಪ ಸುನಾಮಿ ಪ್ರವಾಹ ಪೀಡಿತ, ಬೆಂಕಿ ಅನಾಹುತ ಸಂಭವಿಸಿದಾಗ ಪೋಲಿಸರಿಗೆ ಸಹಾಯಕರಾಗಿ ಹೋಮಗಾರ್ಡ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುತ್ತಾರೆ.  ಇಂತಹ ಸಂಧರ್ಭಗಳಲ್ಲಿ  ಪೋಲಿಸರೇ ಕೆಲಸ ನಿರ್ವಹಿಸಬೇಕೆಂದಿಲ್ಲ.  ಅವರೊಂದಿಗೆ ಸಾರ್ವಜನಿಕರು ಸಹಭಾಗಿಗಳಾದಲ್ಲಿ ಅನಾಹುತ ಕಡಿಮೆಗೊಳಿಸಲು  ಸಾಧ್ಯವೆಂದು  ತಿಳಿಸಿದರು. ಇನ್‌ಸ್ಪಕ್ಟರ್ ಎನ್.ವೆಂಕಟೇಶ ಅವರು ಹಾಜರಿದ್ದರು.

ಬೆಳಗಾವಿಗೆ ಅಬಕಾರಿ ಸಚಿವರು

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ರಾಜ್ಯದ ಅಬಕಾರಿ ಸಚಿವರಾದ ಶ್ರೀ. ಎಂ.ಪಿ. ರೇಣುಕಾಚಾರ್ಯ ಅವರು ಸೋಮವಾರ ಜನೇವರಿ ೧೮ ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಅಂದು ಮುಂಜಾನೆ ೧೨-೩೦ ಕ್ಕೆ ಬೆಳಗಾವಿಯಲ್ಲಿ ಅಬಕಾರಿ ಇಲಾಖೆಯ ವಿಭಾಗಮಟ್ಟದ ಸಭೆ ನಡೆಸುವರು. ನಂತರ ಸಾಯಂಕಾಲ ೪-೩೦ ಕ್ಕೆ ಸವದತ್ತಿಯಲ್ಲಿ ಶಾಸಕರಾದ ಶ್ರೀ.ಆನಂದ ಮಾಮನಿ ಅವರು ಏರ್ಪಡಿಸಿರುವ ಸಮಾರಂಭದಲ್ಲಿ ಭಾಗವಹಿಸಿ ಧಾರವಾಡಕ್ಕೆ ಪ್ರಯಾಣ ಬೆಳೆಸುವರು.
ಬೆಳಗಾವಿಗೆ ಜವಳಿ ಸಚಿವರು

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ರಾಜ್ಯದ ಜವಳಿ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾದ          ಶ್ರೀ. ಗೂಳಿಹಟ್ಟಿ ಶೇಖರ ಅವರು ಸೋಮವಾರ ಜನೇವರಿ ೧೮ ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಅಂದು ಮುಂಜಾನೆ ೯ ಗಂಟೆಗೆ ಶ್ರೀ. ಗೋಮಟೇಶ ವಿದ್ಯಾಪೀಠದಲ್ಲಿ ಏರ್ಪಡಿಸಿರುವ ಕ್ರೀಡಾಕೂಟ ಉದ್ಘಾಟನೆ ನೆರವೇರಿಸುವರು. ಮುಂಜಾನೆ ೧೧ ಗಂಟೆಗೆ ಕಾದರೊಳ್ಳಿ ಶ್ರೀ. ಅದೃಶ ಶಿವಯೋಗಿಗಳ ಜಯಂತಿ ಸಮಾರಂಭದಲ್ಲಿ ಭಾಗವಹಿಸುವರು. ಸಾಯಂಕಾಲ ೪-೩೦ ಕ್ಕೆ ಬೆಳಗಾವಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸುವರು. ನಂತರ ಬೀರೂರಗೆ ಪ್ರಯಾಣ ಬೆಳೆಸುವರು.
ರಾಷ್ಟ್ರ ಸೇವೆಗೆ ಸನ್ನದ್ದರಾದ ೧೪೭ ಯೋಧರ ಆಕರ್ಷಕ ಪಥಸಂಚಲನ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಮರಾಠಾ ಲಘು ಪದಾತಿದಳದಲ್ಲಿ ತರಬೇತಿ ಪಡೆದು ರಾಷ್ಟ್ರದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಲು ಸನ್ನದ್ದರಾಗಿರುವ ೧೪೭ ಪ್ರಶಿಕ್ಷಣ ಪಡೆದ ಯೋಧರ ನಿರ್ಗಮನ ಪಥಸಂಚಲನವು ಇಂದು ಜನಮನ ಸೆಳೆಯಿತು.
ಕಳೆದ ೯ ತಿಂಗಳುಗಳ ಕಾಲ ತರಬೇತಿ ಹೊಂದಿರುವ ಈ ಯೋಧರು ಇಂದು ಮರಾಠಾ ಲೈಟ್ ಇನಫಂಟ್ರಿ ರೆಜಿಮೆಂಟಲ್ ಸೆಂಟರ್‌ನ ವಿಶಿಷ್ಠ ಸೇವಾ ಮೆಡಲ್, ಕಮಾಂಡಂಟ್, ಬ್ರಿಗೇಡಿಯರ್ ಸಂಜಯ ಹೋಲೆ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾಗೂ ರೆಜಿಮೆಂಟಲ್‌ನ ಧ್ವಜದ ಸಮಕ್ಷಮ ಯೋಧರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ತರಬೇತಿ ಅವಧಿಯಲ್ಲಿ ಪಥಸಂಚಲನ, ಅತ್ಯುತ್ತಮ ಪ್ರಶಿಕ್ಷಣಾರ್ಥಿ, ಕ್ಷೇತ್ರ ವಿನ್ಯಾಸ ಹಾಗೂ ಹೊರಾಂಗಣ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಯೋಧರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡಿಯರ್ ಸಂಜಯ ಹೋಲೆ ಅವರು ಕಳೆದ ೯ ತಿಂಗಳಿಂದ ಅತ್ಯುತ್ತಮ ತರಬೇತಿಯನ್ನು ಪೂರೈಸಿದ್ದಕ್ಕಾಗಿ ಯೋಧರಿಗೆ, ಅವರ ಕುಟುಂಬಕ್ಕೆ ಶುಭಾಶಯ ಹೇಳಿದರು. ಮರಾಠಾ ರೆಜಿಮೆಂಟಲ್‌ನ  ಇತಿಹಾಸ ಹಾಗೂ ಪರಂಪರೆಯನ್ನು ಬೆಳೆಸಬೇಕು. ಅದರಂತೆ ರಾಷ್ಟ್ರ ರಕ್ಷಣೆ ಹಾಗೂ ರೆಜಿಮೆಂಟಲ್‌ನ ಗೌರವ ಕಾಪಾಡುವ ಏಕಮಾತ್ರ ಗುರಿಯನ್ನು ಹೊಂದಲು ಕರೆ ನೀಡಿದ ಅವರು ತಮ್ಮ ಕಠಿಣ ಪರಿಶ್ರಮದಿಂದ ಮುಂದೆ ಬರಬೇಕು ಎಂದು ಕರೆ ನೀಡಿದರು.                                                            ವಾವಿಸಂ.
ಹೊಸ ಕೌಶಲ್ಯಾಭಿವೃದ್ಧಿ ಕೇಂದ್ರದ ಉದ್ಘಾಟನೆ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಸುವರ್ಣ ವಸ್ತ್ರ ನೀತಿ ಯೋಜನೆಯಡಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಹೊಸ ಕೌಶಲ್ಯಾಭಿವೃದ್ಧಿ ಕೇಂದ್ರವು ಸೋಮವಾರ ಜನೇವರಿ ೧೮ ರಂದು ಬೆಳಗಾವಿಯಲ್ಲಿ ಪ್ರಾರಂಭವಾಗಲಿದೆ.
ಅಂದು ಸಾಯಂಕಾಲ ೪-೩೦ ಕ್ಕೆ ಮಾರುತಿ ಗಲ್ಲಿಯಲ್ಲಿರುವ ಅರವಿಂದ ಕಾಂಪ್ಲೇಕ್ಸ್‌ನಲ್ಲಿ ಜವಳಿ ಹಾಗೂ ಯುವಜನ ಸೇವಾ ಸಚಿವರಾದ ಶ್ರೀ. ಗೂಳಿಹಟ್ಟಿ ಶೇಖರ ಅವರು ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ. ಫಿರೋಜ ಶೇಠ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ. ಅಭಯ ಪಾಟೀಲ, ಶ್ರೀ. ಸಂಜಯ ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ. ಅಶ್ವಿನಿ ಪಾಟೀಲ, ಜಿಲ್ಲಾಧಿಕಾರಿಗಳಾದ ಡಾ|| ಜೆ. ರವಿಶಂಕರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಏಕರೂಪ್ ಕೌರ್ ಅವರು ಭಾಗವಹಿಸಲಿದ್ದಾರೆ.
ವಂಚನೆ ಪ್ರಕರಣ: ಹೂಡಿಕೆದಾರರು ಮಾಹಿತಿ ನೀಡಲು ಮನವಿ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ದಾಖಲಾದ ಮಲ್ಟೀ ಲೆವಲ್ ಮಾರ್ಕೇಟಿಂಗ್ ವಂಚನೆ ಪ್ರಕರಣಗಳ ತನಿಖೆಯನ್ನು ಸಿ.ಐ.ಡಿ. ವಿಭಾಗದ ಅಧಿಕಾರಿಗಳು ಈಗಾಗಲೇ ತನಿಖೆಯನ್ನು ವಹಿಸಿಕೊಂಡಿದ್ದಾರೆ.
ಸಿಐಡಿ ಅಧಿಕಾರಿಗಳ ತಂಡ ಈಗಾಗಲೇ ನಗರದ ಪೊಲೀಸ್ ಕ್ಲಬ್‌ನಲ್ಲಿ ಮೊಕ್ಕಾಂ ಹೂಡಿದ್ದು, ದಸ್ತಗಿರಿಯಾದ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ಮಾಡುತ್ತಿದ್ದು, ಹಾಗೂ ಇತರ ಸಾಕ್ಷೀದಾರರ ವಿಚಾರಣೆ ನಡೆಸಿರುತ್ತಾರೆ.
ರಿಲಯಬಲ್ ಸರ್ವೀಸಸ್ ಹೆಸರಿನಲ್ಲಿ ಚೆಕ್‌ಗಳ ಮೂಲಕವಾಗಿ ಹಣವನ್ನು ಪಡೆದಿರುವ ಆರೋಪಿ ಆನಂದ ತಾನಾಸಾ ನಾಯಕವಾಡ್‌ನ ಬಳಿಯಲ್ಲಿ ಮತ್ತು ಐ-ಕ್ವಿಜ್, ಸ್ವಿಷ್-ಕ್ಯಾಷ್, ರಿಯಲ್‌ಎಸ್ಟೇಟ್, ಮ್ಯಾಕ್ಸ್-ಗ್ರೋತ್ ಮೊದಲಾದ ಮಲ್ಟೀ ಲೆವಲ್ ಮಾರ್ಕೇಂಗ್ ಸ್ಕೀಮ್‌ಗಳ ಹೆಸರುಗಳಲ್ಲಿ ಹಣ ಹೂಡಿದ ಹೂಡಿಕೆದಾರರು ಯಾವುದೇ ಭಯವಿಲ್ಲದೆ, ಬೆಳಗಾವಿ ನಗರದ ಲಿಂಗರಾಜ ಕಾಲೇಜ್ ಹಿಂಭಾಗದ ರಸ್ತೆಯಲ್ಲಿರುವ ಪೊಲೀಸ್ ಕ್ಲಬ್‌ನಲ್ಲಿರುವ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಬೆಂಗಳೂರನ ವಂಚನೆ ತನಿಖಾ ದಳ, ಸಿಐಡಿ, ಪೊಲೀಸ್ ಇನ್ಸೆಪೆಕ್ಟರ್ ಶ್ರೀ.ಹೆಚ್. ನಾಗರಾಜ ಇವರು ತಿಳಿಸಿದ್ದಾರೆ. ಇವರ ಮೊಬೈಲ್ ಸಂಖ್ಯೆ ೯೪೪೮೪೭೫೧೦೦, ೯೪೪೯೫೦೭೦೮೦ ಗೆ ಕರೆ ಮಾಡಬಹುದಾಗಿದೆ.
ಜಾತ್ರೆಗಾಗಿ ವಿಶೇಷ ಬಸ್ ವ್ಯವಸ್ಥೆ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಸವದತ್ತಿ ಶ್ರೀ. ಯಲ್ಲಮ್ಮದೇವಿ ಮತ್ತು ಚಿಂಚಲಿಯ                      ಶ್ರೀ. ಮಾಯಕ್ಕಾದೇವಿ ಜಾತ್ರೆಯ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗವು ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ]

ಸವದತ್ತಿ ಯಲ್ಲಮ್ಮ ಜಾತ್ರೆಗಾಗಿ ಜನೇವರಿ ೨೦ ರಿಂದ ಫೆಬ್ರುವರಿ ೨ ರವರೆಗೆ ಹಾಗೂ ಚಿಂಚಲಿ ಮಾಯಕ್ಕ ಜಾತ್ರೆಗಾಗಿ ಫೆಬ್ರುವರಿ ೧ ರಿಂದ ೧೦ ರವರೆಗೆ ಚಿಕ್ಕೋಡಿ ವಿಭಾಗದಿಂದ ಕೊಲ್ಲಾಪುರ, ಮಿರಜ, ಸಾಂಗಲಿ, ಚಿಕ್ಕೋಡಿ, ನಿಪ್ಪಾಣಿ, ಸದಲಗಾ, ಹಾರೋಗೇರಿ, ಹಿಡಕಲ್, ಮುಗಳಕೋಡ, ಸಂಕೇಶ್ವರ, ಹುಕ್ಕೇರಿ ಹಾಗೂ ರಾಯಬಾಗಗಳಿಂದ ಮತ್ತು ಮಹಾರಾಷ್ಟ್ರದ ಮುಂಬಯಿ, ಪುಣೆ, ಸಾತಾರ, ರತ್ನಾಗಿರಿ, ಜತ್ತ, ಗಡಹಿಂಗ್ಲಜ ಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆಯೆಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ನೀರಾವರಿ ಸಚಿವರ ಪ್ರವಾಸ ಕಾರ್ಯಕ್ರಮ
ಮಂಡ್ಯ, ಜ.೧೬(ಕರ್ನಾಟಕ ವಾರ್ತೆ):-ಮಾನ್ಯ ಸಣ್ಣ ನೀರಾವರಿ, ಯೋಜನಾ ಮತ್ತು ಸಾಂಖ್ಯಿಕ ಸಚಿವ ಶ್ರೀ. ಗೋವಿಂದ ಎಂ.ಕಾರಜೋಳ ರವರು ದಿನಾಂಕ ೧೮-೦೧-೨೦೧೦ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅವರು ಅಂದು ಮಧ್ಯಾಹ್ನ ೩-೦೦ ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಶ್ರೀ. ವಿ.ಶ್ರೀನಿವಾಸರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—–
ಜನವರಿ ೧೮ ರಂದು ಜಿಲ್ಲೆಯಲ್ಲಿ ಸಾರಿಗೆ ಸಚಿವರ ಪ್ರವಾಸ
ಮಾನ್ಯ ಸಾರಿಗೆ ಸಚಿವ ಶ್ರೀ. ಆರ್. ಅಶೋಕ ರವರು ಜನವರಿ ೧೮ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅವರು ಅಂದು ಬೆಳಿಗ್ಗೆ ೧೦-೩೦ ಗಂಟೆಗೆ ಮೇಲುಕೋಟೆಯಲ್ಲಿ ಮುಂದುವರೆದ ಕಾಮಗಾರಿಯಲ್ಲಿ ಪೂರ್ಣಗೊಂಡಿರುವ ಬಸ್ ನಿಲ್ದಾಣ ಮತ್ತು ಪಾಂಡವಪುರದ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿದ ನಂತರ ಮಧ್ಯಾಹ್ನ ೩-೦೦ ಗಂಟೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿರುವ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ೬೬ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ. ರಾಮೇಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—–
ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭ
ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸುಧಾರಣಾ ಪದ್ಧತಿ ಉಪ ವಿಭಾಗ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ ತಾಲ್ಲೂಕಿನ ಮಾರಗೌಡನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ದಿನಾಂಕ ೧೭-೦೧-೨೦೧೦ ರಂದು ಬೆಳಿಗ್ಗೆ ೧೨-೦೦ ಗಂಟೆಗೆ ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ. ರಾಮಚಂದ್ರಗೌಡರು ಉದ್ಘಾಟಿಸಲಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಎಂ. ಶ್ರೀನಿವಾಸ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪಲ್ಸ್ ಪೊಲಿಯೋ : ಶೇ.೯೮.೦೮ ಸಾಧನೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ ೧೦-೧-೨೦೧೦ ರಿಂದ ೧೩-೧-೨೦೧೦ ರವರೆಗೆ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಒಟ್ಟು ೧೯೦೩೨೧ (೦-೫ ವರ್ಷದ) ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಅದರಲ್ಲಿ ೧೮೬೬೬೩ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲಾಗಿದ್ದು, ಶೇಕಡಾ ೯೮.೦೮% ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪಲ್ಸ್ ಪೊಲಿಯೋ ಚಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ. ಎಲ್. ರಬೀಂದ್ರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲ್ಲೂಕುವಾರು ಪ್ರಗತಿಯ ವಿವರ ಈ ಕೆಳಕಂಡಂತಿದೆ.

ತಾಲ್ಲೂಕಿನ ಹೆಸರು ಗುರಿ ಸಾಧನೆ ಶೇಕಡಾವಾರು
ಮಂಡ್ಯ 48924 47594 97.28%
ಮದ್ದೂರು 27961 27988 100.10%
ಮಳವಳ್ಳಿ 30498 30061 98.57%
ಪಾಂಡವಪುರ 16920 16716 98.79%
ಶ್ರೀರಂಗಪಟ್ಟಣ 16940 17145 101.12%
ಕೃಷ್ಣರಾಜಪೇಟೆ 27793 26622 95.79%
ನಾಗಮಂಗಲ 21285 20537 96.49%

Calender Release

ಜನವರಿ 18, 2010


Release of Horticulture Department Calendars

Desktop calendars for the year 2010 designed and developed by Horticulture Department with the assistance of National Horticulture Mission has been released by Honorable Shri Umesh Katti, Minister of Horticulture and Prisons. Also the Secretary to Government, Horticulture Department Sri. S.G. Hegde and Director of Horticulture & Mission Director, KSHMA Sri.N. Jayaram along with the senior officers of the Department of Horticulture were present in this occasion
during the State level progress review meeting held at Horticulture Information Center, Lalbagh Bangalore on 16-01-2010.

This year’s calendar depicts the success stories of National Horticulture programme in the state.

ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ .

ಜನವರಿ 18, 2010

ಕರ್ನಾಟಕ  ಸರ್ಕಾರ
ವಾರ್ತಾ ಇಲಾಖೆ
ನಂ.೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು ೫೬೦ ೦೦೧. ದೂ. ೦೮೦-೨೨೦೨೮೦೩೨/೩೪/ಫ್ಯಾಕ್ಸ್ ೨೨೦೨೮೦೪೧

ದಿನಾಂಕ:  ೧೬-೦೧-೨೦೧೦

ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ .

೧)    ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಪಿ.ಜಿ.. ಹರ್ಲಂಕರ್,  ಇವರು ಜನವರಿ ೧೭ ರಂದು ಸಂಜೆ ೪-೦೦ ಗಂಟೆಗೆ ಕೋರಮಂಗಲದ ಕೆ.ಎಸ್.ಆರ್.ಪಿ. ಕ್ರೀಡಾಂಗಣದಲ್ಲಿ ನಡೆಯಲಿರುವ ೨೦೦೯ ನೇ ಸಾಲಿನ  ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.

೨)    ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವ ಸಂಬಂಧ ಜನವರಿ ೧೮ ರಂದು ಮಧ್ಯಾಹ್ನ ೧೨-೦೦ ಗಂಟೆಗೆ ಪತ್ರಿಕಾಗೋಷ್ಠಿಯನ್ನು  ತೋಟಗಾರಿಕೆ ಮಾಹಿತಿ ಕೇಂದ್ರ ಲಾಲ್‌ಬಾಗ್ ಇಲ್ಲಿ ಏರ್ಪಡಿಸಲಾಗಿದೆ.  ಆನಂತರ ವಾಹನ ನಿಲ್ದಾಣದ ಬಳಿ ಇರುವ ಡಾ: ಎಂ.ಹೆಚ್. ಮರಿಗೌಡ ಸ್ಮಾರಕ ಭವನದಲ್ಲಿ ಮಾಧ್ಯಮದವರಿಗೆ ಭೋಜನ ಕೂಟ ಏರ್ಪಡಿಸಲಾಗಿದೆ.

೩)    ಕರ್ನಾಟಕ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ೧೮ ನೂತನ
ಸದಸ್ಯರುಗಳು  ವಿಧಾನ ಸೌಧದ ಬ್ಯಾಂಕ್ವೆಟ್  ಹಾಲ್‌ನಲ್ಲಿ ಜನವರಿ ೧೮ ರಂದು ಮಧ್ಯಾಹ್ನ
೪.೦೦ ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿರುವರು.

೪)    ಕರ್ನಾಟಕ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ  ಸಮಾವೇಶದ
ಉದ್ಘಾಟನೆಯನ್ನು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಜನವರಿ ೧೮ ರಂದು
ಸಂಜೆ ೪-೧೫ ಗಂಟೆಗೆ ಸಮ್ಮೇಳನ ಸಭಾಂಗಣ, ೭ನೇ ಮಹಡಿ, ಪೊಲೀಸ್ ಪ್ರಧಾನ ಕಛೇರಿ,
ನಂ.೨ ನೃಪತುಂಗ ರಸ್ತೆ ಬೆಂಗಳೂರು ಇಲ್ಲಿ ನೆರವೇರಿಸಲಿದ್ದಾರೆ.
ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಯಾಮರಾಮನ್‌ಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೋರಿದೆ.

Press Invitation

In connection with the Republic Day Horticultural Show  a “Press Conference”  is arranged at 12.00 noon on January 18, 2010 at Dr. Marigowda Memorial Hall, Lalbagh Bangalore.

Accredited correspondents, photographers and cameramen from print and electronic media are requested to cover the function.

for Director

ರಾಜ್ಯದ ಹೆಲಿಟೂರಿಸಂ ಯೋಜನೆ ಅಂತರ್ ರಾಜ್ಯ ಪ್ರವಾಸೋದ್ಯಮ ನೀತಿಯಡಿ ಅತ್ಯುತ್ತಮ ಅಭ್ಯಾಸ ವಾಗಿ ಪರಿಗಣನೆ – ಕುಮಾರಿ ಶೈಲಜಾ

ಬೆಂಗಳೂರು, ಜ. ೧೬ (ಕರ್ನಾಟಕ ವಾರ್ತೆ) ಪ್ರವಾಸೋದ್ಯಮ ಬೆಳವಳಿಗೆಗೆ ಹೆಚ್ಚಿನ ಬಲ ನೀಡುವ ಸಲುವಾಗಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಹಲವಾರು ಉತ್ತೇಜನ ಕ್ರಮಗಳನ್ನು ಕೈಗೊಂಡಿದೆ. ದೇಶಕ್ಕೆ ಈ ನಿಟ್ಟಿನಲ್ಲಿ ಉತ್ತಮ ಮಾರುಕಟ್ಟೆ ಅವಕಾಶ ಒದಗಿಸಬಲ್ಲ ಮತ್ತು ಭದ್ರತಾ ಸಮಸ್ಯೆಯಿಲ್ಲದ ರಾಷ್ಟ್ರಗಳಿಗೆ ಸಂಬಂಧಿಸಿ ‘ವೀಸಾ ಆನ್ ಅರೈವಲ್’ಆರಂಭಿಸಲಿರುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಕುಮಾರಿ ಶೈಲಜಾ ತಿಳಿಸಿದರು ಸಿಂಗಪೂರ್, ಫಿನ್ ಲ್ಯಾಂಡ್, ನ್ಯೂಜಿಲ್ಯಾಂಡ್, ಲಕ್ಷ್ಸೆಂಬರ್ ಮತ್ತು ಜಪಾನ್ ದೇಶಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗುವುದೆಂದರು. ದಕ್ಷಿಣ ರಾಜ್ಯಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಕುರಿತು ೪ ರೋಡ್ ಶೋಗಳನ್ನು ಏರ್ಪಡಿಸಲಾಗಿದೆಯೆಂದರು. ವಿದೇಶೀ ಪ್ರವಾಸಿಗಳ ರಕ್ಷಣೆ, ಸುರಕ್ಷಿತ ಪ್ರವಾsಸ ಉದ್ಯಮದ ಅಭಿವೃದ್ಧಿಗೆ ಅಗತ್ಯವೆಂದರು. ಪುರಸಭೆ ನಗರಸಭೆಗಳನ್ನು ಪ್ರವಾಸೋದ್ಯಮ ತಾಣಗಳನ್ನು ಪರಿಸರ ಸ್ನೇಹೀ, ನಿರ್ಮಲ, ಸುಂದರ ತಾಣಗಳಾಗಿ ನಿರ್ವಹಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಈ ವರ್ಷದಿಂದ ‘ಅತ್ಯುತ್ತಮ ನಾಗರೀಕ ನಿರ್ವಹಿತ ಇಂಡಿಯಾ ಪ್ರವಾಸೀ ತಾಣ’ ಪ್ರಶಸ್ತಿಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಹೆಲಿಟೂರಿಸಂ ಕುರಿತಂತೆ ತಯಾರಿಸಿರುವ ಯೋಜನೆ ಕುರಿತಂತೆ ಕರ್ನಾಟಕದ  ಪ್ರವಾಸೋದ್ಯಮ ಸಚಿವರ ವಿವರಗಳಿಗೆ ಪ್ರತಿಕ್ರಯಿಸುತ್ತ ಕರ್ನಾಟಕದ ಈ ಯೋಜನೆಯನ್ನು ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯಲ್ಲಿ ‘ಅತ್ಯುತ್ತಮ ಅಭ್ಯಾಸ’ ಗಳೆಂದು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಅಧ್ಕಕ್ಷತೆ ವಹಿಸಿ ಮಾತನಾಡಿದ ಮುಖ್ಯ ಮಂತ್ರಿಗಳು ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಇದ್ದ ರೂ.೫೦ ಕೋಟಿ ಅನುದಾನವನ್ನು  ರೂ.೨೫೦ಕೋಟಿಗೆ ಹೆಚ್ಚಿಸಲಾಗಿದೆಯೆಂದರು. ಪ್ರವಾಸೊದ್ಯಮ ಪ್ರವರ್ಧಮಾನಕ್ಕೆ ದಕ್ಷಿಣದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಗತ್ಯವಾಗಿರುವುದು ಏಕಪ್ರಕಾರದ ತೆರಿಗೆ ನೀತಿ- ರಸ್ತೆ ತೆರಿಗೆ, ಪ್ರವೇಶ ತೆರಿಗೆಗಳನ್ನು ಏಕಪ್ರಕಾರವಾಗಿ ಅಳವಡಿಸುವುದು ಅಗತ್ಯವೆಂದರು. ರಾಜ್ಯದಲ್ಲಿ ಇನ್ನೂ ಹಲವಾರು  ಬೃಹತ್ ಪ್ರವಾಸೀ ತಾಣ ಯೋಜನೆಗಳಿಗೆ ಸಿದ್ಧತೆ ನಡೆದಿದ್ದು ಕೇಂದ್ರದಿಂದ ಸಹಕಾರ ನೀಡಲು ಕೋರಿದರು..
ರಾಜ್ಯದ ಪ್ರವಾಸೋದ್ಯಮ ಸಚಿವರಾದ ಶ್ರೀ ಜನಾರ್ಧನರೆಡ್ಡಿ ಕರ್ನಾಟಕದ ಹೆಲಿ ಟೂರಿಸಂ ಯೋಜನೆ ಕುರಿತು ವಿವರಿಸಿದರು.
ಕೇಂದ್ರದ ಪ್ರವಾಸೋದ್ಯಮ ರಾಜ್ಯ ಸಚಿವರಾದ ಸುಲ್ತಾನ್ ಅಹಮದ್ ಆರೋಗ್ಯ ಮತ್ತು ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಅಲೋಪತಿ, ಹೋಮಿಯೋಪತಿ ಒಳಗೋಂಡಂ ಸಮಗ್ರ ಯೋಜನೆ ಅಗತ್ಯವೆಂದು ತಿಳಿಸಿ  ಖಾಸಗಿ-ಸಾವಜನಿಕ ಪಾಲುದಾರತ್ವದ ಪ್ರಾಮುಖ್ಯತೆ ತಿಳಿಸಿದರು.
ಕೇರಳರಾಜ್ಯದ ಪ್ರವಾಸೋದ್ಯಮ ಸಚಿವರಾದ ಶ್ರೀ ಕೊಡಿಯೇರಿ ಬಾಲಕೃಷ್ಣನ್, ಆಂಧ್ರಪ್ರದೇಶದ ಪ್ರವಾಸೋದ್ಯಮ ಸಚಿವರಾದ ಶ್ರೀಮತಿ ಜೆ.ಗೀತಾರೆಡ್ಡಿ, ತಮಿಳುನಾಡಿನ ಪ್ರವಾಸೋದ್ಯಮ ಸಚಿವರಾದ ಶ್ರೀ ಸುರೇಶ್ ರಾಜನ್,  ಪಾಂಡಿಚೇರಿ ಪ್ರವಾಸೋದ್ಯಮ ಸಚಿವರಾದ ಮಲ್ಲಾಡಿ ಕೃಷ್ಣನ್ ರಾವ್ ಸಿಕ್ಕಿಂ ಪ್ರವಾಸೋದ್ಯಮ ಸಚಿವರಾದ ಭೀಮ್ ದುಂಗೇಲ್, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀ ಸುಜೀತ್ ಬ್ಯಾನರ್ಜಿ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶ್ರೀ ಎಸ್.ವಿ. ರಂಗನಾಥ್, ಪ್ರವಾಸೋದ್ಯಮ ಇಲಾಖಾ ಪ್ರಧಾನ ಕಾರ್ಯದರ್ಶಿ   ಶ್ರೀ ಕೆ ಜ್ಯೋತಿರಾಮಲಿಂಗಂ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Science Movie to be screened at Planetarium

Bangalore, January 16(Karnataka Information):   Jawaharlal Nehru Planetarium will screen a science movie entitled “The Elegant Universe” for the public in the Planetarium on Sunday, the January 17th 2010 at 6.00 p.m.  For more details contact the office of J N Planetarium on 222 6 6084 /  2237 9725 or visit website: http://www.taralaya.org.

The Karnataka Public Service Commission

Bangalore, January 16(Karnataka Information):   The Karnataka Public Service Commission has published the Key Answers for the information of the candidates on the Commission’s web site http:// kpsc.kar.nic.in” in connection with the competitive examinations conducted on 07-11-2009 and 08-11-2009.

The Karnataka Public Service Commission has published the Revised Provisional Select List in respect of 155 posts of Library  Assistant in the Department of Public Library on 13-1-2010.  The notification may be seen on the notice board of the Commission’s Head Office and Regional Officer of Mysore, Belgaum, Gulbarga, Shimoga and also on the Commission’s website http:// kpsc.kar.nic.in”

ವಿಧಾನ ಪರಿಷತ್ತಿನ ನೂತನ  ಸದಸ್ಯರುಗಳ  ಪ್ರಮಾಣವಚನ

ಬೆಂಗಳೂರು, ಜನವರಿ ೧೬ (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ  ಈ ಕೆಳಕಂಡ ೧೮ ನೂತನ  ಸದಸ್ಯರುಗಳು  ವಿಧಾನ ಸೌಧದ ಬ್ಯಾಂಕ್ವೆಟ್  ಹಾಲ್‌ನಲ್ಲಿ ಮಧ್ಯಾಹ್ನ ೪.೦೦ ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿರುವರು.

ಶ್ರೀ ಬಸವರಾಜ ಹಾವಗಿಯಪ್ಪ ಪಾಟೀಲ್, (ಬೀದರ್), ಶ್ರೀ ಶಿವರಾಜ ಸಜ್ಜನರ್(ಧಾರವಾಡ),               ಶ್ರೀ ಕೋಟ ಶ್ರೀನಿವಾಸ ಪೂಜಾರಿ (ದಕ್ಷಿಣ ಕನ್ನಡ) ಶ್ರೀ ಆಚಾರ್ ಹಾಲಪ್ಪ ಬಸಪ್ಪ (ರಾಯಚೂರು)             ಶ್ರೀ ಜಿ.ಎಸ್. ನ್ಯಾಮಗೌಡ (ಬಿಜಾಪುರ)  ಶ್ರೀ ಕವಟಗಿಮಠ ಮಹಾಂತೇಶ್ (ಬೆಳಗಾಂ) ಶ್ರೀ ಆರ್.ಕೆ. ಸಿದ್ದರಾಮಣ್ಣ (ಶಿವಮೊಗ್ಗ) ಶ್ರೀ ಮೃತ್ಯುಂಜಯ ಜನಗಾ(ಬಳ್ಳಾರಿ) ಶ್ರೀ ಕೆ.ಆರ್. ಮಲ್ಲಿಕಾರ್ಜುನಪ್ಪ (ಮೈಸೂರು) ಶೀ ಜಿ.ಹೆಚ್. ತಿಪ್ಪಾರೆಡ್ಡಿ (ಚಿತ್ರದುರ್ಗ)  ಎಲ್ಲರೂ ಭಾರತೀಯ ಜನತಾ ಪಕ್ಷ.    ಶ್ರೀ ಇ. ಕೃಷ್ಣಪ್ಪ, ಬೆಂಗಳೂರು,   ಶ್ರೀ ಪಟೇಲ್ ಶಿವರಾಂ(ಹಾಸನ)ಶ್ರೀ ಬಿ. ರಾಮಕೃಷ್ಣ (ಮಂಡ್ಯ) ಶೀ ಎಸ್. ನಾಗರಾಜು (ಸಂದೇಶ್ ನಾಗರಾಜು) (ಮೈಸೂರು)  ಶ್ರೀ ಎಂ.ಆರ್. ಹುಲಿನಾಯ್ಕರ್ (ತುಮಕೂರು) ಎಲ್ಲರೂ ಜನತಾ ದಳ (ಜಾತ್ಯಾತೀತ)  ಶ್ರೀ ದಯಾನಂದ(ಬೆಂಗಳೂರು) ಶ್ರೀಮತಿ ಎ.ವಿ. ಗಾಯತ್ರಿ ಶಾಂತೇಗೌಡ(ಚಿಕ್ಕಮಗಳೂರು) ಶ್ರೀ ಅಲ್ಲಮಪ್ರಭು ಪಾಟೀಲ್(ಗುಲಬರ್ಗಾ)

ಪಡಿತರ ಪದಾರ್ಥಗಳ ಬಿಡುಗಡೆ

ಬೆಂಗಳೂರು, ಜನವರಿ ೧೬ (ಕರ್ನಾಟಕ ವಾರ್ತೆ): ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದ ಚೀಟಿದಾರರಿಗೆ ಜನವರಿ ೨೦೧೦ ರ ಮಾಹೆಯಲ್ಲಿ ಪಡಿತರ ವಸ್ತುಗಳನ್ನು ಬಿಡುಗಡೆ ಮಾಡಲಾಗಿದೆ.
ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ ೨೯ ಕೆ.ಜಿ. ಅಕ್ಕಿ ಮತ್ತು ೬ ಕೆ.ಜಿ. ಗೋಧಿ, ಬಿ.ಪಿ.ಎಲ್ ಪಡಿತರ ಚೀಟಿಗಳಿಗೆ ಪ್ರತಿ ಘಟಕ ಒಂದಕ್ಕೆ ೪ ಕೆ.ಜಿ.ಯಂತೆ  ಕುಟುಂಬ ಒಂದಕ್ಕೆ ಗರಿಷ್ಠ    ೨೦ ಕೆ.ಜಿ. ಅಕ್ಕಿ ಹಾಗೂ ಒಂದು ಘಟಕಕ್ಕೆ ೧ ಕೆ.ಜಿ. ಯಂತೆ ಗರಿಷ್ಟ ೩ ಕೆ.ಜಿ. ಗೋಧಿ.  ಎಲ್ಲಾ ವರ್ಗದ ಅನಿಲ ರಹಿತ ಪಡಿತರ ಚೀಟಿಗಳಿಗೆ ತಲಾ ೭ ಲೀ. ನಂತೆ ಸೀಮೆ ಎಣ್ಣೆಯನ್ನು  ಹಾಗೂ.  ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಗೆ ೧ ಕೆ.ಜಿ. ಸಕ್ಕರೆ ಬಿಡುಗಡೆ ಮಾಡಲಾಗಿದೆ.

ಅಕ್ಕಿ ಪ್ರತಿ ಕೆ.ಜಿ. ಗೆ ೩.೦೦ ರೂ. ಗೋಧಿ ಪ್ರತಿ ಕೆ.ಜಿ. ಗೆ  ೩.೦೦ ರೂ.( ಎಎವೈಗೆ ರೂ. ೨/-)  ಸಕ್ಕರೆ ಪ್ರತಿ ಕೆ.ಜಿ.ಗೆ ೧೩.೫೦ ರೂ. ಸೀಮೆ ಎಣ್ಣೆ ಪ್ರತಿ ಲೀಟರ್‌ಗೆ ೯.೪೦ ರೂ. ನಂತೆ ನಿಗದಿಪಡಿಸಲಾಗಿದೆ.

ನ್ಯಾಯಬೆಲೆ ಅಂಗಡಿಗಳು ಮತ್ತು ಚಿಲ್ಲರೆ ಸೀಮೆ ಎಣ್ಣೆ ವಿತರಕರು  ನಿಗಧಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ವಿತರಣೆ ಮಾಡಿದಲ್ಲಿ ಹಾಗೂ ಹೆಚ್ಚು ದರ ಪಡೆದಲ್ಲಿ, ಪಡಿತರ ಚೀಟಿದಾರರು ಪಡಿತರ ಚೀಟಿ ಸಂಖ್ಯೆ ಮತ್ತು ವಿಳಾಸದೊಂದಿಗೆ ಇಲಾಖೆಯ ಶುಲ್ಕ ರಹಿತ ಉಚಿತ ದೂರವಾಣಿ ಸಂಖ್ಯೆ ೧೮೦೦-೪೨೫-೯೩೩೯ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವರಗಳ ಇಲಾಖೆ ಪ್ರಕಟಣೆ ತಿಳಿಸಿದೆ.

ನೌಕಾಪಡೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜನವರಿ ೧೬ (ಕರ್ನಾಟಕ ವಾರ್ತೆ):  ಭಾರತೀಯ ನೌಕಾಪಡೆಯ ಶಿಕ್ಷಣ ವಿಭಾಗದ ಪರ್ಮನೆಂಟ್ ಕಮಿಷನ್ಡ್ ಅಧಿಕಾರಿ ಹುದ್ದೆಗೆ ಅವಿವಾಹಿತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

೨೧ ರಿಂದ ೨೫ ವರ್ಷದೊಳಗಿನ ಕನಿಷ್ಠ ಶೇ. ೬೦ ಅಂಕ ಪಡೆದ ಎಂಜಿನಿಯರಿಂಗ್ ಪದವೀಧರರು ಅಥವಾ ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಅಪ್ಲಿಕೇಷನ್ ಕಂಪ್ಯೂಟರ್ ಸೈನ್ಸ್, ಐಟಿ , ಇಂಗ್ಲೀಷ್ ಮತ್ತು ಇತಿಹಾಸದಲ್ಲಿ ಕನಿಷ್ಟ ಶೇ. ೫೦ ಅಂಕಗಳೊಂದಿಗೆ
ಉತ್ತೀರ್ಣರಾದ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಜನವರಿ ೧೮ ಕೊನೆಯ ದಿನ.  ಅರ್ಜಿ ಫಾರಂ ಮತ್ತಿತರ ಮಾಹಿತಿಗೆ ವೆಬ್‌ಸೈಟ್ ತಿತಿತಿ.ಟಿಚಿuseಟಿಚಿ.bhಚಿಡಿಣi.ಟಿiಛಿ.iಟಿ ಸಂದರ್ಶಿಸಲು ಕೋರಲಾಗಿದೆ.

ಆಡಳಿತ ಮಟ್ಟದಲ್ಲಿ ಸುಧಾರಣೆಯಾಗಬೇಕು – ಮುಖ್ಯ ಕಾರ್ಯದರ್ಶಿ

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) – ಆಡಳಿತ ಯಾವ ಮಟ್ಟದಲ್ಲಿ ಇರಬೇಕೋ ಆ ಮಟ್ಟದಲ್ಲಿ ಇಲ್ಲದಿರುವುದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ಆಡಳಿತ ಮಟ್ಟದಲ್ಲಿ ಸುಧಾರಣೆಯಾಗಬೇಕು ಎಂದು ಕರ್ನಾಟಕ ಸರ್ಕಾರದ  ಮುಖ್ಯ ಕಾರ್ಯದರ್ಶಿ                 ಶ್ರೀ ಎಸ್.ವಿ.ರಂಗನಾಥ್ ಅವರು ಅಭಿಪ್ರಾಯಪಟ್ಟರು.

ಇಂದು ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳ ಸಂಘ ಹೊರತಂದಿರುವ   ದಿನಚರಿ -೨೦೧೦ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು  ಅನಾಮಧೇಯನೊಬ್ಬ ಅರ್ಜಿ ಸಲ್ಲಿಸಿದರೆ ೧೫ ದಿನಗಳ ನಂತರ ಆದೇಶ ತೆಗೆದುಕೊಂಡು ಹೋಗಿ ಎಂಬ ವ್ಯವಸ್ಥೆ ಇದೆಯೇ? ಅಧಿಕಾರಿಗಳು ತಮ್ಮ ಶಕ್ತಿ ಸಾಮ್ಯರ್ಥಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ  ಅವರು ಆತ್ಮ ವಿಮರ್ಶೆಮಾಡಿಕೊಳ್ಳಬೇಕು. ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕೆಂದರು.

ಆಡಳಿತ ಸುಧಾರಣೆಗೆ ಸಲಹೆ ನೀಡಿ

ಈಗಿರುವ ನಿಯಮಗಳು ೪೦ ವರ್ಷಗಳ ಹಿಂದಿನವು.  ಜನಸಾಮಾನ್ಯನ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರೆಯಲು ನಿರ್ಧಾರ ತೆಗೆದುಕೊಳ್ಳವ ಹಂತ ಕಡಿಮೆಯಾಗಬೇಕು. ನಾಲ್ಕು ಹಂತವಿದ್ದರೆ ಮೂರು ಹಂತಕ್ಕೆ ಇಳಿಸಬೇಕು. ಸರ್ಕಾರ ಆಡಳಿತದಲ್ಲಿ ಸುಧಾರಣೆ ತರಲು ತರಬೇತಿ ಹಾಗೂ ಸೂಕ್ತಕ್ರಮ ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿ ಸಲಹೆಯನ್ನು ನೀಡುವುದು ನಿಮ್ಮ ಕರ್ತವ್ಯ.    ನಾವು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.

ಕಾನೂನಿನ ಅರಿವಿರಲಿ

ಕಂದಾಯ ಇಲಾಖೆ ರಾಜ್ಯದ  ಸಂಪೂರ್ಣ ಭೂ ದಾಖಲೆಗಳ ನಿರ್ವಾಹಕರು.  ಜಮೀನಿನ ಹಕ್ಕು ಬದಲಾವಣೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ಇವೆ. ಮೇಲ್ಮಟ್ಟದ  ಅಧಿಕಾರಿಗಳಿಗೆ ಜಮೀನಿನ ಹಕ್ಕು ಬದಲಾವಣೆಯ ಕಾನೂನಿನ ಸಂಪೂರ್ಣ ಅರಿವಿದ್ದಾಗ ಮಾತ್ರ ಕೆಳಗಿನ ಹಂತದ ಅಧಿಕಾರಿ/ ನೌಕರರಿಗೆ ತಿಳಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಶೇ ೯೦ ರಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ.

ತಪ್ಪು ಮಾಡಿದವರಿಗೆ ಶೀಘ್ರವಾಗಿ ಶಿಕ್ಷೆಯಾಗಲಿ

ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದ ಅಧಿಕಾರಿ/ನೌಕರರಿಗೆ ಶಿಕ್ಷೆಯಾಗಬೇಕು.  ಶಿಸ್ತಿನ ವಿಚಾರಣೆ ಮೂರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದು ಕೊಳೆಯುತ್ತಿದ್ದರೆ ಸಣ್ಣ ತಪ್ಪು ಮಾಡಿದವರು ದೊಡ್ಡ ತಪ್ಪು ಮಾಡಲು ಆಸ್ಪದವಾಗುತ್ತದೆ.  ಪೊಲೀಸ್ ಇಲಾಖೆಯಲ್ಲಿ ಈ  ರೀತಿಯ ಪ್ರಕರಣಗಳು ಹೆಚ್ಚು.

ಸಿಬ್ಬಂದಿ ಸಮಸ್ಯೆ ಪರಿಹರಿಸಿ

ಸಹಾಯ ಮನೆಯಿಂದಲೇ  ಪ್ರಾರಂಭವಾಗುತ್ತದೆ ಎಂಬ ಆಂಗ್ಲ ನಾಣ್ನುಡಿಯಂತೆ  ಸಿಬ್ಬಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು. ಬಡ್ತಿ, ಕಾಲಮಿತಿ ಬಡ್ತಿ, ರಹಸ್ಯ ವರದಿ ಇಲ್ಲವೆಂದು ಅಥವಾ ಮತ್ತೇನಾದರೂ ನೆಪವೊಡ್ಡಿ ಅನಗತ್ಯವಾಗಿ ಮುಂದೂಡಬಾರದು.

ಅಧೀನ ಕಚೇರಿಗಳ ತಪಾಸಣೆಯಾಗಲಿ

ಶೇ ೨೦ ರಷ್ಟು ಅಧಿಕಾರಿಗಳು ಮಾತ್ರ ಅಧೀನ ಕಚೇರಿಗಳ ತಪಾಸಣೆ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಅಧೀನ ಕಚೇರಿಗಳ ತಪಾಸಣೆ ಮಾಡಿದಾಗ ಅಲ್ಲಿನ ಅಧಿಕಾರಿ/ನೌಕರರ ಕಾನೂನಿನ ಬಗ್ಗೆ ಇರುವ ಅರಿವು ಮತ್ತು ಅವರು ಮಾಡುತ್ತಿರುವ ತಪ್ಪುಗಳ ಬಗ್ಗೆ ತಿಳಿದು ಅವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು.

ಸಮಸ್ಯೆಗಳ ಪರಿಹಾರಕ್ಕೆ ಆಶ್ವಾಸನೆ

ಹೆಚ್ಚಿನ ಸಂಖ್ಯೆಯ ಕೆಎಎಸ್ ಅಧಿಕಾರಿಗಳು ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಶಿಸಿದ ಮುಖ್ಯ ಕಾರ್ಯದರ್ಶಿಗಳು ಅವರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.

ಸಮಾರಂಭದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಕಾರ್ಯದರ್ಶಿ ಶ್ರೀ ಕೆ.ಆರ್. ಶ್ರೀನಿವಾಸ, ಕರ್ನಾಟಕ ಆಡಳಿಯ ಸೇವೆಯ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀ ಎಸ್.ಆರ್. ವೆಂಕಟೇಶ್, ಕಾರ್ಯದರ್ಶಿ ಪಿ.ಕೆ.ಸುಬ್ಬಯ್ಯ ಹಾಗೂ ಹಲವಾರು ಕೆ.ಎ.ಎಸ್. ಅಧಿಕಾರಿಗಳು ಭಾಗವಹಿಸಿದ್ದರು.

ಸಾರಿಗೆ ಅದಾಲತ್

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) – ದಿನಾಂಕ ೨೧-೦೧-೨೦೧೦ ರಂದು ಮಧ್ಯಾಹ್ನ ೩.೦೦ ಗಂಟೆಗೆ ಪ್ರಾದೇಶಿಕ ಸಾರಿಗೆ ಕಚೇರಿ, ಕೆ.ಆರ್. ಪುರಂ, ಭಟ್ಟರಹಳ್ಳಿ, ಹಳೆ ಮದ್ರಾಸ್ ರಸ್ತೆ, ಬೆಂಗಳೂರು – ೪೯ ಆವರಣದಲ್ಲಿ ಸಾರಿಗೆ ಅದಾಲತ್‌ನ್ನು ಏರ್ಪಡಿಸಲಾಗಿದೆ.
ಈ ಕಚೇರಿ ವ್ಯಾಪ್ತಿಯ ಸಾರ್ವಜನಿಕರು ಸಾರಿಗೆ ಅದಾಲತ್ತ್‌ನಲ್ಲಿ ಭಾಗವಹಿಸಿ ಈ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ.

ಅರಣ್ಯ ಇಲಾಖೆ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ: ಮೆರಿಟ್ ಪಟ್ಟಿ ಪ್ರಕಟ

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) – ಅರಣ್ಯ ಇಲಾಖೆಯಲ್ಲಿ ಶೀಘ್ರಲಿಪಿಗಾರ, ದ್ವಿತೀಯ ದರ್ಜೆ ಸಹಾಯಕ ಹಾಗೂ ಬೆರಳಚ್ಚುಗಾರರ ಬ್ಯಾಕ್‌ಲಾಗ್ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಆಯಾ ಹುದ್ದೆವಾರು ಮೆರಿಟ್ ಪಟ್ಟಿ ಹಾಗೂ ತಿರಸ್ಕೃತ ಅರ್ಜಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.  ಈ ಪಟ್ಟಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ವೆಬ್‌ಸೈಟ್  http://www.karnatakaforest.gov.in  ನಲ್ಲಿ ಹಾಗೂ ಅರಣ್ಯ ಭವನ, ಮಲ್ಲೇಶ್ವರಂ  ಬೆಂಗಳೂರು ಮತ್ತು ರಾಜ್ಯದ ಎಲ್ಲಾ ವೃತ್ತಗಳ ಅರಣ್ಯ ಸಂರಕ್ಷಣಾಧಿಕಾರಿಗಳ (ಪ್ರಾದೇಶಿಕ) ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.

ಈ ಸಂಬಂಧ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಭ್ಯರ್ಥಿಗಳು ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಗಳನ್ನು ಅರಣ್ಯ ಸಂರಕ್ಷಣಾಧಿಕಾರಿ (ಕೇಂದ್ರಸ್ಥಾನ), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ೧ನೇ ಮಹಡಿ, ಅರಣ್ಯ ಭವ ನ, ೧೮ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು ಇವರಿಗೆ ಜನವರಿ ೨೮ ರೊಳಗೆ ಸಲ್ಲಿಸುವಂತೆ ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ರಾಜ್ಯ ಮಟ್ಟದ ಮಾಧ್ಯಮ ಮತ್ತು ಸಂಪರ್ಕ ಸಮಿತಿ
ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) –  ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಯೋಜನೆಗಳ ಪ್ರಸಾರ ಕಾರ್ಯಗತಗೊಳಿಗಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಮಾಧ್ಯಮ ಮತ್ತು ಸಂಪರ್ಕ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಸದಸ್ಯರ ವಿವರ ಕೆಳಗಿನಂತಿದೆ

ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ (ಅಲ್ಪಸಂಖ್ಯಾತರ ಇಲಾಖೆ) – ಅಧ್ಯಕ್ಷರು, ನಿರ್ದೇಶಕರು, ದೂರದರ್ಶನ ಕೇಂದ್ರ – ಸದಸ್ಯರು,  ನಿರ್ದೇಶಕರು, ಆಕಾಶ ವಾಣಿ – ಸದಸ್ಯರು   , ನಿರ್ದೇಶಕರು, ಡಿ.ಎ.ವಿ.ಪಿ –  ಸದಸ್ಯರು , ಪ್ರತಿನಿಧಿಗಳು, ವಾರ್ತಾ ಮತ್ತು ಪ್ರಚಾರ, ಭಾರತ ಸರ್ಕಾರ, ಬೆಂಗಳೂರು – ಸದಸ್ಯರು,  ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಕರ್ನಾಟಕ ಸರ್ಕಾರ – ಸದಸ್ಯರು,   ನಿರ್ದೇಶಕರು, ಅಲ್ಪಸಂಖ್ಯಾತರ ಇಲಾಖೆ – ಸದಸ್ಯರು,   ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ – ಸದಸ್ಯರು, ಕಾರ್ಯನಿರ್ವಾಹಣಾಧಿಕಾರಿ, ಕರ್ನಾಟಕ ರಾಜ್ಯ ಹಜ್ ಸಮಿತಿ – ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ – ಸದಸ್ಯರು, ನಿರ್ದೇಶಕರು, ಉರ್ದು ಮತ್ತು ಇತರೆ ಅಲ್ಪಸಂಖ್ಯಾತರ ಭಾಷಾ ಶಾಲೆಗಳ ನಿರ್ದೇಶನಾಲಯ – ಸದಸ್ಯರು, ನಿರ್ದೇಶಕರು, ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ – ಸದಸ್ಯರು, ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಲ್ಫಸಂಖ್ಯಾತರ ಆಯೋಗ – ಸದಸ್ಯರು, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ – ಸದಸ್ಯರು ಹಾಗೂ ಸರ್ಕಾರದ ಉಪ ಕಾರ್ಯದರ್ಶಿಗಳು, ಅಲ್ಫಸಂಖ್ಯಾತರ ಕಲ್ಯಾಣ ಇಲಾಖೆ – ಸಮಾವೇಶಕರಾಗಿರುತ್ತಾರೆ.

ಪರಿಷ್ಕೃತ ಕೀ ಉತ್ತರ  ಪ್ರಕಟ

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) –  ಕರ್ನಾಟಕ ಲೋಕಸೇವಾ ಆಯೋಗದಿಂದ             ದಿನಾಂಕ ೭-೧೧-೨೦೦೯ ಮತ್ತು ೮-೧೧-೨೦೦೯ ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಷ್ಕೃತ ಕೀ ಉತ್ತರ ಗಳನ್ನು ಆಯೋಗದ ಅಂತರ್ಜಾಲ ‘http://kpsc.kar.nic.in’  ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) –  ಕರ್ನಾಟಕ ಲೋಕಸೇವಾ ಆಯೋಗವು, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ೧೫೫ ಗ್ರಂಥಾಲಯ ಸಹಾಯಕರ ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ದಿನಾಂಕ ೧೩-೦೧-೨೦೧೦ ರಂದು ಪ್ರಕಟಿಸಿದ್ದು, ಸದರಿ ಅಧಿಸೂಚನೆಯನ್ನು ಆಯೋಗದ ಕೇಂದ್ರ ಕಚೇರಿ ಮತ್ತು ಮೈಸೂರು, ಬೆಳಗಾವಿ, ಗುಲ್ಗರ್ಗಾದ ಹಾಗೂ ಶಿವಮೊಗ್ಗ ಪ್ರಾಂತೀಯ ಕಚೇರಿಗಳ ಪ್ರಕಟಣಾ ಫಲಕಗಳಲ್ಲಿ ಮತ್ತು ಆಯೋಗದ ವೆಬ್ ಸೈಟ್ ‘http://kpsc.kar.nic.in’
ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

ಯಶೋಗಾಥೆಗಳ ಕ್ಯಾಲೆಂಡರ್
ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) –  ರಾಜ್ಯ ತೋಟಗಾರಿಕೆ ಇಲಾಖೆಯು ’ರಾಷ್ಟ್ರೀಯ ತೋಟಗಾರಿಕಾ ಮಿಷನ್’ನಡಿ ಮುಂಚೂಣಿಯಲ್ಲಿರುವ ರಾಜ್ಯ ಇದೀಗ ತೋಟಗಾರಿಕೆ ಮಿಷನ್‌ನ ಯಶೋಗಾಧೆಗಳನ್ನು ಬಿಂಬಿಸುವ ಕ್ಯಾಲೆಂಡ್ ಬಿಡುಗಡೆಮಾಡುವ ಮೂಲಕ ಸಾಧನೆಗೆ ಕನ್ನಡಿ ಹಿಡಿದಿದೆ.

ಈ ಕ್ಯಾಲೆಂಡರನ್ನು ತೋಟಗಾರಿಕೆ ಮತ್ತು ಬಂದೀಖಾನೆ  ಸಚಿವ ಶ್ರೀ ಉಮೇಶ್ ಕತ್ತಿ ಅವರು ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶ್ರೀ ಎಸ್. ಜಿ. ಹೆಗಡೆ, ನಿರ್ದೇಶಕ ಶ್ರೀ ಎನ್. ಜಯರಾಂ ಮೊದಲಾದವರು ಉಪಸ್ಥಿತರಿದ್ದರು. (ಇದಕ್ಕೆ ಸಂಬಂಧಿಸಿದ ಚಿತ್ರವನ್ನು ಇ-ಮೇಲ್ ಮಾಡಲಾಗಿದೆ)

ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) –  ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ಪರಿಶಿಷ್ಟ ಜಾತಿ/ವರ್ಗದ ಬಿ.ಇ.ಡಿ. ವಿದ್ಯಾರ್ಥಿಗಳಿಂದ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಗರದ ಸರ್ಕಾರಿ ವರ್ಗೀಕೃತ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ವಾಜರಹಳ್ಳಿಯ ಪರಿಶಿಷ್ಟ ವರ್ಗದ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾವಕಾಶವಿದೆ.  ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ಕಾಲೇಜುಗಳಲ್ಲಿ ಅಭ್ಯಾಸಮಾಡುವ ವಿದ್ಯಾರ್ಥಿಗಳು ಅರ್ಜಿಗಳನ್ನು ಸಂಬಂಧಪಟ್ಟ ನಿಲಯದ ಮೇಲ್ವಾಚಾರಕರಿಂದ ಅಥವಾ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಬೆಂಗಳೂರು ದಕ್ಷಿಣ ತಾಲ್ಲೂಕು, ಬನಶಂಕರಿ ಇವರಿಂದ ಪಡೆದು, ಭರ್ತಿಮಾಡಿ, ಎಲ್ಲ ದಾಖಲೆಗಳೊಂದಿಗೆ ಜನವರಿ ೨೫ ರೊಳಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತುಮಕೂರಿನಲ್ಲಿ ಕೈಗಾರಿಕಾ ಅದಾಲತ್

ಬೆಂಗಳೂರು, ಜ ೧೬ (ಕರ್ನಾಟಕ ವಾರ್ತೆ) –  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ಇವರ ನೇತೃತ್ವದಲ್ಲಿ ಬೆಂಗಳೂರು  ವಿಭಾಗ ಮಟ್ಟದ ಉದ್ದಿಮೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ೨೭-೦೧-೨೦೧೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗುಬ್ಬಿ ವೀರಣ್ಣ ರಂಗ ಮಂದಿರ, ಖಾಸಗಿ ನಿಲ್ದಾಣದ ಸಮೀಪ, ತುಮಕೂರು ಇಲ್ಲಿ ಏರ್ಪಡಿಸಲಾಗಿದೆ.

ಉದ್ದಿಮೆಗಳ ಅಭಿವೃದ್ಧಿಗೆ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಸಂಬಂಧಪಟ್ಟ ಇಲಾಖೆಗಳ/ನಿಗಮ/ಮಂಡಳಿಗಳ ಅಧಿಕಾರಿಗಳೊಂದಿಗೆ ಈ ಅದಾಲತ್ತನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉದ್ದಿಮೆದಾರರು ತಮ್ಮ ಕೈಗಾರಿಕಾ ಘಟಕಗಳ ಸಮಸ್ಯೆಗಳ ಕುರಿತು ಸಂಪೂರ್ಣ ವಿವರಗಳನ್ನು ಲಿಖಿತ ರೂಪದಲ್ಲಿ ದಿನಾಂಕ ೨೦-೦೧-೨೦೧೦ ರ ಸಾಯಂಕಾಲ ೫.೦೦ ಗಂಟೆಯೊಳಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜಾಜಿನಗರ ಕೈಗಾರಿಕಾ ವಸಾಹತು, ವೆಸ್ಟ್ ಆಫ್ ಕಾರ್ಡ್ ರಸ್ತೆ, ಬೆಂಗಳೂರು – ೫೬೦ ೦೪೪ ವಿಳಾಸಕ್ಕೆ ಅಂಚೆಯ ಮೂಲಕ/ಖುದ್ದಾಗಿ ಅಥವಾ ಫ್ಯಾಕ್ಸ್/ ಇ-ಮೇಲ್ (ಪ್ಯಾಕ್ಸ್ -೦೮೦-೨೩೧೪೫೨೧೬, ಇ-ಮೇಲ್  jd-bang-r@karnatakaindustry.gov.in) ಮುಖಾಂತರ ಕಳುಹಿಸಲು ಕೋರಿದೆ.  ಕೈಗಾರಿಕೋದ್ಯಮಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಂಡು , ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ವಿನಂತಿಸಿದ್ದಾರೆ.

BUS RAPID TRANSIT

ಜನವರಿ 18, 2010

Bus Rapid Transit (BRT)/ High Capacity Bus System (HCBS) is a high quality, ultra modern, customer oriented transit option that could deliver fast, comfortable and cost-effective urban mobility, quite similar to Metro rail. BRT incorporates most of the high-quality aspects of metro systems without high investments. BRT was developed as a viable transit option in Latin America, where urban planners were seeking cost effective solution for the urban transport dilemma. This highly effective and economical mass transit option is now a way of life in many developing as well as developed countries such as : China, Taiwan, Brazil, Columbia, Ecuador, Japan, United States of America, Australia, New Zealand, England, France, etc.
BRT is an integrated system of facilities, equipment, services, and amenities that improves the speed, reliability, and identity of bus transit. BRTS is globally recognized as one of the most cost effective solutions for providing high quality public transport service in urban areas. The BRTS is operational in the world’s major cities like Mexico City, Sao Paulo, Bogotá, Santiago and also Beijing, Taipei and Hanoi, where it has proved a hit with the masses.

Why BRT?
•    Urgent need for efficient mass transport system.
•    Scope for both low density and high density passenger movement.
•    Low cost transit solution.
•    Less time for planning & construction, more flexibility.
•    Higher speed with little delay for buses.
•    Vital component of overall transport plan for the city.
•    Wider reach.
•    Can be operated according to the city ethos .
•    Scope for public private synergy.
•    Environment friendly.
MAIN FEATURES OF BRTS:
•    Dedicated (bus-only) running ways (preferably, physically separated from other traffic)
•    Accessible, safe, secure, and attractive stations
•    Easy-to-board, attractive, and environmentally friendly vehicles
•    Efficient (preferably off-board) fare collection
•    Its applications to provide real-time passenger information, signal priority, and service command/control
•    Frequent, all-day service
•    At-grade bus lanes preferred for increasing commuter access, operational flexibility and reducing costs
•    Priority for buses at intersections
•    Urban / low floor buses
•    Properly designed bus shelters for efficient & safe boarding / alighting
•    Pedestrian facilities for ‘along’ & ‘across’ movements
•    Inter-modal integration through the single ticketing for seamless travel.
ADVANTAGES OF INTRODUCING BRTS :
•    Most flexible rapid transit mode for cost-effectively serving the broad variety of urban and suburban environments and markets.
•    It suits to all section of the society by its classy service.
•    Reduction in road accidents as Latin American experience suggest that 50 to 80 %  accidents came down.
•    Can operate on arterial streets, in freeway medians, on freeway shoulders and alongside freeways
•    Can accommodate express and local services on a single facility
•    Can be less costly to implement than a rail transit line while providing similar benefits
•    Has little additional implementation costs over local bus service where it runs on streets and highways
•    Can be effectively integrated into surrounding environment and can generate significant urban development benefits
•    It is energy efficient (20 to 30 % fuel saving)    and environment friendly as it reduces congestions in the area.
•    Even it has got self financing abilities because of good revenue model.
•    It can speed up the city traffic as dedicated lane operations double up the speed.
BRT can handle passenger flows in the range of about 8,000 to 20,000 passengers per hour per direction – depending upon the lanes (number, type) dedicated to bus system. In Bogota (Columbia) – with provision of 2 bus lanes throughout for each direction, exclusive ROW, restriction on crossing traffic, state of art station design with automated gates and extensive usage of IT systems in passenger information, ticketing and operation of buses – upto 42,000 phpdt capacity has been reported.
The segregation of non-motorised modes will reduce the friction between slow and fast moving vehicles and improve the efficiency as well as safety of all road users. Separate pedestrian paths duly segregated with the help of guard rails and disabled friendly ramps will encourage pedestrians to walk on footpath.
The overall objective of the planning of BRT System is to ensure that commuters are discouraged to use personalized modes and shift to public transport with a better bus transport system being made available along the Corridor.
DIS ADVANTAGES OF INTRODUCING BRTS:
•    Impacts due to project location, construction works & project operation.
•    Loss of Trees.
DESIGN OF A BRT STATION:
Integration of a BRT system in an urban setting presents within itself a challenge and an opportunity to improve and enrich the existing streetscapes. Design such as a shelter is to support an appealing, cohesive visual identity for a quality and safe transit service. Some of the important design features are
•    Modularity for easy expansion and relocation
•    Passenger holding area based on Boarding-Alighting demand
•    Electronic Passenger Information System
•    Safety
•    Accessible to disabled
•    Sufficient Advertising space- for additional revenue generation
•    Climate responsive
If BRT station is at the junction then many buses cannot utilize green signal since earlier bus blocks the bus bay because it is waiting at the red signal. Results in long queues and bunching of buses and slows down the BRT system may result in unwanted pedestrian behavior wishing to reach bus stop.
FAILIURE OF DELHI, PUNE- BRTS :
•    One of the main reasons for the failure of the Delhi BRT was that it did not take the people along with it.
•    A very limited route of  BRT or we can say sample size is too small.
•    Other buses also ply on the BRT stretch, creating confusion for passengers regarding bus routes and resulting in chaos at the stations.
BRT SYSTEM – AHMEDABAD
With the launch of BRTS at Ahmadabad, the city now gets around 25 BRTS buses plying on a 12.5 km stretch from RTO to Chandra Nagar of the total 55 km of phase one. This is the first such full fledged BRTS project in the country because similar projects in Delhi and Pune do not carry systems like control room, IT infrastructure, dedicated buses, etc. The Delhi BRT, rather, is primarily a road infrastructure project or high-capacity bus service in which all types of buses  run in a lane designed for the BRTS.

BRT SYSTEM ON ORR- BANGALORE – FROM HEBBAL TO SILK BOARD JUNCTION.
The  Comprehensive Transport and Traffic Plan for Bangalore suggests that BRT can be done for  291.5 km at a cost of 3498 Crores in two phases in 14 Corridors.
The proposal is to develop BRT System on the ORR as a Pilot Project. The bus system would have a dedicated corridor and operate new technology buses designed for urban environment. .  Some of the salient features of proposed BRT include
•    Open BRT system with central / median bus lanes
•    Bus routes to have flexibility to join/leave the BRT corridor at any intersection
•    Bus stops at approach arms of intersections for improved commuter access (reduced walking distances) and, utilising ‘red time’ at intersections. Some bust stops also proposed at midblock locations with high bus passenger catchment
•    All public transport buses to use BRT corridor
•    Redesign of road cross-section by utilizing additional median width and undeveloped shoulders
•    Increased overall road width and capacity, 3 MV lanes retained with additional proposed 1 bus lane + 1 NMV lane for either direction.
•    Additional 1 MV and 1 bus lane at most intersections
•    Cross pedestrian facilities through at-grade signaled crossings for user-friendliness
•    Physical segregation of bus, NMV and MV lanes.
•    Existing central median to be largely kept undisturbed in order to save on utility shifting, tree cutting and ease of construction
•    Existing service roads retained
•    Integration with existing infrastructure projects viz. flyovers, underpasses etc.
•    Flexible pavement for complete cross section
•    On street parking not desirable on any part of RoW.
Bangalore needs such system to reduce the congestion and speed up the traffic as BRT with use of ITS give a leading edge as transporter is always in control and passenger will be in focus in real time.

Traffic control ,Traffic information and Fleet management can be very easy for the benefit of transport company and as well as public. It is a win win situation for the Public as well Authorities.

ಕನ್ನಡದ ಹಿರಿಯ ಚಿತ್ರನಟ ಕೆ.ಎಸ್.ಅಶ್ವತ್ಥ್ ಇನ್ನಿಲ್ಲ

ಜನವರಿ 18, 2010

ಮೈಸೂರು, ಜ.೧೮ (ಕರ್ನಾಟಕ ವಾರ್ತೆ): ಕನ್ನಡ ಚಿತ್ರರಂಗದ ಹಿರಿಯ ಹಾಗೂ ಪ್ರತಿಭಾವಂತ ನಟ ಶ್ರೀ ಕೆ.ಎಸ್.ಅಶ್ವತ್ಥ್ ಇಂದು ಬೆಳಗಿನ ಜಾವ ಸುಮಾರು ೦೨:೦೦ ಗಂಟೆಯಲ್ಲಿ ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದು ಮೈಸೂರಿನ ಬಸಪ್ಪ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು ೮೫ ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇರುವ ಹರೀಶ್ಚಂದ್ರ ಘಾಟ್‌ನಲ್ಲಿ ನಡೆಯಲಿದೆ.
ಮುಖ್ಯಮಂತ್ರಿಗಳ ಶೋಕ
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಪ್ರತಿಭಾವಂತ ನಟ ಶ್ರೀ ಕೆ.ಎಸ್.ಅಶ್ವತ್ಥ್ ಅವರ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ತೀವ್ರ ಕಂಬನಿ ಮಿಡಿದಿದ್ದಾರೆ. ಶ್ರೀ ಕೆ.ಎಸ್.ಅಶ್ವತ್ಥ್ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ಕಷ್ಟವನ್ನು ತಂದೊಡ್ಡಿದೆ. ಒಬ್ಬ ಪ್ರತಿಭಾವಂತ ನಟನ ಕಣ್ಮರೆಯಿಂದ ಇಂದು ಕನ್ನಡ ಚಿತ್ರರಂಗ ತೀವ್ರ ಬಡವಾಯಿತು ಎಂದು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಪ್ರತಿಭಾವಂತ ನಟ ಶ್ರೀ ಕೆ.ಎಸ್.ಅಶ್ವತ್ಥ್ ಅವರ ನಿಧನಕ್ಕೆ ಕರ್ನಾಟಕದ ವಾರ್ತಾ ಸಚಿವ ಶ್ರೀ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕನ್ಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಶ್ರೀ ಬಿ.ಆರ್.ಜಯರಾಮರಾಜೇ ಅರಸ್, ವಾರ್ತಾ ಇಲಾಖೆ ನಿರ್ದೇಶಕ ಶ್ರೀ ಎನ್.ಆರ್.ವಿಶುಕುಮಾರ್ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.

ಅಶ್ವತ್ಥ್, ಕೆ ಎಸ್ : ವ್ಯಕ್ತಿ ಪರಿಚಯ

(೧೯೨೫-೨೦೧೦). ಸುಮಾರು ಐದು ದಶಕಗಳ ಅವಧಿಯಲ್ಲಿ ೩೫೦ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಜನಪ್ರಿಯ ನಟ. ಶಿಸ್ತು, ಸಮಯಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರ ನಿರ್ಮಾಣವಲಯದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾದ ವ್ಯಕ್ತಿ ಅಶ್ವತ್ಥ್. ಅವರ ಹಿರಿಯರು ಹೊಳೆನರಸೀಪುರ ತಾಲ್ಲೂಕಿನ ಕರಗದಹಳ್ಳಿಯವರು. ತಂದೆ ಸುಬ್ಬರಾಯರು. ಮಾರ್ಚ್ ೨೫, ೧೯೨೫ರಲ್ಲಿ ಜನನ. ಮೊದಲ ಹೆಸರು ಅಶ್ವತ್ಥನಾರಾಯಣ. ಚಿತ್ರರಂಗಕ್ಕೆ ಬಂದ ನಂತರ ನಾರಾಯಣ ಕಳಚಿಕೊಂಡಿತು. ಓದಿದ್ದು ಇಂಟರ್‌ಮೀಡಿಯಟ್‌ವರೆಗೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಹಭಾಗಿ, ಆಹಾರ ಇಲಾಖೆಯಲ್ಲಿ ನೌಕರಿ(೧೯೪೪), ನಾಟಕದ ಗೀಳು, ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ದುಡಿಮೆ; ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್. ವಾಮನರಾಯರಿಂದ ಅಭಿನಯದಲ್ಲಿ ತರಬೇತಿ ಪಡೆಯುವ ಅವಕಾಶ ಲಭ್ಯ. ಅಶ್ವತ್ಥ್ ಅವರಿಗೆ ಚಲನಚಿತ್ರ ಸೇರಬೇಕೆಂಬ ಕಲ್ಪನೆಯೇ ಇರಲಿಲ್ಲ. ಅವಕಾಶ ಅದಾಗಿಯೇ ಬಂದಿತು. ನಾಟಕದಲ್ಲಿನ ಇವರ ಅಭಿನಯ ನೋಡಿ ಮೆಚ್ಚಿದ ಹಿರಿಯ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಆಹ್ವಾನ. ಮೈಸೂರಿನ ಪ್ರಿಮಿಯರ್‌ನಲ್ಲಿ ತಯಾರಾದ, ಭಾಗಶಃ ವರ್ಣದಲ್ಲಿ ಚಿತ್ರಣವಾದ ‘ಸ್ತ್ರೀ ರತ್ನ’(೧೯೫೫) ಚಿತ್ರದಲ್ಲಿ ನಾಯಕ.
‘ಸ್ತ್ರೀ ರತ್ನ’ ಚಿತ್ರದ ನಂತರ, ಚಿತ್ರರಂಗದಲ್ಲೆ ಮುಂದುವರೆಯುವ ನಿರ್ಧಾರ. ಆದರೆ ಆ ಅವಧಿಯಲ್ಲಿ ಕನ್ನಡ ಚಿತ್ರ ನಿರ್ಮಾಣ ಚಟುವಟಿಕೆ ಮಂದಗತಿಯಲ್ಲಿ ಸಾಗಿತ್ತು. ಆದರೂ ಚಿತ್ರರಂಗದ ಅಭಿನಯವನ್ನೇ ವೃತ್ತಿಯಾಗಿ ಸ್ವೀಕರಿಸಲು ಸಂಕಲ್ಪಿಸಿದ್ದ ಅಶ್ವತ್ಥ್, ಆಗ ಕನ್ನಡ ಚಿತ್ರ ನಿರ್ಮಾಣದ ಕೇಂದ್ರವಾಗಿದ್ದ ಮದರಾಸಿನಲ್ಲೇ ನೆಲೆಸಲು ನಿರ್ಧರಿಸಿದರು. ನಾಯಕ ಪಾತ್ರಗಳಿಂದ ಸರಿದು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಸಂಕಲ್ಪ ಮಾಡಿದರು (೧೯೬೦). ಈ ನಿರ್ಧಾರವೂ ಯೋಗ್ಯವಾದುದೇ. ಇದರಿಂದ ಅವರ ಬಹುಮುಖ ಪ್ರತಿಭೆಯು ಪ್ರಕಾಶಕ್ಕೆ ಮುಕ್ತ ಅವಕಾಶ ದೊರೆಯಿತು. ಆರಂಭದದಿನಗಳಲ್ಲಿ ತಯಾರಾಗುತ್ತಿದ್ದದು ಹೆಚ್ಚಾಗಿ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳು. ಪೌರಾಣಿಕ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಾರದನ ಪಾತ್ರಗಳು ಅರಸಿ ಬಂದವು. ‘ಮಹಿಷಾಸುರ ಮರ್ದಿನಿ’, ‘ಸ್ವರ್ಣಗೌರಿ’, ‘ಭಕ್ತ ಪ್ರಹ್ಲಾದ’, ‘ದಶಾವತಾರ’, ‘ನಾಗಾರ್ಜುನ’-ಇವೇ ಮೊದಲಾದ ಚಿತ್ರಗಳಲ್ಲಿ ಅಶ್ವತ್ಥ್ ಅವರ ನಾರದನ ಪಾತ್ರ ಜನಮೆಚ್ಚುಗೆ ಪಡೆಯಿತು.

ಅಶ್ವತ್ಥ್ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ; ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜನರಿಗೆ ಅಪ್ತವಾದುದು ತಂದೆಯ ಪಾತ್ರ; ಮನೆಯ ಹಿರಿಯಣ್ಣನ ಪಾತ್ರ, ‘ಗಾಳಿಗೋಪುರ’ ಚಿತ್ರದಿಂದ ಶಾಶ್ವತವಾಗಿ ಪ್ರಧಾನ ಪೋಷಕ ಪಾತ್ರಗಳಿಗೆ ಆಯ್ಕೆ. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಸ್ಟ್ರು, ಮಕ್ಕಳಿಲ್ಲದ ಮೇಸ್ಟ್ರು. ತಾನು ಅತಿಯಾಗಿ ಪ್ರೀತಿಸುವ ತಂಟೆಕೋರ ವಿದ್ಯಾರ್ಥಿ. ಇವರಿಬ್ಬರ ನಡುವಣ ಮಾನವೀಯ ಸಂಬಂಧಗಳು, ಸಮಸ್ಯೆಗಳು, ದುರಂತದಲ್ಲಿ ಕೊನೆಗೊಳ್ಳುವ ಈ ಚಿತ್ರದಲ್ಲಿ ಮನಮಿಡಿಯುವಂತಹ ಅಭಿನಯ. ‘ಕಸ್ತೂರಿ ನಿವಾಸ’ದ ನಿಷ್ಠಾವಂತ ಸೇವಕ ರಾಮಯ್ಯ, ‘ಮಗ ಮೊಮ್ಮಗ’, ‘ತಂದೆ-ಮಕ್ಕಳು’ ಚಿತ್ರದಲ್ಲಿ ತಂದೆಯಾಗಿ ನೀಡಿರುವ ಮನ ಮುಟ್ಟುವ ಅಭಿನಯ. ‘ಸರ್ವಮಂಗಳ’ ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರ, ಅಶ್ವತ್ಥ್ ಅವರ ಅಪ್ರತಿಮ ಪ್ರತಿಭೆಯ, ಭಾವಪೂರ್ಣ ಅಭಿನಯಕ್ಕೆ ಇವು ಕೆಲವು ನಿದರ್ಶನಗಳು. ಕುಟುಂಬದ ಯಜಮಾನ, ಒಲವಿನ ಸೋದರ, ತಂದೆ ಮೊದಲಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಹಾಸ್ಯ ಪಾತ್ರಗಳಲ್ಲೂ ಖಳನಾಯಕನ ಪಾತ್ರಗಳಲ್ಲೂ ಅವರು ಸಹಜವಾಗಿ ಅಭಿನಯಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿ ಚೊಕ್ಕ ಅಭಿನಯ ಇದು ಅವರ ಹಿರಿಮೆ. ಪ್ರಧಾನ ಪೋಷಕ ಚಿತ್ರಗಳಲ್ಲಿ ಅಶ್ವತ್ಥ-ಪಂಢರಿಬಾಯಿ ಜೋಡಿ ಅತ್ಯಂತ ಜನಪ್ರಿಯ.
‘ನಮ್ಮ ಮಕ್ಕಳು’, ‘ನಾಗರಹಾವು’, ‘ಮುತ್ತಿನಹಾರ’ ಚಿತ್ರಗಳ ಅಭಿನಯಕ್ಕಾಗಿ ‘ಶ್ರೇಷ್ಠ ಪೋಷಕ ನಟ’ರಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಅಭಿನಯ, ಗಾಯನದಿಂದ ಕನ್ನಡ ಚಲನ ಚಿತ್ರೋದ್ಯಮಕ್ಕೆ ಘನತೆ, ಸ್ಥಿರತೆ ತಂದ ಡಾ.ರಾಜಕುಮಾರ್ ಹೆಸರಿನಲ್ಲಿ ಸರಕಾರ ಚಲನಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿದವರಿಗೆ ೧೯೯೩-೯೪ನೇ ಸಾಲಿನಿಂದ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ನಟ-ಕೆ.ಎಸ್. ಅಶ್ವತ್ಥ್.
೧೯೯೫ರಲ್ಲಿ ಅಶ್ವತ್ಥ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಅದು ಅವರ ಅಭಿಮಾನಿ ಪ್ರೇಕ್ಷಕರಿಗೆ ಅಘಾತವಾಗಿತ್ತು. ಆದರೆ ‘ಶಬ್ದವೇಧಿ’ ಚಿತ್ರದ ಮೂಲಕ ಅವರ ಪುನರಾಗಮನವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು.

Hello world!

ಜನವರಿ 13, 2010

Welcome to WordPress.com. This is your first post. Edit or delete it and start blogging!